ಹೈದರಾಬಾದ್(ತೆಲಂಗಾಣ): ಔಷಧ ತಯಾರಕ ಕಂಪನಿ ಹೆಟೆರೊ ಫಾರ್ಮಾ ಗ್ರೂಪ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಈ ದಾಳಿಯ ವೇಳೆ ಹೆಟೆರೋ ಗ್ರೂಪ್ ತೆರಿಗೆಯಿಂದ ತಪ್ಪಿಸಿಕೊಳ್ಳಲು ಅನೇಕ ಕಾನೂನುಬಾಹಿರ ತಂತ್ರಗಳನ್ನು ಹೂಡಿರುವುದು ಬೆಳಕಿಗೆ ಬಂದಿದೆ.
ಈ ಕಂಪನಿ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ಲೆಕ್ಕಕ್ಕೆ ಸಿಗದ ಸುಮಾರು 1,200 ಕೋಟಿ ರೂಪಾಯಿಯನ್ನು ಜಪ್ತಿ ಮಾಡಿದ್ದಾರೆ. ಇನ್ನೂ ದಾಳಿ ಮುಂದುವರೆದಿದ್ದು, ಜಪ್ತಿಯಾದ ಹಣದ ಮೊತ್ತದ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಬೋಗಸ್ ಕಂಪನಿಗಳಿಂದ ಖರೀದಿ..
ಹೆಟೆರೋ ಕಂಪನಿ ತೆರಿಗೆಯಿಂದ ತಪ್ಪಿಸಿಕೊಳ್ಳಲು ಅನೇಕ ಬೋಗಸ್ ಕಂಪನಿಗಳಿಂದ ಸರಕುಗಳನ್ನು ಖರೀದಿ ಮಾಡಿರುವುದು ತಿಳಿದುಬಂದಿದೆ. ಅದು ತನ್ನ ವರದಿಗಳಲ್ಲಿ ಕಡಿಮೆ ಆದಾಯ ತೋರಿಸುವುದರ ಜೊತೆಗೆ ಹೆಚ್ಚು ವೆಚ್ಚವನ್ನು ಉಲ್ಲೇಖಿಸಿದೆ. ಈ ಮೂಲಕ ತೆರಿಗೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದೆ.
ಈ ಕಂಪನಿಯು ಔಷಧಿಗಳ ಉತ್ಪಾದನೆಯಲ್ಲಿ ಅಗತ್ಯವಿರುವ ಕಚ್ಚಾ ಸರಕುಗಳ ವಿವರಗಳನ್ನು ಮರೆ ಮಾಚುತ್ತಿದೆ ಎಂಬ ಅನುಮಾನದಿಂದ ಐಟಿ ಇಲಾಖೆಗೆ ಮೊದಲು ಕಾಡಿತ್ತು. ಇದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಡೆಪ್ಯುಟಿ ಡೈರೆಕ್ಟರ್ ಹಂತದ ಅಧಿಕಾರಿಯ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿತ್ತು. ಹೆಟೆರೋ ಕಂಪನಿಯ ಬಗ್ಗೆ ಅಧ್ಯಯನ ನಡೆಸಿದ ತಂಡ, ಹೆಟೆರೋ ಕಂಪನಿ ತೆರಿಗೆ ವಂಚನೆ ನಡೆಸುತ್ತಿರುವ ಬಗ್ಗೆ ದೃಢಪಡಿಸಿತ್ತು.
-
IT raid on a Pharma company in Hyderabad revealed this. I am assuming they have kept clothes in the locker pic.twitter.com/k15SnYdwNB
— Gabbbar (@GabbbarSingh) October 10, 2021 " class="align-text-top noRightClick twitterSection" data="
">IT raid on a Pharma company in Hyderabad revealed this. I am assuming they have kept clothes in the locker pic.twitter.com/k15SnYdwNB
— Gabbbar (@GabbbarSingh) October 10, 2021IT raid on a Pharma company in Hyderabad revealed this. I am assuming they have kept clothes in the locker pic.twitter.com/k15SnYdwNB
— Gabbbar (@GabbbarSingh) October 10, 2021
ಆದಷ್ಟು ಶೀಘ್ರವಾಗಿ ಕ್ರಮ ಕೈಗೊಂಡ ಹಿರಿಯ ಅಧಿಕಾರಿಗಳು ಸುಮಾರು ನೂರು ವಿಶೇಷ ತಂಡಗಳನ್ನು ರಚಿಸಿ, ಅಕ್ಟೋಬರ್ 6ರಂದು 6 ರಾಜ್ಯಗಳ ಸುಮಾರು 50 ಸ್ಥಳಗಳಲ್ಲಿರುವ ಹೆಟೆರೋ ಕಂಪನಿಯ ಕಚೇರಿಗಳು, ಕಂಪನಿಯ ಸಿಇಓಗಳು, ಅಧಿಕಾರಿಗಳು ಹಾಗೂ ಉದ್ಯೋಗಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಪತ್ತೆಯಾದ ಕೀ..
ತನಿಖೆಯ ವೇಳೆ ಮನೆಯೊಂದರಲ್ಲಿ ಅಧಿಕಾರಿಗಳಿಗೆ ಒಂದು ಕೀ ಪತ್ತೆಯಾಗಿದೆ. ಈ ಕೀ ಬಗ್ಗೆ ತನಿಖೆ ನಡೆಸಿದಾಗ ಅದು ಬೇರೊಂದು ಮನೆಯ ಕೀ ಎಂದು ತಿಳಿದು ಬಂದಿದೆ. ಆ ಮನೆಯನ್ನು ತೆರೆದು ನೋಡಿದಾಗ, ಆ ಮನೆಯ ಕಪಾಟುಗಳಲ್ಲಿ ಕೋಟ್ಯಂತರ ರೂಪಾಯಿ ಹಣವಿರುವುದು ಪತ್ತೆಯಾಗಿದೆ.
'ಮೂರನೇ ಮನೆಯ' ಪ್ರೀ ಪ್ಲಾನ್!
ಒಂದು ವೇಳೆ ಐಟಿ ದಾಳಿಗಳು ನಡೆದರೆ, ಅಧಿಕಾರಿಗಳು ಖಂಡಿತ ನೌಕರರ ಮನೆಗೆ ಬರುತ್ತಾರೆ ಎಂದು ಅರಿತಿದ್ದ ವಂಚಕರು, ಚಿನ್ನ ಮತ್ತು ಹಣವನ್ನು ಮೂರನೇ ವ್ಯಕ್ತಿಯ ಮನೆಯಲ್ಲಿ ಇಡುತ್ತಿದ್ದರು. ವಿಶೇಷ ತಂಡವೊಂದು 3 ಅಪಾರ್ಟ್ಮೆಂಟ್ಗಳ ಮೇಲೆ ದಾಳಿ ನಡೆಸಿದ್ದು, ಸುಮಾರು 142 ಕೋಟಿ ರೂಪಾಯಿಯನ್ನು ಜಪ್ತಿ ಮಾಡಿದ್ದಾರೆ.
ಎಸ್ಬಿಐ ಬ್ಯಾಂಕ್ ಅಧಿಕಾರಿಗಳ ಸಹಾಯದ ಮೂಲಕ ಹಣವನ್ನು ಲೆಕ್ಕ ಹಾಕಲಾಗಿದೆ. 4 ಕೆಜಿಯಷ್ಟು ಚಿನ್ನದ ಬಿಸ್ಕೆಟ್ಗಳನ್ನೂ ಕೂಡಾ ಜಪ್ತಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಇಷ್ಟು ಮೊತ್ತದ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡು ಖಾತೆ ಪುಸ್ತಕಗಳ ಬಳಕೆ
ಹೆಟೆರೋ ಕಂಪನಿಯಲ್ಲಿ ಎರಡು ಖಾತೆ ಪುಸ್ತಕಗಳನ್ನು ಬಳಕೆ ಮಾಡಲಾಗುತ್ತಿತ್ತು. ನಿಖರವಾದ ಮಾಹಿತಿಯನ್ನು ಒಂದು ಖಾತೆ ಪುಸ್ತಕದಲ್ಲಿ ಬರೆದಿದ್ದರೆ, ತಮಗಿಷ್ಟ ಬಂದಂತೆ, ನಿಖರ ಮಾಹಿತಿಯನ್ನು ತಿರುಚಿ ಬರೆಯಲಾದ ಮತ್ತೊಂದು ಖಾತೆಯ ಪುಸ್ತಕವೂ ಇತ್ತು.
ಈ ಎರಡು ಪುಸ್ತಕಗಳ ಎಲ್ಲಾ ವಿವರಗಳನ್ನು ಐಟಿ ಸಂಗ್ರಹಿಸಿದೆ. ಈ ಪುಸ್ತಕಗಳಲ್ಲಿ ವೈಯಕ್ತಿಕ ವೆಚ್ಚವನ್ನೂ ಸೇರಿಸಲಾಗಿದೆ. ಪೆನ್ ಡ್ರೈವ್‌ಗಳು, ಹಾರ್ಡ್ ಡಿಸ್ಕ್‌ಗಳನ್ನು ಸಂಗ್ರಹಿಸಲಾಗಿದೆ. 40 ಲಾಕರ್‌ಗಳಲ್ಲಿ ಹಣ, ಬೆಲೆಬಾಳುವ ದಾಖಲೆಗಳು, ಚಿನ್ನ ಪತ್ತೆಯಾಗಿದೆ. ಇನ್ನೂ ಕೆಲವು ದಾಖಲೆಗಳ ತನಿಖೆ ನಡೆಯುತ್ತಿದೆ. ಡಿಜಿಟಲ್ ಮಾಹಿತಿಯ ನಂತರ ಮತ್ತಷ್ಟು ಕುತೂಹಲಕಾರಿ ವಿಚಾರಗಳು ಬೆಳಕಿಗೆ ಬರಲಿವೆ.
ಇದನ್ನೂ ಓದಿ: 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ನಟ ವಿಜಯ್ ಅಭಿಮಾನಿಗಳಿಗೆ ಜಯ.. ತಮಿಳು ರಾಜಕೀಯದತ್ತ ನಟ ತಳಪತಿ?