ETV Bharat / bharat

ಹಿಂದೂ ದೇವತೆಗಳ ಚಿತ್ರದ ಪೇಪರ್​​ನಲ್ಲಿ ಚಿಕನ್ ಮಾರಾಟ.. ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ!

ಹಿಂದೂ ದೇವತೆಗಳಿರುವ ಪೋಸ್ಟರ್​​ಗಳ ಪೇಪರ್​​ಗಳಲ್ಲಿ ಚಿಕನ್ ಮಾರಾಟ - ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡ್ತಿದ್ದ ವ್ಯಕ್ತಿಯೋರ್ವನ ಬಂಧನ- ಉತ್ತರ ಪ್ರದೇಶದ ಸಂಭಾಲ್​ನಲ್ಲಿ ಘಟನೆ

chicken on the photo of deities
chicken on the photo of deities
author img

By

Published : Jul 5, 2022, 7:08 PM IST

​ಸಂಭಾಲ್​(ಉತ್ತರ ಪ್ರದೇಶ): ಹಿಂದೂ ದೇವತೆಗಳ ಚಿತ್ರ ಇರುವ ಪೋಸ್ಟರ್​​​ಗಳಲ್ಲಿ ಚಿಕನ್ ಹಾಕಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಬಂಧನ ಮಾಡಲಾಗಿದೆ. ಚಿಕನ್​ ಶಾಪ್​ಗೆ ತೆರಳಿರುವ ಪೊಲೀಸರ ಮೇಲೆ ಆತ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್​​ನಲ್ಲಿ ನಡೆದಿದೆ.

ಹಿಂದೂ ದೇವತೆಗಳಿಗೆ ಅವಮಾನ ಮಾಡಿರುವ ಆರೋಪದ ಮೇಲೆ ಈತನ ಬಂಧನ ಮಾಡಲು ಪೊಲೀಸ್ ತಂಡ ಸ್ಥಳಕ್ಕೆ ತೆರಳಿತ್ತು. ಈ ವೇಳೆ, ಅವರ ಮೇಲೆ ಚಿಕನ್ ಕತ್ತರಿಸುವ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಭಾನುವಾರ ಈ ಘಟನೆ ನಡೆದಿದೆ. ತಾಲಿಬ್​ ಹುಸೈನ್ ಎಂಬಾತ ತನ್ನ ಮಾಂಸದ ಅಂಗಡಿಯಲ್ಲಿ ಹಿಂದೂ ದೇವತೆಗಳ ಚಿತ್ರವಿರುವ ಪೇಪರ್​​ಗಳಲ್ಲಿ ಚಿಕನ್ ಪ್ಯಾಕ್ ಮಾಡಿ, ಮಾರಾಟ ಮಾಡುತ್ತಿದ್ದನು. ಇದರಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಕೆಲವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.

ಇದನ್ನೂ ಓದಿರಿ: ಒಟ್ಟಿಗೆ ಫೈಟರ್​ ಜೆಟ್​ ಹಾರಿಸಿದ ತಂದೆ-ಮಗಳು: ವಾಯುಪಡೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಜೋಡಿ

ಆರೋಪಿ ಬಂಧನ ಮಾಡಲು ಪೊಲೀಸರ ತಂಡ ಚಿಕನ್ ಶಾಪ್​ಗೆ ತಲುಪಿದಾಗ, ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಎಫ್​​ಐಆರ್​​ನಲ್ಲಿ ಉಲ್ಲೇಖ ಮಾಡಲಾಗಿದೆ. ಇದರ ಬೆನ್ನಲ್ಲೇ ಆರೋಪಿಯನ್ನ ಬಂಧನ ಮಾಡುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಭಾರತೀಯ ದಂಡ ಸಂಹಿತೆ 153A, 295A ಮತ್ತು 307ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.