ETV Bharat / bharat

ಮಹಿಳಾ ಆಯೋಗದ ನೋಟಿಸ್ ಬೆನ್ನಲೆ ರಾಮ್‌ದೇವ್ ಬಾಬಾ ಕ್ಷಮೆ ಯಾಚನೆ

author img

By

Published : Nov 28, 2022, 11:13 AM IST

ರಾಮ್‌ದೇವ್ ಬಾಬಾ ಮಹಿಳೆಯರ ಉಡುಪುಗಳ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆ ವಿರುದ್ಧ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಂಕರ್ ಕ್ಷಮಾಪಣೆ ಪತ್ರ ಸಲ್ಲಿಸಲು ಗಡುವು ನೀಡಿದ್ದರು. ಈ ಹಿನ್ನೆಲೆ ಬಾಬಾ ಆಯೋಗಕ್ಕೆ ಕ್ಷಮಾಪಣೆ ಪತ್ರ ನೀಡಿದ್ದಾರೆ.

Ramdev Baba apologizes to Women's Commission
ಮಹಿಳಾ ಆಯೋಗಕ್ಕೆ ರಾಮ್‌ದೇವ್ ಬಾಬಾ ಕ್ಷಮಾಪಣೆ

ಮುಂಬೈ :ಮೂರು ದಿನಗಳ ಹಿಂದೆ ಥಾಣೆಯಲ್ಲಿ ನಡೆದ ಸಾರ್ವಜನಿಕ ಯೋಗ ಕಾರ್ಯಕ್ರಮದಲ್ಲಿ ರಾಮ್‌ದೇವ್ ಬಾಬಾ ಮಹಿಳೆಯರ ಉಡುಪುಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಂಕರ್, ನಿಂದನೆಯ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡುವಂತೆ ಬಾಬಾ ರಾಮದೇವ್​ಗೆ ನೋಟಿಸ್ ಕಳುಹಿಸಿ ಕ್ಷಮಾಪಣೆ ಪತ್ರವನ್ನು ಸಲ್ಲಿಸಲು ಗಡುವು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬಾಬಾ ರಾಮದೇವ್​​ ರಾಜ್ಯ ಮಹಿಳಾ ಆಯೋಗಕ್ಕೆ ಕ್ಷಮಾಪಣೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ನಾನು ಯಾವುದೇ ಅಪರಾಧ ಮಾಡಿಲ್ಲ. ಆದರೆ, ಸಾರ್ವಜನಿಕ ಸಮಾರಂಭದಲ್ಲಿ ಮಹಿಳೆಯರ ಉಡುಪುಗಳ ಬಗ್ಗೆ ಒಂದು ಗಂಟೆ ಭಾಷಣ ಮಾಡುವಾಗ ನಾನು ಮಾತೃತ್ವವನ್ನು ವೈಭವೀಕರಿಸಿದ್ದೇನೆ. ಆ ಸಮಯದಲ್ಲಿ ಮಹಿಳೆಯರ ಸಾದಾ ಬಟ್ಟೆಯನ್ನು ಉಲ್ಲೇಖಿಸುವ ಉದ್ದೇಶವಿತ್ತು. ಆದರೆ ಮಹಿಳೆಯರ ಅವಹೇಳನ ಮಾಡುವ ಉದ್ದೇಶದಿಂದ ಆ ಮಾತು ಹೇಳಿರಲಿಲ್ಲ. ಆದಾಗ್ಯೂ ನನ್ನ ಹೇಳಿಕೆಯು ಮಹಿಳಾ ವರ್ಗವನ್ನು ಅವಮಾನಿಸಿದ್ದರೆ ಕ್ಷಮಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬಾಬಾ ಕ್ಷಮಾಪಣೆ ಪತ್ರದ ಬಗ್ಗೆ ಮಾತನಾಡಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್, ಬಾಬಾ ತಮ್ಮ ಅಪ್ರಾಮಾಣಿಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ನವೆಂಬರ್ 25, 2022 ರಂದು ಅವರಿಗೆ ಮೊದಲು ನೋಟಿಸ್ ಜಾರಿ ಮಾಡಿದ್ದೆವು. ನಮ್ಮ ನೋಟಿಸ್​ಗೆ ಅವರು ಉತ್ತರಿಸಿದ್ದಾರೆ. ಸ್ಪಷ್ಟನೆ ನೀಡಿ ಕ್ಷಮಾಪಣೆ ಪತ್ರ ಕಳುಹಿಸಿದ್ದಾರೆ. ಅದರಲ್ಲಿ ಮಹಿಳೆಯರ ವಿರುದ್ಧ ಮಾಡಿರುವ ಟೀಕೆಗಳ ಬಗ್ಗೆ ವಿಷಾದವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಹೇಳಿದ್ದಾರೆ.

ಇದನ್ನೂ ಓದಿ :ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಬಾಬಾ ರಾಮದೇವ್​ಗೆ ನೋಟಿಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.