ನವದೆಹಲಿ: ದೇಶಾದ್ಯಂತ ಹನುಮಾನ್ ಚಾಲೀಸಾ ಪಠಣೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಇಂದು ನವದೆಹಲಿಯಲ್ಲಿ ಬಲಪಂಥೀಯ ಗುಂಪಿನ ಸದಸ್ಯರು ಕುತುಬ್ ಮಿನಾರ್ ಹೊರಗೆ ಹನುಮಾನ್ ಚಾಲೀಸಾ ಪಠಿಸಿ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ಸಾಂಪ್ರದಾಯಿಕ ಸ್ಮಾರಕವನ್ನು 'ವಿಷ್ಣು ಸ್ತಂಭ' ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದರು. ಈ ಸಂಬಂಧ ದೆಹಲಿ ಪೊಲೀಸರು ಕನಿಷ್ಠ 30 ಮಂದಿ ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆ ಮಾಡಿದರು.
ಟ್ರಾಫಿಕ್ ಕಿರಿಕಿರಿ - ಬಂಧನ: ರಸ್ತೆ ಮಧ್ಯದಲ್ಲಿ ಕುಳಿತು ಪ್ರತಿಭಟನೆ ಮಾಡಿದ್ದರಿಂದ ಟ್ರಾಫಿಕ್ ಕಿರಿಕಿರಿ ಉಂಟಾಯಿತು. ಪ್ರಯಾಣಿಕರು ಟ್ರಾಫಿಕ್ನಿಂದಾಗಿ ಕಿರಿಕಿರಿ ಅನುಭವಿಸಿದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
ಯುನೈಟೆಡ್ ಹಿಂದೂ ಫ್ರಂಟ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಭಗವಾನ್ ಗೋಯಲ್ ಮಾತನಾಡಿ, ಕುತುಬ್ ಮಿನಾರ್ ಅನ್ನು ಮಹಾರಾಜ ವಿಕ್ರಮಾದಿತ್ಯ ನಿರ್ಮಿಸಿದ್ದರು. ಹಾಗಾಗಿ ಇದಕ್ಕೆ ವಿಷ್ಣು ಸ್ತಂಭ ಎಂದು ನಾಮಕರಣ ಮಾಡಬೇಕು ಎಂದು ಪ್ರತಿಪಾದಿಸಿದರು.
ಇದನ್ನು ಓದಿ: ಯುಪಿ ಗೃಹ ಸಚಿವರ ಹೇಳಿಕೆಯಿಂದ ಲಖೀಂಪುರ ಹತ್ಯಾಕಾಂಡ : ಪ್ರಿಯಾಂಕಾ ಗಾಂಧಿ ಆರೋಪ