ETV Bharat / bharat

ಅಪರೂಪದ ನಾಲ್ಕು ಕಣ್ಣಿನ ಮೀನು ಪತ್ತೆ: ನೋಡಲು ಮುಗಿಬಿದ್ದ ಜನ - ಈಟಿವಿ ಭಾರತ ಕನ್ನಡ

ಅಮೆರಿಕದ ಅಮೆಜಾನ್​ ನದಿಯಲ್ಲಿ ಕಂಡು ಬರುವ ಅಪರೂಪದ ಅಮೆಜಾನ್ ಸ್ಮೆಲ್ ಎಕ್ಸೋಟಿಕ್ ಕ್ಯಾಟ್ ಫಿಶ್ ಛತ್ತೀಸ್​ಗಢದಲ್ಲಿ ಪತ್ತೆಯಾಗಿದೆ. ಈ ಮೀನು ನೋಡಲು ಜನರು ಮುಗಿಬಿದ್ದಿದ್ದಾರೆ.

rare-fish-with-four-eyes-found-in-janjgir-champa
ಅಪರೂಪದ ನಾಲ್ಕು ಕಣ್ಣಿನ ಮೀನು ಪತ್ತೆ : ನೋಡಲು ಮುಗಿಬಿದ್ದ ಜನ
author img

By

Published : Apr 22, 2023, 7:56 PM IST

ಜಾಂಜಗೀರ್ ಚಂಪಾ (ಛತ್ತೀಸ್​ಗಢ): ಸಾಮಾನ್ಯವಾಗಿ ಅಮೆರಿಕದ ಅಮೆಜಾನ್​ ನದಿಯಲ್ಲಿ ಕಂಡು ಬರುವ ಅಪರೂಪದ ಮೀನೊಂದು ಛತ್ತೀಸ್​ಗಢದ ಜಾಂಜಗೀರ್​ ಚಂಪಾ ಜಿಲ್ಲೆಯ ಬಿರ್ರಾ ಗ್ರಾಮದಲ್ಲಿ ಪತ್ತೆಯಾಗಿದೆ. ಬಿರ್ರಾ ಗ್ರಾಮದ ನಿವಾಸಿ ಕುನಾಲ್​ ಎಂಬವರು ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ಮೀನು ಸಿಕ್ಕಿದೆ. ಈ ಮೀನು ನಾಲ್ಕು ಕಣ್ಣುಗಳನ್ನು ಹೊಂದಿದ್ದು, ಇದನ್ನು ನೋಡಲು ವಿವಿಧೆಡೆಯಿಂದ ಜನರು ಆಗಮಿಸುತ್ತಿದ್ದಾರೆ.

ನಾಲ್ಕು ಕಣ್ಣುಗಳನ್ನು ಹೊಂದಿರುವ ಅಪರೂಪದ ಮೀನು : ಈ ಮೀನು ತನ್ನ ಹಣೆಯ ಮೇಲೆ ನಾಲ್ಕು ಕಣ್ಣುಗಳನ್ನು ಹೊಂದಿದೆ. ವಿಮಾನದ ರೆಕ್ಕೆಯಂತೆ ಈ ಮೀನಿನ ರೆಕ್ಕೆ ಇದೆ. ಈ ಮೀನು ನೋಡಲು ಸುಂದರವಾಗಿದ್ದು, ಮೀನು ಸಿಕ್ಕಿದ ಕೂಡಲೇ ಕುನಾಲ್​ ಅವರು ಇದನ್ನು ಮನೆಗೆ ತಂದಿದ್ದಾರೆ. ಈ ಮೀನು ಪತ್ತೆಯಾಗಿರುವ ಬಗ್ಗೆ ಸುದ್ದಿ ಹಬ್ಬುತ್ತಲೇ ಅಪಾರ ಸಂಖ್ಯೆಯ ಜನರು ಮೀನನ್ನು ನೋಡಲು ಕುನಾಲ್​ ಮನೆಗೆ ಜಮಾಯಿಸಿದ್ದರು. ವಿಶೇಷ ಮೀನು ನೋಡಿದ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಮೀನಿನ ವಿಶೇಷತೆ ತಿಳಿಯಲು ಕೆಲವರು ಇಂಟರ್​ನೆಟ್​ ಮೊರೆ ಕೂಡಾ ಹೋಗಿದ್ದರು. ಒಟ್ಟಿನಲ್ಲಿ ವಿಶೇಷ ತಳಿಯ ಮೀನು ಕಂಡು ಖುಷಿಯಾಗಿದ್ದಂತೂ ಸುಳ್ಳಲ್ಲ.

ಇದನ್ನೂ ಓದಿ : ಅಮೆಜಾನ್ ನದಿಯ ಕಂಡು ಬರುವ ಕ್ಯಾಟ್​ಫೀಶ್​ ಬಿಹಾರದಲ್ಲಿ ಬಲೆಗೆ: ಮೀನು ಕಂಡು ಅಚ್ಚರಿಗೊಂಡ ಗ್ರಾಮಸ್ಥರು

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ : ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಅಶ್ವನಿ ಕೇಶರವಾಣಿ ಈ ವಿಶೇಷ ಮೀನಿನ ಬಗ್ಗೆ ಮಾತನಾಡಿ, ಈ ಮೀನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೆಲೆಗೆ ಮಾರಾಟವಾಗುತ್ತದೆ. ಇದು ವೇಗವಾಗಿ ಬೆಳೆಯುವ ಮೀನು ಆಗಿದೆ ಎಂದು ಅವರು ಹೇಳಿದರು. ದೊಡ್ಡ ಗಾತ್ರದ ಮೀನಿನಿಂದ ಮೀನುಗಾರರಿಗೆ ಸಾಕಷ್ಟು ಆರ್ಥಿಕ ಲಾಭ ಉಂಟಾಗುತ್ತದೆ. ಈ ಮೀನುಗಳು ಸಾಮಾನ್ಯವಾಗಿ ಭಾರತ ನದಿಗಳಲ್ಲಿ ಕಂಡುಬರುವುದಿಲ್ಲ ಎಂದು ಕೇಶರವಾಣಿ ಹೇಳಿದರು.

ಈ ಮೀನು ಅಮೆರಿಕದಲ್ಲಿ ಮಾತ್ರವೇ ಕಂಡುಬರುತ್ತದೆ : ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎಸ್. ಕನ್ವರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಮೀನನ್ನು ಸಕ್ಕರ್ ಮೌತ್ ಕ್ಯಾಟ್ ಫಿಶ್ ಎಂದು ಕರೆಯುತ್ತೇವೆ. ಇದರ ವೈಜ್ಞಾನಿಕ ಹೆಸರು ಹೈಪೋಸ್ಟ್ ತೋಮಸ್ ಪ್ಲೆಸೋಸ್ ತೋಮಸ್ ಎಂದು. ಇದು ಅಮೆಜಾನ್ ಸ್ಮೆಲ್ ಎಕ್ಸೋಟಿಕ್ ಕ್ಯಾಟ್ ಫಿಶ್ ಎಂದು ಜನಪ್ರಿಯವಾಗಿದೆ. ಈ ಮೀನು ನೀರಿನ ತಳದಲ್ಲಿ ವಾಸಿಸುತ್ತದೆ. ಈ ವಿಶೇಷ ಜಾತಿಯ ಮೀನು ಸಾಮಾನ್ಯವಾಗಿ ಅಮೆರಿಕದ ಅಮೆಜಾನ್​ ನದಿಯಲ್ಲಿ ಕಂಡುಬರುತ್ತದೆ. ಈ ಮೀನು ಅಪಾಯಕಾರಿಯಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಮಲ್ಪೆ ಮೀನುಗಾರರ ಬಲೆಗೆ ಬಿದ್ದ 16 ಕೆಜಿ ತೂಕದ ಬಂಗಾರ ಬಣ್ಣದ ಮೀನು- ವಿಡಿಯೋ

ಇದನ್ನು ಓದಿ:ರಂಜಾನ್​ ಮಾಸದಲ್ಲಿ 10 ಲಕ್ಷ ಬಿರಿಯಾನಿ ಆರ್ಡರ್​: ಸ್ವಿಗ್ಗಿ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.