ನವದೆಹಲಿ: ಗಲ್ಲಿ ಕ್ರಿಕೆಟ್ಗೆ ಸಂಸ್ಕೃತದಲ್ಲಿ ಕಮೆಂಟರಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದು ಮಾಡುತ್ತಿದೆ. ಈ ವಿಡಿಯೋ ಪ್ರಧಾನಿ ನರೇಂದ್ರ ಮೋದಿ ಅವರ ಗಮನವನ್ನೂ ಸೆಳೆದಿದೆ. ಸಂಸ್ಕೃತ ಕಮಂಟರಿಯ ವಿಡಿಯೋ ತುಣುಕನ್ನು ಪ್ರಧಾನಿ ತಮ್ಮ ಟ್ವಿಟರ್ ಖಾತೆಯಲ್ಲಿ ಮರುಟ್ವೀಟ್ ಮಾಡಿದ್ದಾರೆ.
ಇಬ್ಬರು ಹುಡುಗರು ಕ್ರಿಕೆಟ್ ಆಡುತ್ತಿದ್ದಾಗ ವ್ಯಕ್ತಿಯೊಬ್ಬರು ಸಂಸ್ಕೃತದಲ್ಲಿ ಕಮೆಂಟರಿ ಹೇಳಿದ್ದಾರೆ. ಪಂದ್ಯ ರೋಚಕತೆಯನ್ನು ಸಂಸ್ಕೃತದಲ್ಲಿ ತುಂಬಾ ಸರಳವಾಗಿ ಆ ವ್ಯಕ್ತಿ ವಿವರಿಸಿದ್ದಾರೆ. ಅಲ್ಲದೇ, ಮಹಡಿ ಮೇಲೆ ಇಬ್ಬರು ಮಹಿಳೆಯರು ನಿಂತು ಕ್ರಿಕೆಟ್ ನೋಡುತ್ತಿದ್ದು, ಅವರನ್ನೂ ಸಂಸ್ಕೃತದಲ್ಲಿ ಮಾತನಾಡಿಸಲಾಗಿದೆ.
-
This is heartening to see…Congrats to those undertaking this effort.
— Narendra Modi (@narendramodi) October 4, 2022 " class="align-text-top noRightClick twitterSection" data="
During one of the #MannKiBaat programmes last year I had shared a similar effort in Kashi. Sharing that as well. https://t.co/bEmz0u4XvO https://t.co/A2ZdclTTR7
">This is heartening to see…Congrats to those undertaking this effort.
— Narendra Modi (@narendramodi) October 4, 2022
During one of the #MannKiBaat programmes last year I had shared a similar effort in Kashi. Sharing that as well. https://t.co/bEmz0u4XvO https://t.co/A2ZdclTTR7This is heartening to see…Congrats to those undertaking this effort.
— Narendra Modi (@narendramodi) October 4, 2022
During one of the #MannKiBaat programmes last year I had shared a similar effort in Kashi. Sharing that as well. https://t.co/bEmz0u4XvO https://t.co/A2ZdclTTR7
ಸಂಸ್ಕೃತದ ಕಮೆಂಟರಿ ಮಧ್ಯೆ ಬೆಂಗಳೂರಿನ ಗಲ್ಲಿಯಲ್ಲಿ ನಡೆಯುತ್ತಿರುವ ಗಲ್ಲಿ ಕ್ರಿಕೆಟ್ ಎಂದೂ ಆ ವ್ಯಕ್ತಿ ಹೇಳಿರುವುದನ್ನೂ ಸಹ ವಿಡಿಯೋದಲ್ಲಿ ಕೇಳಬಹುದಾಗಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಪಟ್ಟೆ ವೈರಲ್ ಆಗಿದೆ.
ಇದೀಗ ಈ ವಿಡಿಯೋವನ್ನು ಮರು ಟ್ವೀಟ್ ಮಾಡಿರುವ ಪ್ರಧಾನಿ, ಇದನ್ನು ನೋಡಲು ಹೃದಯಸ್ಪರ್ಶಿಯಾಗಿದೆ... ಈ ಪ್ರಯತ್ನವನ್ನು ಕೈಗೊಂಡವರಿಗೆ ಅಭಿನಂದನೆಗಳು ಎಂದು ಶ್ಲಾಘಿಸಿದ್ದಾರೆ. ಅಲ್ಲದೇ, ಈ ಹಿಂದೆ ನನ್ನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಇಂತಹದ್ದೇ ಒಂದು ಪ್ರಯತ್ನವನ್ನು ಹಂಚಿಕೊಂಡಿದ್ದೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಗಲ್ಲಿ ಕ್ರಿಕೆಟ್ನ ಸಂಸ್ಕೃತ ಕಮೆಂಟರಿಗೆ ನೆಟ್ಟಿಗರು ಫಿದಾ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ