ETV Bharat / bharat

ರೈಲಿನಡಿ ಸಿಲುಕಿದ ವ್ಯಕ್ತಿಯ ಪ್ರಾಣ ಉಳಿಸಿದ ಪೊಲೀಸ್: ಸಿಸಿಟಿವಿಯಲ್ಲಿ ಘಟನೆ ಸೆರೆ

author img

By

Published : Apr 26, 2022, 5:42 PM IST

ಚಲಿಸುತ್ತಿದ್ದ ರೈಲು ಹತ್ತುವಾಗ ಆಯತಪ್ಪಿ ಬಿದ್ದ ಪ್ರಯಾಣಿಕನ ಪ್ರಾಣವನ್ನು ಆರ್​ಪಿಎಫ್​ ಸಿಬ್ಬಂದಿಯೊಬ್ಬರು ರಕ್ಷಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

rpf-police-saved
ವ್ಯಕ್ತಿಯ ಪ್ರಾಣ ಉಳಿಸಿದ ಪೊಲೀಸ್

ಮುಂಬೈ: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಆಯತಪ್ಪಿ ಬಿದ್ದು ರೈಲಿಗೆ ಸಿಲುಕಿದ್ದ ವ್ಯಕ್ತಿಯನ್ನು ಆರ್​ಪಿಎಫ್​ ಪೊಲೀಸ್​ ಸಿಬ್ಬಂದಿ ರಕ್ಷಿಸಿದ್ದಾನೆ. ಪಶ್ಚಿಮ ರೈಲ್ವೆಯ ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಘಟನೆ ನಡೆದಿದೆ.

ನಿಲ್ದಾಣದಿಂದ ರೈಲು ಚಲಿಸುತ್ತಿದ್ದಾಗ ಹತ್ತಲು ಹೋದ ವ್ಯಕ್ತಿಯೊಬ್ಬ ಆಯತಪ್ಪಿ ಪ್ಲಾಟ್‌ಫಾರ್ಮ್ ಮತ್ತು ರೈಲಿನ ನಡುವಿನ ಜಾಗಕ್ಕೆ ಬಿದ್ದಿದ್ದಾನೆ. ಇನ್ನೇನು ಆ ವ್ಯಕ್ತಿ ರೈಲಿನಡಿ ಸಿಲುಕಬೇಕಿದ್ದ ಸಮಯಕ್ಕೆ ಅಲ್ಲಿಯೇ ಇದ್ದ ಆರ್​ಪಿಎಫ್​ ಪೊಲೀಸ್ ಕಾನ್​ಸ್ಟೇಬಲ್​ ಹರೇಂದ್ರ ಸಿಂಗ್​ ಆ ವ್ಯಕ್ತಿಯನ್ನೆಳೆದು ಪ್ರಾಣ ರಕ್ಷಿಸಿದರು.

ಈ ಘಟನೆಯು ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಯಾಣಿಕನ ಪ್ರಾಣ ಉಳಿಸಿದ್ದಕ್ಕಾಗಿ ಆರ್‌ಪಿಎಫ್ ಕಾನ್‌ಸ್ಟೇಬಲ್ ಹರೇಂದ್ರ ಸಿಂಗ್​​ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಉಕ್ರೇನ್ 3ನೇ ಮಹಾಯುದ್ಧವನ್ನು ಪ್ರಚೋದಿಸುತ್ತಿದೆ: ರಷ್ಯಾ ಎಚ್ಚರಿಕೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.