ನವದೆಹಲಿ: ದೇಶಾದ್ಯಂತ ಮೇ 1ರಿಂದ 18 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾಗಲಿದೆ. ಏಪ್ರಿಲ್ 24ರೊಳಗೆ ಕೋವಿನ್‌ನಲ್ಲಿ ಲಸಿಕೆ ಹಾಕಿಸಿಕೊಳ್ಳಲು ಇಚ್ಛಿಸುವವರು ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.
ಪ್ರಸ್ತುತ ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎಂಬ ಎರಡು ಕೊರೊನಾ ವೈರಸ್ ಲಸಿಕೆಗಳು ಲಭ್ಯವಿದ್ದರೆ, ರಷ್ಯಾದ ಲಸಿಕೆ ಸ್ಪುಟ್ನಿಕ್ ವಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದಕ್ಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಸ್ಪುಟ್ನಿಕ್ ವಿ ಶೀಘ್ರದಲ್ಲೇ ಕೆಲವು ಕೇಂದ್ರಗಳಲ್ಲಿ ಲಭ್ಯವಾಗಲಿದೆ.
ಚುಚ್ಚುಮದ್ದಿನ ಪ್ರಕ್ರಿಯೆಗೆ ಸರ್ಕಾರಿ ಹಾಗೂ ಖಾಸಗಿ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಸಮಯ ಮತ್ತು ದಿನಾಂಕ ಕಾಯ್ದಿರಿಸಲು ಜನರಿಗೆ ನೆರವಾಗಲು ಖಾಸಗಿ ಸಂಸ್ಥೆಗಳು ಕೋವಿನ್ ಅಪ್ಲಿಕೇಷನ್‌ನಲ್ಲಿ ಟೈಮ್ ಟೇಬಲ್ ಪ್ರಕಟಿಸುತ್ತವೆ. ಈಗಿನ ನಡಾವಳಿಗೆ ಅನುಗುಣವಾಗಿ, ಫಲಾನುಭವಿಗಳಿಗೆ ಲಸಿಕೆ ಹಾಕಿದ ನಂತರ ರೋಗ ನಿರೋಧಕ (ಎಇಎಫ್‌ಐ) ಪರಿಶೀಲನೆಗಾಗಿ ಸ್ವಲ್ಪ ಸಮಯದವರೆಗೆ ಮೇಲ್ವಿಚಾರಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಕೋವಿಡ್ ಕೋಲಾಹಲ : ಕಾದು ನೋಡುವ ತಂತ್ರದ ಮೊರೆ ಹೋಗುವಂತೆ ಹಣಕಾಸು ಸಚಿವರ ಕರೆ
ಕೋವಿಡ್ -19 ವ್ಯಾಕ್ಸಿನೇಷನ್‌ನ ಉದಾರೀಕರಣ ಮತ್ತು ವೇಗದ ವಿತರಣೆಗೆ 3ನೇ ಹಂತದ ತಂತ್ರವಾಗಿ ಸರ್ಕಾರವು ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವ್ಯಕ್ತಿಗಳು ಲಸಿಕೆ ಪಡೆಯಲು ಅರ್ಹರನ್ನಾಗಿ ಮಾಡಿದೆ. ಹೆಚ್ಚುವರಿಯಾಗಿ ಕೇರಳ, ಬಿಹಾರ, ಅಸ್ಸೋಂ, ಮಧ್ಯಪ್ರದೇಶ, ಉತ್ತರ ಪ್ರದೇಶ, ಛತ್ತೀಸ್‌ಗಢ ದಂತಹ ಕೆಲವು ರಾಜ್ಯಗಳು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನೇಷನ್ ಘೋಷಿಸಿವೆ.
ಕೋವಿನ್‌ನಲ್ಲಿ ವ್ಯಾಕ್ಸಿನೇಷನ್ ನೋಂದಣಿ ವಿಧಾನ:
- ಕೋವಿನ್ (Cowin.gov.in)ಗೆ ಲಾಗ್ ಇನ್ ಆಗಿಬೇಕು
- ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ, ಖಾತೆ ಸೃಷ್ಟಿಸಲು ಸ್ವೀಕೃತ ಒಟಿಪಿ ನಮೂದಿಸಬೇಕು
- ಒಟಿಪಿ ನಮೂದಿಸಿ, ಪರಿಶೀಲನೆ ಬಟನ್ ಕ್ಲಿಕ್ ಮಾಡಿ
- ಮೌಲ್ಯೀಕರಣದ ಬಳಿಕ ವ್ಯಾಕ್ಸಿನೇಷನ್ ಪುಟದ ನೋಂದಣಿ ತೆರೆದುಕೊಳ್ಳುತ್ತದೆ
- ಫೋಟೋ ಐಡಿ ಪ್ರೂಫ್ ಜೊತೆಗೆ ಅಗತ್ಯವಿರುವ ವಿವರ ನಮೂದಿಸಿ
- ನೀವು ಹೊಂದಿದ್ದರೆ ಕೊಮೊರ್ಬಿಡಿಟಿಗಳ ವಿವರ ನೀಡಿ
- ಒಮ್ಮೆ ಮಾಹಿತಿ ಭರ್ತಿ ಮಾಡಿದ ನಂತರ, ಕೆಳಗಿನ ಬಲಭಾಗದಲ್ಲಿ ಇರುವ ರಿಜಿಸ್ಟರ್ ಬಟನ್ ಕ್ಲಿಕ್ ಮಾಡಿ
- ನೋಂದಣಿ ಮುಗಿದ ನಂತರ, ನಿಮಗೆ ಖಾತೆ ವಿವರ ತೋರಿಸಲಾಗುತ್ತದೆ
- ನೀವು ಹೆಚ್ಚಿನ ಜನರನ್ನು ಸೇರಿಸಲು ಬಯಸಿದರೆ, ಪುಟದ ಕೆಳಗಿನ ಬಲಭಾಗದಲ್ಲಿರುವ ಆ್ಯಡ್ ಮೋರ್ ಬಟನ್ ಕ್ಲಿಕ್ ಮಾಡಿ ಮತ್ತು ಎಲ್ಲಾ ವಿವರಗಳನ್ನು ನಮೂದಿಸಿ