ETV Bharat / bharat

'ಮಂಗಳಸೂತ್ರ ಧರಿಸಿ ಅರೆ ನಗ್ನ ಫೋಟೋ': 'ಸಬ್ಯಸಾಚಿ'ಯ ಜಾಹೀರಾತಿನ ವಿರುದ್ಧ ನೆಟ್ಟಿಗರು ಗರಂ - ಇಂಟಿಮೇಟ್ ಫೈನ್ ಜ್ಯುವೆಲ್ಲರಿ

ಒಳ ಉಡುಪುಗಳನ್ನು ತೊಟ್ಟು ಮಂಗಳಸೂತ್ರ ಧರಿಸಿರುವ ರೂಪದರ್ಶಿಗಳು ಪೋಸ್​ ನೀಡುತ್ತಿರುವ ಸಬ್ಯಸಾಚಿ ಫ್ಯಾಶನ್ ಬ್ರ್ಯಾಂಡ್​ನ ಜಾಹೀರಾತು ಕಂಡವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಕಾಮಸೂತ್ರಕ್ಕೂ ಮಂಗಳಸೂತ್ರಕ್ಕೂ ವ್ಯತ್ಯಾಸವಿದೆ" ಎಂದು ಗರಂ ಆಗಿದ್ದಾರೆ.

'ದಿ ರಾಯಲ್ ಬೆಂಗಾಲ್ ಮಂಗಳಸೂತ್ರ' ಜಾಹೀರಾತು
'ದಿ ರಾಯಲ್ ಬೆಂಗಾಲ್ ಮಂಗಳಸೂತ್ರ' ಜಾಹೀರಾತು
author img

By

Published : Oct 29, 2021, 11:05 AM IST

Updated : Oct 29, 2021, 11:35 AM IST

ಭಾರತದಲ್ಲಿ, ಅದರಲ್ಲಿಯೂ ಹಿಂದೂ ಧರ್ಮದಲ್ಲಿ ಮಾಂಗಲ್ಯ ಸರ ಅಥವಾ ಮಂಗಳಸೂತ್ರಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದ್ದು, ಪವಿತ್ರ ಸ್ಥಾನ ನೀಡಲಾಗಿದೆ. ಆದರೆ ಅಂತಾರಾಷ್ಟ್ರೀಯ ಖ್ಯಾತಿಯ ಭಾರತದ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಅವರು ಸಿದ್ಧಪಡಿಸಿರುವ ಹೊಸ ಆಭರಣಗಳ ಜಾಹೀರಾತಿನ ಫೋಟೋಗಳನ್ನು ಕಂಡ ನೆಟ್ಟಿಗರು ಛೀ.. ತೂ ಎಂದು ಕಿಡಿಕಾರಿದ್ದಾರೆ.

ವಿಭಿನ್ನ ಬಣ್ಣ-ವಿನ್ಯಾಸವುಳ್ಳ 'ಸಬ್ಯಸಾಚಿ' ಎಂಬ ಫ್ಯಾಶನ್ ಬ್ರ್ಯಾಂಡ್ ಎಲ್ಲರಿಗೂ ಚಿರಪರಿಚಿತ. ಆದರೆ, ಸಬ್ಯಸಾಚಿ ಮುಖರ್ಜಿ ಅವರ ಈ ಬ್ರ್ಯಾಂಡ್ ಬಾಲಿವುಡ್​ ಲೋಕದಲ್ಲಿ ಹೆಚ್ಚು ಕೇಳಿಬರುತ್ತದೆ. ಸಿಕ್ಕಾಪಟ್ಟೆ ದುಬಾರಿಯಾದರೂ ಬಾಲಿವುಡ್ ಸೆಲೆಬ್ರಿಟಿಗಳು ಸಬ್ಯಸಾಚಿ ಉಡುಪುಗಳ ಮೊರೆ ಹೋಗುತ್ತಾರೆ. ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ- ರಣವೀರ್​ ಸಿಂಗ್​, ಪ್ರಿಯಾಂಕ ಚೋಪ್ರಾ-ನಿಕ್ ಜೋನಾಸ್​ ಸೇರಿ ಹಲವು ಸ್ಟಾರ್​ಗಳು ತಮ್ಮ ಮದುವೆಯಲ್ಲಿ ಸಬ್ಯಸಾಚಿ ಡಿಸೈನರ್ ಡ್ರೆಸ್​ಗಳನ್ನೇ ಧರಿಸಿದ್ದನ್ನ ನಾವು ನೋಡಿದ್ದೇವೆ.

ಫ್ಯಾಷನ್ ಡಿಸೈನರ್ ಸಬ್ಯಸಾಚಿ ಮುಖರ್ಜಿ
ಫ್ಯಾಷನ್ ಡಿಸೈನರ್ ಸಬ್ಯಸಾಚಿ ಮುಖರ್ಜಿ

ಈ ಫ್ಯಾಶನ್ ಬ್ರ್ಯಾಂಡ್​ನ ಮಾಲೀಕ ಸಬ್ಯಸಾಚಿ ಮುಖರ್ಜಿ ಅವರು 'ಇಂಟಿಮೇಟ್ ಫೈನ್ ಜ್ಯುವೆಲ್ಲರಿ' ಸಂಗ್ರಹವನ್ನು ಆರಂಭಿಸಿದ್ದು, 'ದಿ ರಾಯಲ್ ಬೆಂಗಾಲ್ ಮಂಗಳಸೂತ್ರ' (The Royal Bengal Mangalsutra) ಹೆಸರಿನ ಮಾಂಗಲ್ಯ ಸರದ ಜಾಹೀರಾತುಗಳ ಸರಣಿಯನ್ನು ಸಬ್ಯಸಾಚಿ ತನ್ನ ಇನ್ಸ್‌ಟಾಗ್ರಾಮ್​ ಖಾತೆಯಲ್ಲಿ ಪ್ರಕಟ ಮಾಡಿದೆ.

  • I have issued a Legal notice to Sabyasachi Mukherjee Indian fashion designer regarding using "semi-naked models for a Mangalsutra collection advertisement as "Mangalsutra" is part of Holy Hindu Marriage.

    He outraged the holy Hindu Marriage (Mangalsutra). pic.twitter.com/QPojQtiOKH

    — ADV. ASHUTOSH J. DUBEY 🇮🇳 (@AdvAshutoshBJP) October 28, 2021 " class="align-text-top noRightClick twitterSection" data=" ">

ಒಳ ಉಡುಪುಗಳನ್ನು ತೊಟ್ಟು ಮಂಗಳಸೂತ್ರ ಧರಿಸಿರುವ ರೂಪದರ್ಶಿಗಳನ್ನು ಈ ಜಾಹೀರಾತಿನಲ್ಲಿ ಕಾಣಬಹುದಾಗಿದೆ. ಅಷ್ಟೆ ಅಲ್ಲ, ಆಭರಣಗಳನ್ನು ಧರಿಸಿ ಅರೆನಗ್ನ ಸ್ಥಿತಿಯಲ್ಲಿ ಗಂಡು-ಹೆಣ್ಣು ಭಿನ್ನ ಭಂಗಿಯಲ್ಲಿ ಪೋಸ್ಟ್​ ಕೊಟ್ಟಿರುವುದು ಕಂಡು ಬಂದಿದೆ.

ಇದನ್ನೂ ಓದಿ: 'ಸಭ್ಯಸಾಚಿ' ಬಂಪರ್​ ನ್ಯೂಸ್​​.. ಕೊನೆಗೂ ಕೈಗೆಟುಕುವ ದರದಲ್ಲಿ ಡ್ರೆಸ್​ಗಳು ಲಭ್ಯ

ಪವಿತ್ರ ಮಾಂಗಲ್ಯ ಸರಕ್ಕೆ ಅಪಹಾಸ್ಯ ಮಾಡಲಾಗುತ್ತಿದೆ. ಅದರ ಗೌರವಕ್ಕೆ ಧಕ್ಕೆ ತರಲಾಗಿದೆ. ಅಶ್ಲೀಲ ಸಂದೇಶ ರವಾನೆಯಾಗುತ್ತಿದೆ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. "ಸಬ್ಯಸಾಚಿ ಅವರು ತಮ್ಮ ಹೊಸ ಒಳ ಉಡುಪುಗಳ ಸಂಗ್ರಹವನ್ನು ಪ್ರಾರಂಭಿಸಿದ್ದಾರೆ ಎಂದು ನಾನು ಭಾವಿಸಿದೆ. ಇಲ್ಲ ಇಲ್ಲ... ಅದು ಮಂಗಳಸೂತ್ರದ ಜಾಹೀರಾತು. ಛೇ ನಾನು ಇದನ್ನು ಗಮನಿಸಲಿಲ್ಲ" ಎಂದು ಒಬ್ಬರು ಟ್ವಿಟರ್​ನಲ್ಲಿ ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. "ಕಾಮಸೂತ್ರಕ್ಕೂ ಮಂಗಳಸೂತ್ರಕ್ಕೂ ವ್ಯತ್ಯಾಸವಿದೆ" ಎಂದು ಮತ್ತೊಬ್ಬರು ಗರಂ ಆಗಿದ್ದಾರೆ.

  • I thought Sabyasachi launched his new lingerie collection, no no..that's a mangalsutra ad.
    I'm so regressive, I didn't notice. 😊 pic.twitter.com/ieRY4rrvcr

    — ℳℴ𝓊𝓂𝒾𝓉𝒶 🇮🇳 (@_mou_mita) October 27, 2021 " class="align-text-top noRightClick twitterSection" data=" ">

ವಿವಿಧ ಸಂಘ-ಸಂಘಟನೆಗಳು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಅಖಿಲ ಭಾರತೀಯ ಗ್ರಾಹಕ ಪಂಚಾಯತ್​ ಗುಜರಾತ್ ಪ್ರಾಂತ್' ತನ್ನ ಟ್ವೀಟರ್​ ಖಾತೆಯಲ್ಲಿ "ಈ ಪುಟವು ಅಸಭ್ಯ ಜಾಹೀರಾತನ್ನು ಒಳಗೊಂಡಿದೆ.. ಇದು ಭಾರತದ ಜನರನ್ನು ದಾರಿ ತಪ್ಪಿಸುತ್ತದೆ.. ನಾವು ಎಬಿಜಿಪಿ ಗುಜರಾತ್ ಪ್ರಾಂತ್​ನ ಮಹಿಳಾ ಘಟಕವು ಈ ಜಾಹೀರಾತನ್ನು ವಿರೋಧಿಸುತ್ತೇವೆ ಮತ್ತು ಈ ಜಾಹೀರಾತಿನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ" ಎಂದು ಬರೆದುಕೊಂಡಿದೆ.

  • Namste🙏🏻

    This page is contain vulger advertisement..... Which mislead people of india highly.. We ABGP GUJARAT PRANT WOMEN WING Highly oppose this advertisement and doing social media protest against this advertisement. #Sabyasachi @ShefVaidya pic.twitter.com/y5B0VnE06S

    — AKHIL BHARTIYA GRAHAK PANCHAYAT GUJARAT PRANT (@abgpgujaratpran) October 27, 2021 " class="align-text-top noRightClick twitterSection" data=" ">

ಅಶುತೋಷ್ ಜೆ. ದುಬೆ ಎಂಬ ವಕೀಲರು , ಫ್ಯಾಷನ್ ಡಿಸೈನರ್ ಸಬ್ಯಸಾಚಿ ಮುಖರ್ಜಿಗೆ ಲೀಗಲ್ ನೋಟಿಸ್ ನೀಡಿರುವುದಾಗಿ ಹೇಳಿ, ನೋಟಿಸ್​ ಅನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

Last Updated : Oct 29, 2021, 11:35 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.