ಚಿತ್ತೂರು : ಚಿತ್ತೂರು ಜಿಲ್ಲೆಯಲ್ಲಿ ಘೋರ ರಸ್ತೆ ಅಪಘಾತವೊಂದರಲ್ಲಿ ಕಾರೊಂದು ಹೊತ್ತಿ ಉರಿದು ಮಗು ಸೇರಿ ಏಳು ಮಂದಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಭಾನುವಾರ ನಡೆದಿದೆ.
ಪುತಲಪಟ್ಟು-ನಾಯ್ಡುಪೇಟೆ ಹೆದ್ದಾರಿಯ ಅಗರಾಳ ಎಂಬಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಉರುಳಿ ಬಿದ್ದು, ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಕಾರಿನಲ್ಲಿದ್ದ ಮಗು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಮೂವರು ಅದೃಷ್ಟವಶಾತ್ ಬದುಕುಳಿದಿದ್ದಾರೆ. ತೀವ್ರ ಸುಟ್ಟ ಗಾಯಗಳೊಂದಿಗೆ ತಿರುಪತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: 'ನಿಮ್ಮ ಮಕ್ಕಳ ಮೇಲೆ ನೀವು ಲಾಠಿ ಬೀಸ್ತೀರಾ'.. ಯೋಗಿ ಸರ್ಕಾರದ ವಿರುದ್ಧ ಸಂಸದ ವರುಣ್ ಗಾಂಧಿ ಮತ್ತೆ ಗರಂ
ಮೃತರು ವಿಜಯನಗರ ಜಿಲ್ಲೆಯ ನಿವಾಸಿಗಳು ಎಂದು ತಿಳಿದು ಬಂದಿದೆ. ಅಪಘಾತದ ಕಾರಿನ ಸಂಖ್ಯೆ ಎಪಿ39 ಎಚ್ಎ 4003 ಎಂದು ಗುರುತಿಸಲಾಗಿದೆ. ಕಾರಿಗೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ.