ಕೀವ್ (ಉಕ್ರೇನ್): ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಸೋಮವಾರ 12ನೇ ದಿನವೂ ಮುಂದುವರಿದಿದೆ. ಭಾನುವಾರ ಎರಡೂ ಸೇನೆಗಳ 11 ಗಂಟೆಯ ಕದನ ವಿರಾಮ ಘೋಷಿಸಿದ್ದವು. ಈಗ ಮತ್ತೆ ಯುದ್ಧ ಆರಂಭವಾಗಿದೆ.
ಕದನ ವಿರಾಮ ಹಿನ್ನೆಲೆಯಲ್ಲಿ ನಾಗರಿಕರ ರಕ್ಷಣೆ ಮತ್ತು ಸ್ಥಳಾಂತರದಲ್ಲಿ ಉಕ್ರೇನ್ ತೊಡಗಿತ್ತು. ಆದರೆ, ಇದರ ನಡುವೆಯೂ ರಷ್ಯಾ ಸೇನೆಯು ತನ್ನ ದಾಳಿ ಮುಂದುವರಿಸಿದೆ. ಇದರಿಂದ ಸ್ಥಳಾಂತರ ಕಾರ್ಯಕ್ಕೆ ತೊಂದರೆ ಉಂಟಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ದೂರಿದ್ದಾರೆ.
ಉಕ್ರೇನ್‌ನ ದಕ್ಷಿಣ ನಗರಗಳಲ್ಲಿ ನಾಗರಿಕರ ಸ್ಥಳಾಂತರ ಮಾಡಬೇಕಿತ್ತು. ಆದರೆ, ರಷ್ಯಾದ ದಾಳಿ ಕಾರಣ ಎರಡನೇ ಬಾರಿಯೂ ಇದು ವಿಫಲವಾಗಿದೆ. ಅಲ್ಲದೇ, ರಷ್ಯಾ ಸೇನೆಯು ಕಾರಿಡಾರ್ಗಳನ್ನು ಮುಚ್ಚಿದೆ ಮತ್ತು ಉಕ್ರೇನ್‌ನ ಸೇನೆಯ ಹಲವು ವಿಮಾನಗಳನ್ನು ನಾಶಗೊಳಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜತೆ ಇಂದು ಪ್ರಧಾನಿ ಮೋದಿ ಮಾತುಕತೆ
ಇದೇ ವೇಳೆ, ರಷ್ಯಾದಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳಲ್ಲಿ ತೊಡಗಿದ್ದ 4,300ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಉಕ್ರೇನ್ ಹಾಗೂ ರಷ್ಯಾ ಉಭಯ ರಾಷ್ಟ್ರಗಳ ನಡುವೆ ಮೂರನೇ ಹಂತದ ಮಾತುಕತೆಗೂ ಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.