ನವದೆಹಲಿ: ಮಹಾಮಾರಿ ಕೋವಿಡ್ ಆತಂಕದ ನಡುವೆ ಕೂಡ 73ನೇ ಗಣರಾಜ್ಯೋತ್ಸವ ಆಚರಣೆ ಸಂಭ್ರಮದಿಂದ ನಡೆಯಿತು. ನವದೆಹಲಿಯ ರಾಜಪಥನಲ್ಲಿ ನಡೆದ ಪರೇಡ್ನಲ್ಲಿ ಭಾರತೀಯ ಸೇನೆಯ ನಾರಿಮಣಿಗಳು ತಮ್ಮ ಅಮೋಘ ಪ್ರದರ್ಶನ ಹೊರಹಾಕಿದರು.
ಗಡಿ ಭದ್ರತಾ ಪಡೆ(ಬಿಎಸ್ಎಫ್) ಮಹಿಳಾ ತಂಡ ಗಜರಾಜ್ಯೋತ್ಸವ ಪರೇಡ್ ವೇಳೆ ವಿವಿಧ ರೋಮಾಂಚನಕಾರಿಯಾದ ಸ್ಟಂಟ್ ಮಾಡಿ, ಎಲ್ಲರ ಗಮನ ಸೆಳೆಯಿತು. ಪ್ರಮುಖವಾಗಿ ಸೀಮಾ ಭವಾನಿ ಮೋಟಾರ್ ಸೈಕಲ್ ತಂಡ ರಾಷ್ಟ್ರಪತಿಗೆ ಗೌರವ ವಂದನೆ ಸಲ್ಲಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿತು.
ಇದನ್ನೂ ಓದಿರಿ: ಗಣರಾಜ್ಯೋತ್ಸವ ಸಂಭ್ರಮದ ವೇಳೆ ವಿದ್ಯುತ್ ಸ್ಪರ್ಶ; ಓರ್ವ ವಿದ್ಯಾರ್ಥಿ ಸಾವು, ಮೂವರು ಮಕ್ಕಳಿಗೆ ಗಾಯ
ಇನ್ಸ್ಪೆಕ್ಟರ್ ಹಿಮಾಂಶು ಸಿರೋಹಿ, ಸಬ್ ಇನ್ಸ್ಪೆಕ್ಟರ್ ಸೋನಿಯಾ ಬನ್ವಾರಿ ಹಾಗೂ ಕಾನ್ಸ್ಟೇಬಲ್ ಅನಿಮಾ ಕುಮಾರ್ ನೇತೃತ್ವದಲ್ಲಿ ವಿಶೇಷ ರೈಡಿಂಗ್ ನಡೆಯಿತು. 2022ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಪ್ರಮುಖವಾಗಿ ಭಾರತದ ಮಿಲಿಟರಿ ಶಕ್ತಿ ಮತ್ತು ಸಾಂಸ್ಕೃತಿಕ ವೈವಿದ್ಯತೆ ಪ್ರದರ್ಶನಗೊಂಡಿತು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ