ETV Bharat / bharat

ಸಿಎಂ ಪಕ್ಕದಲ್ಲಿ ಕೂರಲು ಅನಿವಾಸಿ ಕೇರಳಿಗರಿಗೆ 82 ಲಕ್ಷ ರೂಪಾಯಿ ಚಾರ್ಜ್​: ಕಾಂಗ್ರೆಸ್​​ ಆರೋಪ - ಸಿಎಂ ಪಿಣರಾಯಿ ವಿಜಯನ್​ ವಿವಾದ

ಅಮೆರಿಕದಲ್ಲಿ ನಡೆಯಲಿರುವ ಅನಿವಾಸಿ ಕೇರಳಿಗರ ಸಮಾವೇಶಕ್ಕೂ ಮುನ್ನ ಸಿಎಂ ಪಿಣರಾಯಿ ವಿಜಯನ್​ ವಿರುದ್ಧ ವಿವಾದವೊಂದು ಸುತ್ತಿಕೊಂಡಿದೆ. ಸಿಎಂ ಹೆಸರಿನಲ್ಲಿ ನಿಧಿ ಸಂಗ್ರಹಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಸಿಎಂ ಪಿಣರಾಯಿ ವಿಜಯನ್
ಸಿಎಂ ಪಿಣರಾಯಿ ವಿಜಯನ್
author img

By

Published : Jun 1, 2023, 10:48 PM IST

ತಿರುವನಂತಪುರಂ: ಅಮೆರಿಕದ ನ್ಯೂಯಾರ್ಕ್​ನಲ್ಲಿ ನಡೆಯುವ ಅನಿವಾಸಿ ಕಾರ್ಯಕ್ರಮದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್​ ಪಕ್ಕದಲ್ಲಿ ಕೂರಲು 82 ಲಕ್ಷ ರೂಪಾಯಿ ಪಾವತಿ ಮಾಡಲು ಸೂಚಿಸಲಾಗಿದೆ. ಇದು ದಕ್ಷಿಣ ರಾಜ್ಯದ ಸರ್ಕಾರ ಜನರಿಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್​ ಆರೋಪಿಸಿದೆ.

ಜೂನ್ 9, 10 ಮತ್ತು 11 ರಂದು ನ್ಯೂಯಾರ್ಕ್‌ನಲ್ಲಿ ಅನಿವಾಸಿ ಕೇರಳಿಗರ ಸಮಾವೇಶವನ್ನು ನಿಗದಿಪಡಿಸಲಾಗಿದೆ. ಪಿಣರಾಯಿ ವಿಜಯನ್​ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ವೇಳೆ, ಅವರ ಪಕ್ಕ ವೇದಿಕೆ ಮೇಲೆ ಕೂರಲು ಅನಿವಾಸಿ ಕೇರಳಿಗರು ಹಣ ನೀಡಬೇಕು ಎಂದು ಸೂಚಿಸಲಾಗಿದೆ. ಈ ಮೂಲಕ ನಿಧಿ ಸಂಗ್ರಹಣೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್​ ನಾಯಕ, ವಿರೋಧ ಪಕ್ಷದ ನಾಯಕ ವಿ ಡಿ ಸತೀಶ್​ ದೂರಿದ್ದಾರೆ.

ಅಮೆರಿಕದಲ್ಲಿ ನಡೆಯಲಿರುವ ಅನಿವಾಸಿ ಕೇರಳೀಯರ ಸಮಾವೇಶವಾದ 'ಲೋಕ ಕೇರಳ ಸಭೆ'ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ಮಧ್ಯೆಯೇ ಮುಖ್ಯಮಂತ್ರಿ ಪಿಣರಾಯಿ ಅವರು ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಕಮ್ಯುನಿಸ್ಟ್ ಪಕ್ಷದ ಸಿಎಂ ಉಳ್ಳವ - ಇಲ್ಲದವರ ನಡುವಿನ ವ್ಯತ್ಯಾಸವನ್ನು ಜಗತ್ತಿಗೆ ತೋರಿಸುತ್ತಿದ್ದಾರೆ. ಸಿಎಂ ಹತ್ತಿರ ಕುಳಿತುಕೊಳ್ಳಲು 82 ಲಕ್ಷ ರೂ. ಮೊತ್ತವನ್ನು ಪಾವತಿಸಬೇಕಂತೆ. ರಾಜ್ಯ ಮತ್ತು ಸಿಎಂ ಹೆಸರಿನಲ್ಲಿ ಇಂತಹ ನಿಧಿ ಸಂಗ್ರಹಕ್ಕೆ ಅನುಮತಿ ನೀಡಿದವರು ಯಾರು? ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದು ಕೇರಳ ಸರ್ಕಾರದ ಪ್ರತಿಷ್ಠೆಯನ್ನು ಹಾಳು ಮಾಡಲಿದೆ. ಮುಖ್ಯಮಂತ್ರಿಯ ಹತ್ತಿರ ಕುಳಿತುಕೊಳ್ಳಲು ಅಥವಾ ನಿಂತುಕೊಳ್ಳಲು 25,000 ದಿಂದ 100,000 ವರೆಗಿನ ಅಮೆರಿಕನ್​ ಡಾಲರ್​ ಆಫರ್ ನೀಡಲಾಗಿದೆ. ರಾಜ್ಯಕ್ಕೆ ಅವಮಾನಕರ ಸಂಗತಿ ಎಂದು ಕಾಂಗ್ರೆಸ್​ ಕಿಡಿಕಾರಿದೆ.

ಆರೋಪ ನಿರಾಕರಣೆ: ಆಡಳಿತಾರೂಢ ಎಡಪಕ್ಷ ಮತ್ತು ಅನಿವಾಸಿ ಕೇರಳೀಯರ ವ್ಯವಹಾರಗಳ ಇಲಾಖೆ (ನಾರ್ಕಾ) ನಿಧಿಸಂಗ್ರಹದ ಆರೋಪವನ್ನು ನಿರಾಕರಿಸಿದೆ. ಕೇರಳದ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ಆರೋಪ ತಲ್ಳಿಹಾಕಿ, ನಾರ್ಕಾ ಸಂಸ್ಥೆಯೇ ಎಲ್ಲವನ್ನೂ ನಿಭಾಯಿಸುತ್ತಿರುವುದರಿಂದ ಯಾವುದೇ ನಿಧಿ ಸಂಗ್ರಹಣೆ ಮಾಡುತ್ತಿರುವುದು ತಮಗೆ ತಿಳಿದಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ. ಈ ರೀತಿ ನಿಧಿ ಸಂಗ್ರಹಣೆಯನ್ನು ಸರ್ಕಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಕಾರ್ಯಕ್ರಮ ಆಯೋಜಿಸುತ್ತಿರುವ ನಾರ್ಕಾ ಸಂಸ್ಥೆಯ ಉಪಾಧ್ಯಕ್ಷ ಪಿ ಶ್ರೀರಾಮಕೃಷ್ಣನ್ ಕೂಡ ಆರೋಪ ಸುಳ್ಳೆಂದು ಹೇಳಿದ್ದು, ಕೇರಳ ಸರ್ಕಾರ ಮತ್ತು ನಾರ್ಕಾ ಸಿಎಂ ಪ್ರಯಾಣದ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ಅಮೆರಿಕದಲ್ಲಿರುವ ಕೇರಳಿಗರಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಅವರ ಹೆಸರಿನಲ್ಲಿ ಯಾವುದೇ ಶುಲ್ಕ ವಿಧಿಸಲಾಗಿಲ್ಲ. ನಿಧಿಸಂಗ್ರಹಣೆ ನಡೆಸಲಾಗಿಲ್ಲ ಎಂದು ಹೇಳಿದರು. ಆದರೆ ಈ ಮೊತ್ತವನ್ನು 3 ದಿನಗಳ ಸಮ್ಮೇಳನಕ್ಕಾಗಿ "ಪ್ರಾಯೋಜಕತ್ವ" ನೀಡಲು ಸಂಗ್ರಹಿಸಿರಬಹುದು ಎಂದು ಹೇಳಿದರು.

ಮುಖ್ಯಮಂತ್ರಿಯನ್ನು ಭೇಟಿ ಮಾಡುವ ಮತ್ತು ಅವರ ಜೊತೆಗೆ ಸಂವಾದ ನಡೆಸುವ ಸಲುವಾಗಿ ಹಣದ ಆಫರ್​ ನೀಡಲಾಗಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: ಎನ್​ಸಿಇಆರ್​ಟಿ ಹತ್ತನೇ ಕ್ಲಾಸ್​ ಪಠ್ಯಕ್ರಮಕ್ಕೆ ಕತ್ತರಿ..ಆವರ್ತಕ ಕೋಷ್ಠಕ, ಪ್ರಜಾಪ್ರಭುತ್ವ ವಿಷಯ ಕಡಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.