ETV Bharat / bharat

ಆರ್‌ಬಿಐಯಿಂದ ಮೊದಲ ಡಿಜಿಟಲ್ ರೂಪಾಯಿ: ಪ್ರಾಯೋಗಿಕ ಬಳಕೆ ಇಂದಿನಿಂದ ಶುರು

author img

By

Published : Oct 31, 2022, 10:15 PM IST

Updated : Nov 1, 2022, 6:24 AM IST

ಭಾರತದ ಮೊದಲ ಡಿಜಿಟಲ್​​ ರೂಪಾಯಿಯ ಪ್ರಾಯೋಗಿಕ​ ಬಳಕೆ ಇಂದಿನಿಂದ ಆರಂಭವಾಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್​ಬಿಐ) ಹೇಳಿದೆ.

rbi-to-launch-first-pilot-of-digital-rupee-on-tuesday
ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆ ನಾಳೆಯಿಂದ ಪ್ರಾರಂಭ

ಮುಂಬೈ: ಭಾರತದ ಮೊದಲ ಡಿಜಿಟಲ್​​ ರೂಪಾಯಿಯ ಪ್ರಾಯೋಗಿಕ​ ಬಳಕೆಗೆ ಇಂದು ಚಾಲನೆ ಸಿಗಲಿದೆ. ಈ ಮೂಲಕ ಸರ್ಕಾರಿ ಭದ್ರತೆಗಳಲ್ಲಿನ ವಹಿವಾಟುಗಳಿಗಾಗಿ ವರ್ಚುವಲ್ ಕರೆನ್ಸಿಯನ್ನು ಬಳಸಲು ಅವಕಾಶ ಕಲ್ಪಿಸಲಾಗುತ್ತಿದೆ.

ಈ ಯೋಜನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಹೆಚ್‌ಎಸ್‌ಬಿಸಿ ಸೇರಿ ಒಂಬತ್ತು ಬ್ಯಾಂಕ್‌ಗಳ ಜೊತೆ ವ್ಯವಹಾರ ನಡೆಸಲು ತೀರ್ಮಾನಿಸಲಾಗಿದೆ. ಮೊದಲ ಡಿಜಿಟಲ್​​ ಯೋಜನೆಯನ್ನು ಸಗಟು ವಿಭಾಗದಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ಕೇಂದ್ರ ಬ್ಯಾಂಕ್‌(ಆರ್‌ಬಿಐ) ತಿಳಿಸಿದೆ.

ಡಿಜಿಟಲ್ ರೂಪಾಯಿಯ ಗ್ರಾಹಕರು ಮತ್ತು ವ್ಯಾಪಾರಿಗಳ ನಡುವಿನ ಚಿಲ್ಲರೆ ವ್ಯಾಪಾರದ ವಹಿವಾಟನ್ನು ದೇಶದ ಕೆಲವು ಆಯ್ದ ಪ್ರದೇಶಗಳಲ್ಲಿ ಒಂದು ತಿಂಗಳೊಳಗಾಗಿ ಪ್ರಾರಂಭಿಸಲಾಗುವುದು ಎಂದು ಆರ್​ಬಿಐ ಹೇಳಿದೆ. ಡಿಜಿಟಲ್​ ಕರೆನ್ಸಿಯು ಪ್ರಸ್ತುತ ಬಳಕೆಯಲ್ಲಿರುವ ಕರೆನ್ಸಿಗೆ ಪರ್ಯಾಯ ಅಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದು ಪಾವತಿದಾರರಿಗೆ ಅನುಕೂಲವಾಗುವ ಪೂರಕ ಮಾರ್ಗ ಎಂದು ತಿಳಿಸಿದೆ.

ಸಿಬಿಡಿಸಿ ಎಂಬುದು ಕೇಂದ್ರೀಯ ಬ್ಯಾಂಕ್ ಹೊರಡಿಸಿದ ಕರೆನ್ಸಿ ನೋಟುಗಳ ಡಿಜಿಟಲ್ ರೂಪವಾಗಿದೆ. ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ಬಜೆಟ್‌ನಲ್ಲಿ ಭಾರತ ಸರ್ಕಾರವು ಪ್ರಸ್ತುತ ವರ್ಷದಲ್ಲಿ ಡಿಜಿಟಲ್ ರೂಪಾಯಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿತ್ತು.

ಇದನ್ನೂ ಓದಿ :ನಿಮ್ಮಲ್ಲಿ ಸ್ಮಾರ್ಟ್ ಫೋನ್ ಇದ್ದರೆ, ನಾಳೆಯಿಂದ ಮೆಟ್ರೋ ಪ್ರಯಾಣ ಇನ್ನೂ ಸುಲಭ

Last Updated : Nov 1, 2022, 6:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.