ಕೋಲ್ಕತ್ತಾ : ಕೇಂದ್ರದ ಆಡಳಿತಾರೂಢ ಭಾರತೀಯ ಜನತಾ ಪಕ್ಷ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನಿಜವಾದ ಹಿಂದೂ ಧರ್ಮವನ್ನು ಮರೆತು ಇತಿಹಾಸವನ್ನು ಬದಲಾಯಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಬಿಜೆಪಿ ಎಲ್ಲವನ್ನೂ ನಾಶಪಡಿಸುತ್ತಿದೆ. ಅವರು ಇತಿಹಾಸವನ್ನು ಬದಲಾಯಿಸುತ್ತಿದ್ದಾರೆ. ಮಹಿಳೆಯರು, ದಲಿತರು ಮತ್ತು ಆದಿವಾಸಿಗಳನ್ನು ಹಿಂಸಿಸುತ್ತಿದ್ದಾರೆ.
ನಿಜವಾದ ಹಿಂದೂ ಧರ್ಮವನ್ನು ಮರೆತುಬಿಡುತ್ತಿದ್ದಾರೆ. ಚುನಾವಣೆಗಳು ಬಂದಾಗ ಅವರು 'ಸಾಧು' (ಸಂತ) ಆಗುತ್ತಾರೆ ಮತ್ತು ತಮ್ಮನ್ನು ತಾವು ಸಂತ ಎಂದು ತೋರಿಸಿಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.
ಓದಿ: ಪುನೀತ್ ರಾಜಕುಮಾರ್ ಕೊನೆಯ ಚಿತ್ರದ ಟೀಸರ್ ರಿಲೀಸ್.. ಹಾಲಿವುಡ್ ರೇಂಜ್ನಲ್ಲಿ ಮೂಡಿ ಬಂದ ಪವರ್ಸ್ಟಾರ್..
ದೆಹಲಿಯಲ್ಲಿ ಮೊದಲ ಅಮರ್ ಜವಾನ್ ಜ್ಯೋತಿಯನ್ನು ತೆಗೆದು ಹಾಕಲಾಯಿತು ಮತ್ತು ಅವರು ನೇತಾಜಿಯ ಹೊಲೊಗ್ರಾಮ್ ಅನ್ನು ಸ್ಥಾಪಿಸಿದರು. ಈಗ ಹೊಲೊಗ್ರಾಮ್ ಸಹ ಕಾಣೆಯಾಗಿದೆ. ಅವರು ಚುನಾವಣೆಗಳಿದ್ದಾಗ ಮಾತ್ರ ಐಕಾನ್‌ಗಳ ಹೆಸರನ್ನು ನೆನಪಿಸಿಕೊಳ್ಳುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡಿಸಿದರು.
ರೈತರ ಪ್ರತಿಭಟನೆಯನ್ನು ಉಲ್ಲೇಖಿಸಿ ಮಾತನಾಡಿ, ರೈತರು ದೀರ್ಘಕಾಲ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಅವರಿಗೆ ಕನಿಷ್ಠ ಬೆಂಬಲ ಬೆಲೆ ಇನ್ನು ಸಿಕ್ಕಿಲ್ಲ ಎಂದು ಹೇಳಿದರು. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ಹೂಡಿಕೆ ಹಿಂತೆಗೆದುಕೊಳ್ಳುವಿಕೆಯ ಕುರಿತು ಅವರು ಸರ್ಕಾರದ ಮೇಲೆ ದಾಳಿ ನಡೆಸಿದರು.
ದೇಶವು ಮಾರಾಟವಾದರೆ, ಜನರು ಹೇಗೆ ಬದುಕುತ್ತಾರೆ. ಅವರು ಎನ್‌ಆರ್‌ಸಿಯನ್ನು ಪರಿಚಯಿಸುವ ಮೂಲಕ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ. ಆದರೆ, ನಾವು ಜನರ ಹಕ್ಕುಗಳನ್ನು ರಕ್ಷಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧವೂ ದೀದಿ ವಾಗ್ದಾಳಿ ನಡೆಸಿದರು. ಚುನಾವಣೆಗೆ ಮುನ್ನ ಕೆಲವು ವಲಸೆ ಹಕ್ಕಿಗಳು ಪಾಪ್ ಅಪ್ ಆಗುತ್ತವೆ ಎಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹೆಸರನ್ನು ಉಲ್ಲೇಖಿಸದೆ ತಿವಿದರು.