ETV Bharat / bharat

ಬೆಲೆ ಏರಿಕೆಯಿಂದ ಕಂಗಾಲಾದ ಜನ.. ಮೋದಿಗೆ ₹18,000 ಕೋಟಿ ವಿಮಾನ.. ಸಂಜಯ್​ ರಾವತ್​ ಕಿಡಿ

18,000 ಕೋಟಿ ಮೌಲ್ಯದ ಖಾಸಗಿ ವಿಮಾನವನ್ನು ಪ್ರಧಾನಿಗಾಗಿ ಖರೀದಿಸುತ್ತಾರೆ. ಆದರೂ ಜನರು ಬೆಲೆ ಏರಿಕೆಯಿಂದ ಸಿಲಿಂಡರ್​ ತುಂಬಿಸಲು ಹಣವಿಲ್ಲದೇ ಕಂಗಾಲಾಗಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್​ ರಾವತ್​ ತೀವ್ರ ವಾಗ್ದಾಳಿ ನಡೆಸಿದ್ದಾರೆ..

Sanjay raut attack on Modi Government on Inflation
ಸಂಜಯ್​ ರಾವತ್​ ಕಿಡಿ
author img

By

Published : Oct 31, 2021, 4:40 PM IST

ಮುಂಬೈ : ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ದೇಶಾದ್ಯಂತ ಉಚಿತವಾಗಿ ಕೊರೊನಾ ಲಸಿಕೆ ನೀಡಿದ್ದರಿಂದ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ. ಅಂದರೆ ಉಚಿತ ವ್ಯಾಕ್ಸಿನ್​​ನ ಹೊರೆ ಅಂತಿಮವಾಗಿ ಜನರ ಮೇಲೆಯೇ ಬೀಳುತ್ತಿದೆ. ಹಾಗಾದರೆ, ನೀವು ಯಾರ ಹಣದಿಂದ ಉಚಿತ ವ್ಯಾಕ್ಸಿನೇಷನ್‌ಗಳನ್ನು ಪ್ರಚಾರ ಮಾಡ್ತಿದ್ದೀರಿ ಮತ್ತು ಏಕೆ? ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ತಮ್ಮ ಸಾಮ್ನಾದ ಇಂದಿನ ಲೇಖನದಲ್ಲಿ ಇಂತಹ ದೊಡ್ಡ ಪ್ರಶ್ನೆಯನ್ನು ಎತ್ತಿದ್ದಾರೆ.

ಗಾಯದ ಮೇಲೆ ಉಪ್ಪು ಸವರಬೇಡಿ : 'ನಿಜವಾಗಿಯೂ ಇಂದು ಸಂಭ್ರಮಿಸುವ ವಾತಾವರಣವಿದೆಯೇ? ಇಂತಹ ಪ್ರಶ್ನೆಯನ್ನು ಮುಂದಿಟ್ಟುಕೊಂಡು ರಾವತ್ ಭಾರತೀಯ ಜನತಾ ಪಕ್ಷವನ್ನು ಕಟುವಾಗಿ ಟೀಕಿಸಿದ್ದಾರೆ. ಇಂದು, ಹಣ ದುಬ್ಬರದ ಅಬ್ಬರವು ಹಬ್ಬಗಳ ಸಂಭ್ರಮಕ್ಕೆ ಕೊಳ್ಳಿ ಇಟ್ಟಿದೆ. ಅಧಿಕಾರಿಗಳ ಉದ್ಧಟತನದ ಹೇಳಿಕೆಗಳಿಂದ ಆ ಬೆಂಕಿ ಹೆಚ್ಚಾಗಿದೆ. ಹಣ ದುಬ್ಬರವು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಇದನ್ನು ಕಡಿಮೆ ಮಾಡಲು ಸಾಧ್ಯವಾಗದಿದ್ದರೆ ಗುಳೆ ಹೋಗುವ ಜನಸಾಮಾನ್ಯರ ಗಾಯದ ಮೇಲೆ ಉಪ್ಪು ಸವರಬೇಡಿ ಎಂದು ಮೋದಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

'ಜನರ ಮೇಲಿನ ಹಣದುಬ್ಬರದ ಹೊರೆಯಲ್ಲಿ ಪ್ರಧಾನಿ ಹೊಸ ನಿವಾಸ': 18,000 ಕೋಟಿ ಮೌಲ್ಯದ ಖಾಸಗಿ ವಿಮಾನವನ್ನು ಪ್ರಧಾನಿಗಾಗಿ ಖರೀದಿಸುತ್ತಾರೆ. ಮತ್ತೊಂದೆಡೆ, ಸಾರ್ವಜನಿಕರು ಗ್ಯಾಸ್ ಸಿಲಿಂಡರ್ ಖರೀದಿಸಲು ಸಾಧ್ಯವಾಗದ ಕಾರಣ, ಅವರು ಸಿಲಿಂಡರ್‌ಗಳ ಬಳಕೆ ನಿಲ್ಲಿಸಿದ್ದಾರೆ. 18,000 ಕೋಟಿ ರೂ.ಗಳ ಖಾಸಗಿ ಜೆಟ್ ಖರೀದಿಗೆ ಬೆಂಕಿ ಕಡ್ಡಿ, ಖಾದ್ಯ ತೈಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಸಂಬಂಧ ಕಲ್ಪಿಸಬಾರದು.

ಪ್ರಧಾನಿಯವರ ಅನುಕೂಲಕ್ಕಾಗಿ ಇಂತಹ ವಿಮಾನವನ್ನು ಹೊಂದುವುದು ಅಗತ್ಯವಾಗಿದೆ. ಆದರೆ, ಬೆಂಕಿಕಡ್ಡಿಗಳು, ಎಣ್ಣೆ, ಉದ್ಯೋಗಗಳು, ಸಂಬಳಗಳು ಜನರ 'ಸರಪಳಿ'ಯಾಗಿ ಮಾರ್ಪಟ್ಟಿವೆ. ಅದರ ಬಗ್ಗೆ ಏನಂತೀರಿ? ಈ ಪ್ರಶ್ನೆಯನ್ನು ಸಂಜಯ್ ರಾವತ್ ಅವರು ಸರ್ಕಾರಕ್ಕೆ ಕೇಳಿದ್ದಾರೆ. ದೆಹಲಿಯಲ್ಲಿ 20 ಲಕ್ಷ ಕೋಟಿ ವೆಚ್ಚದಲ್ಲಿ 'ಸೆಂಟ್ರಲ್ ವಿಸ್ಟಾ' ಯೋಜನೆ ಆರಂಭಿಸಿಲಾಗಿದೆ.

ಇದಕ್ಕಾಗಿ ದೆಹಲಿಯ ವೈಭವವನ್ನು ಧೂಳು ಹಿಡಿಯುವಂತೆ ಮಾಡಲಾಗಿದೆ. ಇಡೀ ದೆಹಲಿಯನ್ನೇ ಅಗೆದಿದ್ದಾರೆ. ಹೊಸ ಸಂಸತ್ತು, ಹೊಸ ಕಚೇರಿಗಳು, ಪ್ರಧಾನಿಯವರ ಹೊಸ ನಿವಾಸ ಎಲ್ಲವೂ ಜನರ ಮೇಲೆ ಹೇರಿದ ಹಣದುಬ್ಬರದ ಹೊರೆಯ ಮೇಲೆ ನಿಲ್ಲುತ್ತದೆ. ಹೀಗಾದರೆ, ಏನು ಮಾಡಬೇಕು? ಈ ಪ್ರಶ್ನೆಯನ್ನು ರಾವತ್ ಕೇಳಿದ್ದಾರೆ.

ಇನ್ನೂ ದೀಪಾವಳಿ ಬರುತ್ತಿದೆ. ಅದನ್ನು ಆಚರಿಸೋಣ, ದೀಪಗಳನ್ನು ಬೆಳಗಿಸೋಣ. ಆ ಬೆಳಕಿನಲ್ಲಿ ಹೊಸ ದಾರಿಯನ್ನು ಕಂಡುಕೊಳ್ಳಬಹುದು ಎಂದೂ ಅವರು ತಮ್ಮ ಲೇಖನದಲ್ಲಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.