ETV Bharat / bharat

ಉಕ್ರೇನ್​​ನಿಂದ ತಾಯ್ನಾಡಿಗೆ ಸುರಕ್ಷಿತವಾಗಿ ಬಂದ ಮಗಳು: ಪಿಎಂ, ಸಿಎಂ ನಿಧಿಗೆ ಹಣ ನೀಡಿದ ಕುಟುಂಬ - ಉಕ್ರೇನ್​ನಲ್ಲಿ ವಿದ್ಯಾರ್ಥಿಗಳು

ಉಕ್ರೇನ್​​ನಿಂದ ಹಿಮಾಚಲ ಪ್ರದೇಶದ ವಿದ್ಯಾರ್ಥಿನಿ ಅಂಕಿತಾ ಸುರಕ್ಷಿತವಾಗಿ ವಾಪಸ್​ ಆಗಿದ್ದು ಕೇಂದ್ರ, ರಾಜ್ಯ ಸರ್ಕಾರದ ಕೆಲಸದಿಂದ ಸಂತೋಷಗೊಂಡಿರುವ ಕುಟುಂಬಸ್ಥರು ಇದೀಗ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

Russia ukraine war
Russia ukraine war
author img

By

Published : Mar 2, 2022, 10:08 PM IST

ಹಮೀರ್​ಪುರ (ಹಿಮಾಚಲ ಪ್ರದೇಶ): ಉಕ್ರೇನ್​ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಆರಂಭಗೊಂಡಿರುವ ಪರಿಣಾಮ ಅಲ್ಲಿ ವೈದ್ಯಕೀಯ ವ್ಯಾಸಂಗ ಮಾಡ್ತಿರುವ ಅನೇಕ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಕೆಲಸದಲ್ಲಿ ಕೇಂದ್ರ ಸರ್ಕಾರ ಮಗ್ನವಾಗಿದ್ದು, ಅದಕ್ಕಾಗಿ 'ಆಪರೇಷನ್ ಗಂಗಾ' ಹಮ್ಮಿಕೊಂಡಿದೆ.

ಯುದ್ಧಪೀಡಿತ ಉಕ್ರೇನ್​​ನಿಂದ ಈಗಾಗಲೇ 9 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಾಪಸ್​ ಆಗಿದ್ದಾರೆ. ಇದರಲ್ಲಿ ಕಳೆದ ಭಾನುವಾರ ಹಿಮಾಚಲ ಪ್ರದೇಶದ 32 ವಿದ್ಯಾರ್ಥಿಗಳು ಸಹ ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ. ವಿಶೇಷ ವಿಮಾನದಲ್ಲಿ ಇವರೆಲ್ಲರೂ ದೆಹಲಿಗೆ ವಾಪಸ್​ ಆಗಿದ್ದು, ಈಗಾಗಲೇ ಪೋಷಕರ ಮಡಿಲು ಸೇರಿಕೊಂಡಿದ್ದಾರೆ.

Russia ukraine war
ಉಕ್ರೇನ್​​ನಿಂದ ತಾಯ್ನಾಡಿಗೆ ಸುರಕ್ಷಿತವಾಗಿ ಬಂದ ಮಗಳು

ಪಿಎಂ, ಸಿಎಂ ಫಂಡ್​ಗೆ ದೇಣಿಗೆ: ಹಿಮಾಚಲ ಪ್ರದೇಶದ ಹಮೀರ್​ಪುರನ ಅಂಕಿತಾ ಠಾಕೂರ್​ ಕೂಡ ಉಕ್ರೇನ್​​ನಿಂದ ಸುರಕ್ಷಿತವಾಗಿ ವಾಪಸ್​ ಆಗಿ ಪೋಷಕರ ಮಡಿಲು ಸೇರಿಕೊಂಡಿದ್ದಾರೆ. ಇದರಿಂದ ಸಂತೋಷಗೊಂಡಿರುವ ಕುಟುಂಬಸ್ಥರು ಮಹತ್ವದ ಕಾರ್ಯ ಮಾಡಿದ್ದಾರೆ. ಕೇಂದ್ರದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ತಂದೆ-ತಾಯಿ ಇದೀಗ ಪಿಎಂ ಕೇರ್ಸ್​ ಫಂಡ್​ಗೆ 21 ಸಾವಿರ ರೂ. ಹಾಗೂ ಸಿಎಂ ಪರಿಹಾರ ನಿಧಿಗೆ 11 ಸಾವಿರ ರೂ. ದೇಣಿಗೆ ನೀಡಿದ್ದಾರೆ.

ಇದನ್ನೂ ಓದಿ: ಪೋಷಕರ ಸಂತಸಕ್ಕೆ ಪಾರವೇ ಇಲ್ಲ.. ಉಕ್ರೇನ್​​ನಿಂದ ಬಂದ ಮಕ್ಕಳನ್ನ ತಬ್ಬಿ ಕಣ್ಣೀರಿಟ್ಟ ಕುಟುಂಬಸ್ಥರು!

ಯುದ್ಧ ಪೀಡಿತ ಉಕ್ರೇನ್​​ನಲ್ಲಿ ಭಾರತದ ಸಾವಿರಾರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಅವರನ್ನ ಸುರಕ್ಷಿತವಾಗಿ ಕರೆತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಈಗಾಗಲೇ ನಾಲ್ವರು ಸಚಿವರನ್ನ ಉಕ್ರೇನ್​ ಗಡಿ ರಾಜ್ಯಗಳಿಗೆ ರವಾನೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.