ETV Bharat / bharat

ಹಣ್ಣು ತರಕಾರಿ ಫ್ರೆಸ್ ಶುದ್ಧತೆ ಸಂರಕ್ಷಿಸಲು ಮೆರುಗೆಣ್ಣೆ ಲೇಪನ ಸಹಕಾರಿ: ಎನ್‌ಐಎಸ್‌ಎ ವಿಜ್ಞಾನಿಗಳು ಶೋಧನೆ - ಕೃಷಿ ಉತ್ಪನ್ನ ತಾಜಾತನಕ್ಕೆ ಸಹಕಾರಿ

ಕೃಷಿ ಉತ್ಪನ್ನಗೆ ಮೆರುಗೆಣ್ಣೆ ಲೇಪನ ಬಳಸಿ ರೈತರು ಮಾರುಕಟ್ಟೆಗೆ ಸಾಗಿಸಿದರೆ, ತರಕಾರಿ ತಾಜಾತನ, ಶುದ್ಧತೆ ಕಾಪಾಡಬಹುದು. ರೈತರಿಗೆ ಹೆಚ್ಚು ಲಾಭ ಸಿಗಬಹುದು ಎಂದು ರಾಂಚಿ ನಾಂಕುಮ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೆಕೆಂಡರಿ ಅಗ್ರಿಕಲ್ಚರ್ ವಿಜ್ಞಾನಿಗಳು ತಿಳಿಸಿದ್ದಾರೆ.

Fruit and vegetable
ಹಣ್ಣು ಮತ್ತು ತರಕಾರಿ
author img

By

Published : Nov 25, 2022, 7:10 PM IST

ರಾಂಚಿ (ಜಾರ್ಖಂಡ್): ಆಧುನಿಕತೆ ಬೆಳೆದಂತೆ ಆಹಾರ ಪದ್ಧತಿಯಲ್ಲಿ ಹೊಸ ಶೋಧನೆಗಳು ಸಹಜ. ಆದರೆ, ಈ ದುಬಾರಿ ಕಾಲದಲ್ಲಿ ಹೆಚ್ಚು ಹಣ ಖರ್ಚು ಮಾಡಿ ರೆಫ್ರಿಜರೇಟರ್​​​ನಂತಹ ದಿನ ಬಳಕೆಯ ವಸ್ತುಗಳನ್ನು ಖರೀದಿಸುವುದು ಮಧ್ಯಮ ಹಾಗೂ ಬಡ ಕುಟುಂಬಗಳಿಗೆ ಕಷ್ಟ. ಆದರೆ, ಕಡಿಮೆ ಖರ್ಚಿನಲ್ಲಿ ಹಣ್ಣು,ತರಕಾರಿ ಫ್ರೆಸ್,ಶುದ್ಧತೆ ಕಾಪಾಡಿಕೊಳ್ಳುವುದು ಹೇಗೆ ? ಆರೋಗ್ಯಕ್ಕೆ ಯಾವುದು ಸೂಕ್ತ ? ರಾಂಚಿಯ ನಾಂಕುಮ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೆಕೆಂಡರಿ ಅಗ್ರಿಕಲ್ಚರ್ (ಎನ್‌ಐಎಸ್‌ಎ)ಸಂಸ್ಥೆಯ ವಿಜ್ಞಾನಿಗಳ ತಂಡ ಹೊಸ ಸಂಶೋಧನೆ ಕೈಗೊಂಡಿದೆ.

ಮೆರುಗಣ್ಣೆ ಲೇಪನ ಆರೋಗ್ಯಕ್ಕೆ ಮಾರಕವಲ್ಲ: ಸಂಶೋಧನೆಯಲ್ಲಿ ರೆಫ್ರಿಜರೇಟರ್‌ ಬಳಸದೆಯೂ ಹಣ್ಣುಗಳು ಮತ್ತು ತರಕಾರಿಗಳ ಮೇಲೆ ಮೆರುಗೆಣ್ಣೆ ಸಿಂಪಡಿಸುವುದರಿಂದ ಮುಂದಿನ ಎಂಟು ದಿನಗಳ ವರೆಗೆ ಫ್ರೆಸ್,ಶುದ್ಧತೆ ಕಾಪಾಡಿಕೊಳ್ಳಬಹುದು. ಮೆರುಗಣ್ಣೆ ಲೇಪನವು lacquer coating is edible ಖಾದ್ಯ ಪದಾರ್ಥವಾಗಿದ್ದು, ಮಾನವ ದೇಹಕ್ಕೆ ಮಾರಕವಲ್ಲ ಎಂದು ಮಾಹಿತಿ ನೀಡಿದೆ.

ಸಂಶೋಧನೆ ಏನು ಹೇಳುತ್ತದೆ ?: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೆಕೆಂಡರಿ ಅಗ್ರಿಕಲ್ಚರ್‌ನ ವಿಜ್ಞಾನಿಗಳು, "ಮೆರುಗೆಣ್ಣೆ ಆಧಾರಿತ ಲೇಪನವನ್ನು ಟೊಮೆಟೊ, ಕ್ಯಾಪ್ಸಿಕಮ್, ಬದನೆ ಮತ್ತು ಇತರ ತರಕಾರಿಗಳ ಮೇಲೆ ಪ್ರಯೋಗಿಸಿ ಸಂಶೋಧಿಸಿದ್ದಾರೆ. ಮೆರುಗೆಣ್ಣೆ ಸಿಂಪಡಣೆಯಿಂದ ಹಣ್ಣು ತರಕಾರಿ ಸಂರಕ್ಷಿಸಲು ಸಹಾಯಕವಾಗಿದೆ. ಮೆರುಗೆಣ್ಣೆ ಲೇಪನವು ತರಕಾರಿಗಳ ಫ್ರೆಸ್ ಜತೆಗೆ ಅದರ ಸಂರಕ್ಷಣೆಗೂ ಸಹಾಯ ಮಾಡುತ್ತದೆ. ಆರೋಗ್ಯದ ಮೇಲೆಯೂ ದುಷ್ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.

ಕೃಷಿ ಉತ್ಪನ್ನ ತಾಜಾತನಕ್ಕೆ ಸಹಕಾರಿ:" ಈ ಹೊಸವಿಧಾನವು ರೈತರಿಗೆ ತಮ್ಮ ಉತ್ಪನ್ನಗಳನ್ನು ಸಂರಕ್ಷಿಸಲು ಸಹಕಾರಿಯಾಗಿದೆ. ಯಾಕೆಂದರೆ ಬಹಳಷ್ಟು ರೈತರ ಉತ್ಪನ್ನಗಳು ಮಾರುಕಟ್ಟೆಗೆ ಸಾಗಿಸುವ ವೇಳೆ 40ರಷ್ಟು ನಾಶವಾಗುತ್ತವೆ. ಆದರೆ, ರೈತರು ತಮ್ಮ ಜಮೀನಿನ ಉತ್ಪನ್ನಗಳಿಗೆ ಮೆರುಗೆಣ್ಣೆ ಲೇಪನ ಬಳಸಿ ಮಾರುಕಟ್ಟೆಗೆ ಸಾಗಿಸಿದರೆ, ವಾರಕಾಲ ತರಕಾರಿ ತಾಜಾತನ, ಶುದ್ಧತೆ ಕಾಪಾಡಬಹುದು ಎಂದು ಸಂಶೋಧನೆ ವರದಿಯಲ್ಲಿ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಕಾಲೇಜುಗಳ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಮತದಾರರ ನೋಂದಣಿ ಕಡ್ಡಾಯ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.