ವಾರಣಾಸಿ (ಉತ್ತರ ಪ್ರದೇಶ) : 28 ವರ್ಷಗಳ ಹಿಂದೆ ದಾಖಲಾದ ಅವ್ಯವಹಾರ ಪ್ರಕರಣ ಸಾಬೀತಾದ ಹಿನ್ನೆಲೆ ನಿವೃತ್ತ ಜೂನಿಯರ್ ಇಂಜಿನಿಯರ್‌ಗೆ ಭ್ರಷ್ಟಾಚಾರ ತಡೆ ಕಾಯ್ದೆಯ ವಿಶೇಷ ನ್ಯಾಯಾಲಯವು ಶುಕ್ರವಾರ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕೈಲಾಶ್ ಸಿಂಗ್ ಶಿಕ್ಷೆಗೆ ಗುರಿಯಾದ ಆರೋಪಿ. ನ್ಯಾಯಮೂರ್ತಿ ಅವನೀಶ್ ಗೌತಮ್ ಅವರಿದ್ದ ಪೀಠವು ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ಬಲ್ಲಿಯಾದ ಇಂದಿರಾ ಆವಾಸ್ ನಿರ್ಮಾಣ ಸಮಿತಿಯ ಕಾರ್ಯದರ್ಶಿ ಮತ್ತು ಲಕ್ನೋದ ಮೋಹನ್‌ಲಾಲ್‌ಗಂಜ್‌ನ ನಿವಾಸಿ ಕೈಲಾಶ್ ಸಿಂಗ್ (65) ಅವರು ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದಾರೆ. ಪ್ರಸ್ತುತ ಲಕ್ನೋದಲ್ಲಿ ವಾಸಿಸುತ್ತಿದ್ದಾರೆ. ಮೇ 23,1995 ರಂದು ವಿಜಿಲೆನ್ಸ್ ಎಸ್ಟಾಬ್ಲಿಷ್ಮೆಂಟ್ ವಾರಣಾಸಿ ಡೆಪ್ಯುಟಿ ಎಸ್ಪಿ ರಾಧೆ ಸಿಂಗ್ ಯಾದವ್ ಅವರು ಬಲ್ಲಿಯಾ ಜಿಲ್ಲೆಯ ಸಿಕಂದರಪುರ ಪೊಲೀಸ್ ಠಾಣೆಯಲ್ಲಿ ಅವ್ಯವಹಾರ ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಿಸಿದ್ದರು.
ಇದನ್ನೂ ಓದಿ : ಲವ್ ಮಾಡದಿದ್ದರೆ ಕೊಲೆ ಮಾಡ್ತೇನಿ ಎಂದಿದ್ದ ಇಬ್ಬರಿಗೆ ಪಾಠ ಕಲಿಸಿದ ಚಾಮರಾಜನಗರ ಜಡ್ಜ್ : 22 ದಿನ ಜೈಲೂಟ
ಈ ಬಗ್ಗೆ ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ (ಎಡಿಜಿಸಿ) ಅಲೋಕ್ ಕುಮಾರ್ ಶ್ರೀವಾಸ್ತವ ಅವರು ಬಲ್ಲಿಯಾ ಅಭಿವೃದ್ಧಿ ಬ್ಲಾಕ್‌ನ ಅಧಿಕಾರಿಗಳು ಮತ್ತು ನೌಕರರು 1987-88 ಮತ್ತು 88-89 ರ ಆರ್ಥಿಕ ವರ್ಷಗಳಲ್ಲಿ ರಸ್ತೆ ನಿರ್ಮಾಣ, ಮರ ನೆಡುವಿಕೆ, ಸಂಪರ್ಕ ರಸ್ತೆ, ಚರಂಡಿ ನಿರ್ಮಾಣ, ಶೌಚಾಲಯದ ಕಾಮಗಾರಿಗಳಲ್ಲಿ ವಂಚನೆ ಮಾಡಿದ್ದಾರೆ. ಕಾರ್ಮಿಕರಿಗೆ ಆಹಾರ ಧಾನ್ಯ ನೀಡುವ ಯೋಜನೆಯಲ್ಲಿ ಸಹ ಅವ್ಯವಹಾರ ನಡೆಸಲಾಗಿದೆ. ಉದ್ದೇಶಿತ ಕಾಮಗಾರಿ ಪೂರ್ಣಗೊಂಡಿಲ್ಲ, ಆದರೂ ನಕಲಿ ದಾಖಲೆಗಳನ್ನು ತೋರಿಸಿ ಹಣ ಬಿಡುಗಡೆ ಮಾಡಲಾಗಿದೆ. ಸರ್ಕಾರದಿಂದ ಪಡೆದ ಆಹಾರ ಧಾನ್ಯಗಳ ವಿತರಣೆಯಲ್ಲಿ ಗಂಭೀರ ಅಕ್ರಮ ಎಸಗಲಾಗಿದೆ. ಕೂಲಿ ಕಾರ್ಮಿಕರಿಗೆ ಆಹಾರ ಧಾನ್ಯ ನೀಡದೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ : ಕೆಲಸ ಬಿಡಿಸಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ: ಆರೋಪಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಈ ಕುರಿತು ಸಂಸ್ಥೆಯು 20 ಫೆಬ್ರವರಿ 1995 ರಂದು ತನಿಖೆಗೆ ಆದೇಶಿಸಿತು. ಬಳಿಕ, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಏಪ್ರಿಲ್ 20, 2015 ರಂದು ಆರೋಪವನ್ನು ನಿಗದಿಪಡಿಸಲಾಗಿತ್ತು. ಸಾಕ್ಷಿಗಳ ಹೇಳಿಕೆಯ ನಂತರ ಅಪರಾಧ ಸಾಬೀತಾದ ಕಾರಣ ನ್ಯಾಯಾಲಯವು ಜೂನಿಯರ್ ಇಂಜಿನಿಯರ್ ಕೈಲಾಶ್ ಸಿಂಗ್ ತಪ್ಪಿತಸ್ಥರೆಂದು ಘೋಷಿಸಿ ಶುಕ್ರವಾರ ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ : ಸರ್ಕಾರಿ ಹಣ ದುರುಪಯೋಗ : ತರೀಕೆರೆ ಅರಣ್ಯ ಇಲಾಖೆ ನೌಕರನಿಗೆ ಜೈಲು ಶಿಕ್ಷೆ
ಇನ್ನು ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡ ಆರೋಪಿಗೆ ಜಿಲ್ಲೆಯ ತರೀಕೆರೆ ತಾಲೂಕು ಜೆಎಂಎಫ್ಸಿ ನ್ಯಾಯಾಲಯವು 2020 ರ ಆಗಸ್ಟ್ ತಿಂಗಳಲ್ಲಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಮೇಲಾಧಿಕಾರಿ ಸಹಿ ನಕಲು ಮಾಡಿ ಹಣ ದುರುಪಯೋಗ ಮಾಡಿಕೊಂಡಿದ್ದ ಆರೋಪಿ ಮೋಹನ್ ಕುಮಾರ್ಗೆ ಶಿಕ್ಷೆ ವಿಧಿಸಲಾಗಿತ್ತು. ಅರಣ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಆರೋಪಿಯು ಒಂದು ಕೋಟಿಗೂ ಹೆಚ್ಚು ಹಣ ದುರುಪಯೋಗ ಮಾಡಿಕೊಂಡ ಆರೋಪ ಸಾಬೀತಾಗಿತ್ತು.