ETV Bharat / bharat

ಜೈಲು ಸೇರಿದ ಸಲ್ಮಾನ್​ ಖಾನ್​ ತದ್ರೂಪಿ.. ಕಂಬಿ ಎಣಿಸುವಂತೆ ಮಾಡಿದ 'ರೀಲ್​' - ಜೈಲು ಸೇರಿದ ಸಲ್ಮಾನ್​ ಖಾನ್​ ತದ್ರೂಪಿ

ಥೇಟ್ ಸಲ್ಮಾನ್​ ಖಾನ್​ ಥರ ಕಾಣುವ ವ್ಯಕ್ತಿಯೊಬ್ಬ ಉತ್ತರಪ್ರದೇಶದ ಜನನಿಬಿಡ ಪ್ರದೇಶವಾದ ಲಖನೌನ ಕ್ಲಾಕ್​ ಟವರ್​ ಮುಂದೆ ರೀಲ್​ ಮಾಡಲು ಹೋಗಿ ಟ್ರಾಫಿಲ್​ ಜಾಮ್​ ಸೃಷ್ಟಿಸಿದ ಆರೋಪದ ಮೇಲೆ ಜೈಲು ಸೇರಿದ್ದಾನೆ..

salman-khans
ಸಲ್ಮಾನ್​ ಖಾನ್​ ತದ್ರೂಪಿ
author img

By

Published : May 9, 2022, 3:05 PM IST

ಲಖನೌ(ಉತ್ತರಪ್ರದೇಶ): ಟಿಕ್​ಟಾಕ್​ ಬಂದ ನಂತರ ರೀಲ್​ ಮಾಡುವ ಹುಚ್ಚು ಹೆಚ್ಚಾಗಿದೆ. ಇದು ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಲು ವೇದಿಕೆಯಾದರೂ, ಕೆಲವೊಮ್ಮೆ ಅತಿರೇಖವಾಗಿ ಕಿರಿಕಿರಿಯನ್ನೂ ಉಂಟು ಮಾಡುತ್ತದೆ. ಬಾಲಿವುಡ್​ ನಟ ಸಲ್ಮಾನ್​ ಖಾನ್​ ರೀತಿ ಹೋಲುವ ವ್ಯಕ್ತಿಯೊಬ್ಬ ಸಾರ್ವಜನಿಕವಾಗಿ ರೀಲ್ ಮಾಡಿ ಜನದಟ್ಟಣೆ ಉಂಟು ಮಾಡಿದ ಆರೋಪದ ಮೇಲೆ ಅರೆಸ್ಟ್​ ಆಗಿದ್ದಾನೆ.

ಥೇಟ್​ ಸಲ್ಮಾನ್​ ಖಾನ್​ ತರ ಕಾಣುವ ಆಜಂ ಅನ್ಸಾರಿ ಎಂಬಾತ ಬಾಲಿವುಡ್​ ನಟನ ದೃಶ್ಯಗಳನ್ನು ಉತ್ತರಪ್ರದೇಶದ ಲಖನೌನ ಕ್ಲಾಕ್​ ಟವರ್​ ಮುಂದೆ ನಕಲು ಮಾಡುವ ರೀತಿ ಆ್ಯಕ್ಟ್​ ಮಾಡಿದ್ದಾನೆ. ಕ್ಯಾಮೆರಾದಲ್ಲಿ ಸೆರೆ ಹಿಡಿದು ರೀಲ್​ ಮಾಡುತ್ತಿದ್ದ. ಇದನ್ನು ನೋಡಲು ಸಾವಿರಾರು ಜನರು ಮುಗಿಬಿದ್ದಿದ್ದರು. ಇದರಿಂದ ಕ್ಲಾಕ್​ ಟವರ್​ ಮುಂದೆ ಭಾರೀ ಜನಸ್ತೋಮ ಉಂಟಾಗಿ ಟ್ರಾಫಿಕ್​ ಜಾಮ್​ ಆಗಿತ್ತು.

ಇದರಿಂದ ಬೇಸತ್ತ ಕೆಲ ಪ್ರಯಾಣಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ನಕಲಿ ಸಲ್ಮಾನ್​ ಖಾನ್​ ಆದ ಆಜಂ ಅನ್ಸಾರಿ ವಿರುದ್ಧ ಶಾಂತಿ ಭಂಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆಜಂ ಅನ್ಸಾರಿ ಇನ್​ಸ್ಟಾಗ್ರಾಮ್​ನಲ್ಲಿ 75 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ಮಾಡುವ ರೀಲ್​ಗಳನ್ನು ವೀಕ್ಷಿಸುವ ದೊಡ್ಡ ಸಮೂಹವೇ ಇದೆ.

ಓದಿ: ವಿಡಿಯೋ : ಮುದ್ದಾದ ನವಿಲಿನೊಂದಿಗೆ ನೃತ್ಯ ಮಾಡಿದ ನಟಿ ಶೆಹನಾಜ್ ಗಿಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.