ETV Bharat / bharat

ಆರೆಸ್ಸೆಸ್ ಅಂಗಸಂಸ್ಥೆ ಸೇವಾ ಭಾರತಿಯಿಂದ ಕೋವಿಡ್​ ಕ್ಷಿಪ್ರ ನೆರವು ಕಾರ್ಯಪಡೆ ಆರಂಭ

author img

By

Published : May 8, 2021, 10:15 PM IST

ಹಲವಾರು ಸಾಮಾಜಿಕ, ಧಾರ್ಮಿಕ, ಕೈಗಾರಿಕೆ ಮತ್ತು ಎನ್‌ಜಿಒಗಳನ್ನು ಒಳಗೊಂಡ ಕೋವಿಡ್​ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಸೇವಾ ಭಾರತಿ ಸಂಘಟನೆಯು ಶನಿವಾರ ಪ್ರಾರಂಭಿಸಿತು. ಕೋವಿಡ್​-19ಗೆ ಸಂಬಂಧಿಸಿದ ಎಲ್ಲ ರೀತಿಯ ಸಂಪನ್ಮೂಲಗಳನ್ನು ಸಂಗ್ರಹಿಸುವುದು ಮತ್ತು ಅಗತ್ಯವಿರುವವರಿಗೆ ಅವುಗಳನ್ನು ಒದಗಿಸುವುದು ಈ ತಂಡದ ಉದ್ದೇಶವಾಗಿದೆ.

RSS-affiliated 'Seva Bharti' launches COVID Response Team
ಆರೆಸ್ಸೆಸ್ ಅಂಗಸಂಸ್ಥೆ ಸೇವಾ ಭಾರತಿಯಿಂದ ಕೋವಿಡ್​ ಕ್ಷಿಪ್ರ ನೆರವು ಕಾರ್ಯಪಡೆ ಆರಂಭ

ನವದೆಹಲಿ: ಕೋವಿಡ್​-19 ಮಹಾಮಾರಿಯ ಈ ಬಿಕ್ಕಟ್ಟಿನ ಸಮಯದಲ್ಲಿ ಇಡೀ ರಾಷ್ಟ್ರವು ಯುದ್ಧೋಪಾದಿಯಲ್ಲಿ ವೈರಸ್​ ವಿರುದ್ಧ ಹೋರಾಡುತ್ತಿದೆ. ಇಂಥ ಸಮಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಅಂಗ ಸಂಸ್ಥೆ, ಸ್ವಯಂಸೇವಕ ಸಂಘಟನೆಯಾದ ಸೇವಾ ಭಾರತಿ ಕೂಡ ಸಹಾಯಕ್ಕೆ ನಿಂತಿದ್ದು, ಸೋಂಕಿತ ರೋಗಿಗಳು ಮತ್ತು ಅವರ ರಕ್ತಸಂಬಂಧಿಗಳಿಗೆ ಅಗತ್ಯ ನೆರವು ನೀಡಲು ಮುಂದಾಗಿದೆ.

ಈ ಹಿನ್ನೆಲೆಯಲ್ಲಿ, ಹಲವಾರು ಸಾಮಾಜಿಕ, ಧಾರ್ಮಿಕ, ಕೈಗಾರಿಕೆ ಮತ್ತು ಎನ್‌ಜಿಒಗಳನ್ನು ಒಳಗೊಂಡ ಕೋವಿಡ್​ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಸೇವಾ ಭಾರತಿ ಸಂಘಟನೆಯು ಶನಿವಾರ ಪ್ರಾರಂಭಿಸಿತು. ಕೋವಿಡ್​-19ಗೆ ಸಂಬಂಧಿಸಿದ ಎಲ್ಲ ರೀತಿಯ ಸಂಪನ್ಮೂಲಗಳನ್ನು ಸಂಗ್ರಹಿಸುವುದು ಮತ್ತು ಅಗತ್ಯವಿರುವವರಿಗೆ ಅವುಗಳನ್ನು ಒದಗಿಸುವುದು ಈ ತಂಡದ ಉದ್ದೇಶವಾಗಿದೆ.

ಕಾರ್ಯಾಚರಣೆ ಪಡೆಯನ್ನು ವರ್ಚುವಲ್ ಸಮಾರಂಭದ ಮೂಲಕ ಉದ್ಘಾಟಿಸಲಾಯಿತು. ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಾರ್ಯಾಚರಣೆ ಪಡೆಯ ಸಂಚಾಲಕ ಹಾಗೂ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ (ನಿವೃತ್ತ), ಈ ಬಿಕ್ಕಟ್ಟಿನ ಮಧ್ಯೆ ಅಗತ್ಯವಿರುವವರಿಗೆ ಸೇವೆ ನೀಡುವುದರ ಜೊತೆಗೆ, ಈ ತಂಡವು ಆರೋಗ್ಯ ಸೇವೆಗಳು ಮತ್ತು ಇತರ ಸಂಬಂಧಿತ ವಿಷಯಗಳ ಸುಧಾರಣೆಗೆ ಸರ್ಕಾರಕ್ಕೆ ಅಗತ್ಯವಾದ ಸಲಹೆಗಳನ್ನು ನೀಡುತ್ತದೆ ಎಂದು ಹೇಳಿದರು.

ಇದಲ್ಲದೆ, ಆಮ್ಲಜನಕ ಸೌಲಭ್ಯಗಳೊಂದಿಗೆ ಪ್ರತ್ಯೇಕ ಕೇಂದ್ರಗಳನ್ನು ತೆರೆಯಲು, ಆಮ್ಲಜನಕ ವ್ಯಾನ್‌ಗಳನ್ನು ಸಾಗಿಸಲು, ಆಯುರ್ವೇದ ಔಷಧಿಗಳನ್ನು ಜನರಿಗೆ ಮನೆ ಬಾಗಿಲಿಗೆ ತಲುಪಿಸಲು ಮತ್ತು ಈ ಸಾಂಕ್ರಾಮಿಕದ ಮಧ್ಯೆ ಮೃತಪಟ್ಟವರನ್ನು ಗೌರವಯುತವಾಗಿ ಅಂತ್ಯಕ್ರಿಯೆ ಮಾಡಲು ಸಹ ಈ ತಂಡ ಯೋಜಿಸಿದೆ ಎಂದು ಅವರು ಹೇಳಿದರು.

ಇಲ್ಲಿಯವರೆಗೆ, ಆರ್‌ಎಸ್‌ಎಸ್ ಮತ್ತು ಸೇವಾ ಭಾರತಿ 500 ಹಾಸಿಗೆಗಳ ಪ್ರತ್ಯೇಕ ಕೇಂದ್ರಗಳ ಉಪಕ್ರಮದೊಂದಿಗೆ, ಒಟ್ಟು 7 ಆಮ್ಲಜನಕ ವ್ಯಾನ್‌ಗಳು, ಆಮ್ಲಜನಕ ಹಾಸಿಗೆಗಳನ್ನು ಹೊಂದಿದ್ದು, 28,000 ಕುಟುಂಬಗಳಿಗೆ ಆಹಾರ ವಿತರಣೆ, 803 ಪ್ಲಾಸ್ಮಾ ದೇಣಿಗೆ ಮತ್ತು 1,300 ಸಿಟಿ ಸ್ಕ್ಯಾನ್‌ಗಳನ್ನು ನಡೆಸಿದೆ. ಒಟ್ಟು 1,200 ಸ್ವಯಂಸೇವಕರು ಮತ್ತು 130 ವೈದ್ಯರ ತಂಡಗಳು ಈ ಕಾರ್ಯಪಡೆಯ ಸಹಾಯವಾಣಿಗೆ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಇಲ್ಲಿಯವರೆಗೆ 88,000 ಕರೆಗಳು ಬಂದಿವೆ ಎಂದು ಜನರಲ್ ಸಿಂಗ್ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.