ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಸುರಿದಿರುವ ಭಾರಿ ಮಳೆಯು ಕಳೆದ 19 ವರ್ಷಗಳ ದಾಖಲೆಯನ್ನು ಬ್ರೇಕ್ ಮಾಡಿದೆ. ಕಳೆದ 30 ಗಂಟೆಗಳಲ್ಲಿ ದೆಹಲಿಯ ಲೋಧಿ ರಸ್ತೆಯಲ್ಲಿ 190 ಮಿ.ಮೀ ಮಳೆಯಾಗಿದೆ.
ಸಫ್ದರ್ಜಂಗ್ನಲ್ಲಿ 188.6 ಮಿ.ಮೀ., ರಿಡ್ಜ್ನಲ್ಲಿ 133.6 ಮಿ.ಮೀ., ಅಯಾ ನಗರದಲ್ಲಿ 114.6 ಮಿ.ಮೀ., ಪಾಲಂನಲ್ಲಿ 192.1 ಮಿ.ಮೀ.ನಷ್ಟು ಮಳೆಯಾಗಿದೆ. ಕಳೆದ 27 ಗಂಟೆಗಳಲ್ಲಿ, ದೆಹಲಿಯಲ್ಲಿ 190 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಇದನ್ನೂ ಓದಿ: ನೇಪಾಳ ಗಡಿಯಲ್ಲಿ ಭಾರಿ ಮಳೆ: ಉತ್ತರಾಖಂಡದಲ್ಲಿ ಭೂಕುಸಿತ; ಕೃತಕ ಸರೋವರ ನಿರ್ಮಾಣ
ಮುಡ್ಕಾ, ನಜಾಫ್ಗಢ, ದ್ವಾರಕಾ, ಪಾಲಂ ಐಜಿಐ, ವಿಮಾನ ನಿಲ್ದಾಣ, ದೆಹಲಿಯ ಪಕ್ಕದ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬುಧವಾರ ಕನಿಷ್ಠ ತಾಪಮಾನ 24 ಡಿಗ್ರಿ, ಗರಿಷ್ಠ ತಾಪಮಾನ 29 ಡಿಗ್ರಿಯಷ್ಟಿತ್ತು.