ETV Bharat / bharat

ದಲಿತ ಸಹೋದರಿಯರ ಅತ್ಯಾಚಾರವೆಸಗಿ ಕೊಲೆ; ಸಾಕ್ಷ್ಯ ನಾಶಕ್ಕೆ ಶವಗಳ ನೇಣು ಹಾಕಿದ ದುಷ್ಕರ್ಮಿಗಳು! - ಈಟಿವಿ ಭಾರತ ಕರ್ನಾಟಕ

ಉತ್ತರ ಪ್ರದೇಶದಲ್ಲಿ ನಡೆದ ದಲಿತ ಸಹೋದರಿಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

murder of Dalit sisters in Lakhimpur Kheri

author img

By

Published : Sep 15, 2022, 10:59 AM IST

ಲಖನೌ(ಉತ್ತರ ಪ್ರದೇಶ): ಇಲ್ಲಿನ ಲಖಿಂಪುರಖೇರಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಸಹೋದರಿಯರ ಶವ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿ ಆರೋಪಿಗಳನ್ನು ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಅತ್ಯಾಚಾರ ಮತ್ತು ಕೊಲೆಯ ವಿವಿಧ ಸೆಕ್ಷನ್‌ಗಳನ್ನು ಹಾಕಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಲಖಿಂಪುರಖೇರಿ ಎಸ್ಪಿ ಸಂಜೀವ್​​ ಸುಮನ್ ಮಾತನಾಡಿ, ಆರೋಪಿಗಳು ಬಾಲಕಿಯರ ಸ್ನೇಹಿತರಾಗಿದ್ದರು. ತೋಟಕ್ಕೆಂದು ಹೇಳಿ ಸೊಹೈಲ್​ ಹಾಗೂ ಜುನೈದ್​ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಬಳಿಕ ಇಬ್ಬರ ಮೇಲೂ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ದುಷ್ಕೃತ್ಯ ನಡೆದ ಬಳಿಕ ತಮ್ಮನ್ನು ಮದುವೆಯಾಗುವಂತೆ ಬಾಲಕಿಯರು ಒತ್ತಾಯಿಸಿದ್ದಾರೆ. ಇದರಿಂದ ಕೋಪಗೊಂಡ ಸೊಹೈಲ್​​, ಹಫೀಜುಲ್​, ಜುನೈದ್​​ ಎಂಬ ದುರುಳರು ಬಾಲಕಿಯರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ತದನಂತರ ಕರೀಮುದ್ದೀನ್ ಮತ್ತು ಆರಿಫ್​ ಎಂಬಾತ ಸಾಕ್ಷ್ಯ ನಾಶಕ್ಕೋಸ್ಕರ ಶವಗಳನ್ನು ಮರಕ್ಕೆ ನೇತು ಹಾಕಿದ್ದಾನೆ. ತಲೆಮರೆಸಿಕೊಂಡಿದ್ದ ಜುನೈದ್​​ ಎಂಬಾತನ ಮೇಲೆ ಎನ್​​ಕೌಂಟರ್​ ಮಾಡಿ ಬಂಧನ ಮಾಡಲಾಗಿದ್ದು, ಆತ ಗಾಯಗೊಂಡಿದ್ದಾನೆ ಎಂದು ಹೇಳಿದರು.

ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಸಹೋದರಿಯರ ಶವ ಪತ್ತೆ; ಅತ್ಯಾಚಾರವೆಸಗಿ ಕೊಲೆ ಶಂಕೆ

ಎಲ್ಲ ಆರೋಪಿಗಳು ಲಖಿಂಪುರ ಖೇರಿಯ ಲಾಲ್​​ಪುರ ಗ್ರಾಮದವರಾಗಿದ್ದಾರೆ. ಬಾಲಕಿಯ ನೆರೆಮನೆಯಲ್ಲಿ ವಾಸವಾಗಿದ್ದ ಚೋಟು ಎಂಬಾತ ಇಬ್ಬರು ಸಹೋದರಿಯರನ್ನು ಆರೋಪಿಗಳಿಗೆ ಪರಿಚಯಿಸಿದ್ದನಂತೆ. ಮೂವರು ವೈದ್ಯರ ಸಮಿತಿ ಬಾಲಕಿಯರ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದು, ವಿಡಿಯೋ ಮಾಡಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.