ETV Bharat / bharat

ನನಗೆ ಕೋವಿಡ್​ ಬರಲ್ಲ, ಯಾಕೆಂದ್ರೆ ನಾನು 'ಹಸುವಿನ ಮೂತ್ರ' ಕುಡಿಯುತ್ತೇನೆ ಎಂದ ಸಾಧ್ವಿ! - ಭೋಪಾಲ್​ ಸಂಸದೆ ಸಾಧ್ವಿ ಪ್ರಜ್ಞಾ

ಹಸುವಿನ ಮೂತ್ರ ಕುಡಿಯುವುದರಿಂದ ಹಾಗೂ ಪ್ರತಿದಿನ ದೇವರ ಪ್ರಾರ್ಥನೆಯಲ್ಲಿ ಭಾಗಿಯಾಗುವ ಕಾರಣ ನನಗೆ ಕೋವಿಡ್ ಸೋಂಕು ಬರಲ್ಲ ಎಂದು ಬಿಜೆಪಿ ಸಂಸದೆ ಹೇಳಿಕೊಂಡಿದ್ದಾರೆ.

Sadhvi Pragya
Sadhvi Pragya
author img

By

Published : May 17, 2021, 6:22 PM IST

Updated : May 17, 2021, 6:50 PM IST

ಭೋಪಾಲ್​(ಮಧ್ಯಪ್ರದೇಶ): ಸದಾ ಒಂದಿಲ್ಲೊಂದು ರೀತಿಯ ವಿವಾದಿತ ಹೇಳಿಕೆ ನೀಡಿ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಇದೀಗ ಮತ್ತೊಮ್ಮೆ ತಮ್ಮ ಬಾಯಿ ಹರಿ ಬಿಡುವ ಮೂಲಕ ಪೇಚಿಗೆ ಸಿಲುಕಿಕೊಂಡಿದ್ದಾರೆ.

ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್​ ಹೇಳಿಕೆ

ಮಧ್ಯಪ್ರದೇಶದ ಭೋಪಾಲ್​​ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್​, ನನಗೆ ಕೋವಿಡ್ ಸೋಂಕು ಬರಲ್ಲ. ಯಾಕೆಂದ್ರೆ ನಾನು ಹಸುವಿನ ಮೂತ್ರ ಕುಡಿಯುತ್ತೇನೆ ಜತೆಗೆ ನಿರಂತರವಾಗಿ ದೇವರ ಪೂಜೆ ಮಾಡುತ್ತೇನೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ, ಈ ಹೇಳಿಕೆ ನೀಡಿ ಸಾಧ್ವಿ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ. ಇದೇ ವಿಷಯವನ್ನಿಟ್ಟುಕೊಂಡು ಇದೀಗ ಸಂಸದೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಧ್ಯಪ್ರದೇಶದಲ್ಲಿ ನಿತ್ಯ ಕೋವಿಡ್​ ಸೋಂಕಿತ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿದ್ದರೂ, ಸಾಧ್ವಿ ಕಾಣಿಸಿಕೊಳ್ಳುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ: ಸಿಡಿಲಿಗೆ ಮೂರು ಮಕ್ಕಳು ಸೇರಿ ನಾಲ್ವರ ದುರ್ಮರಣ

ಕೋವಿಡ್ ಮೊದಲನೇ ಅವಧಿ ಸಂದರ್ಭದಲ್ಲೂ ಇದೇ ರೀತಿಯ ವಿವಾದಿತ ಹೇಳಿಕೆ ನೀಡಿದ್ದ ಸಾಧ್ವಿ, ಹಸು ಸಾಕುವ ಮೂಲಕ ಹಾಗೂ ಹನುಮಾನ್​ ಚಾಲಿಸಾ ಜಪಿಸುವ ಮೂಲಕ ಕೋವಿಡ್​ ಸೋಂಕು ತಡೆಗಟ್ಟಬಹುದಾಗಿದೆ ಎಂದಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಸಾಧ್ವಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರಲಿಲ್ಲ. ಆದರೆ, ಅವರ ಕಚೇರಿಯ ಎಲ್ಲ ಸದಸ್ಯರಿಗೂ ಕೋವಿಡ್ ಸೋಂಕು ದೃಢಗೊಂಡಿತ್ತು.

Last Updated : May 17, 2021, 6:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.