ಸಿಕಾರ್ (ರಾಜಸ್ಥಾನ): ಕೃಷಿ ಕಾಯ್ದೆಗಳನ್ನು ರದ್ದು ಮಾಡದಿದ್ದರೆ ನಾವು 40 ಲಕ್ಷ ಟ್ರ್ಯಾಕ್ಟರ್ಗಳೊಂದಿಗೆ ಸಂಸತ್ಗೆ ಮುತ್ತಿಗೆ ಹಾಕುವುದಾಗಿ ಭಾರತೀಯ ಕಿಸಾನ್ ಯೂನಿಯನ್ನ ನಾಯಕ ರಾಕೇಶ್ ಟಿಕಾಯತ್ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಜಸ್ತಾನದ ಸಿಕಾರ್ನಲ್ಲಿ ರೈತರ ರ್ಯಾಲಿಯಲ್ಲಿ ವೇಳೆ ಮಾತನಾಡಿದ ಅವರು, ನಮ್ಮ ಮುಂದಿನ ರ‍್ಯಾಲಿ ಸಂಸತ್ನತ್ತ ಹೊರಡುತ್ತದೆ. ರ‍್ಯಾಲಿಯ ಮೊದಲು ನಾವು ತಿಳಿಸುತ್ತೇವೆ. ಈ ಬಾರಿ ನಾಲ್ಕು ಲಕ್ಷವಲ್ಲ. 40 ಲಕ್ಷ ಟ್ರ್ಯಾಕ್ಟರ್ಗಳು ಸಂಸತ್ಗೆ ಮುತ್ತಿಗೆ ಹಾಕುತ್ತವೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಇದನ್ನೂ ಓದಿ : ಅಹಂ ಬೇಡ, ನಾನು ನಾನು ಅನ್ನೋದು ಬೇಡ.. ಸುದ್ದಿಗೋಷ್ಠಿ ವೇಳೆ ಜಗ್ಗೇಶ್ ಮಾತು!
ಕನಿಷ್ಠ ಬೆಂಬಲ ಬೆಲೆಯನ್ನು ಉಳಿಸುವ ಸಲುವಾಗಿ ಹೊಸ ಕಾಯ್ದೆಯನ್ನು ಜಾರಿಗೊಳಿಸಬೇಕಿದೆ ಎಂದು ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ. ಇದಕ್ಕೂ ಮೊದಲು ರಾಕೇಶ್ ಟಿಕಾಯತ್ ಪಶ್ಚಿಮ ಬಂಗಾಳಕ್ಕೂ ರ‍್ಯಾಲಿ ಹೊರಡಲು ಸಿದ್ಧ ಎಂದು ಹರಿಹಾಯ್ದಿದ್ದರು. ಇದಾದ ಮರುದಿನವೇ ಪಶ್ಚಿಮ ಬಂಗಾಳಕ್ಕೆ ಟ್ರ್ಯಾಕ್ಟರ್ ರ‍್ಯಾಲಿ ಹೊರಡುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದರು.
ರೈತ ನಾಯಕ ಮತ್ತು ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಮಾತನಾಡಿ, ಹೊಸ ಕೃಷಿ ನೀತಿಗಳು ರೈತರಿಗೆ ಸಂಕಷ್ಟ ಎದುರಾಗಿದ್ದು, ಈ ಕಾನೂನಿನಿಂದಾಗಿ ಸರ್ಕಾರ ಇನ್ನು ಮುಂದೆ ರೈತರಿಂದ ದವಸ- ಧಾನ್ಯಗಳನ್ನು ಕೊಳ್ಳದೇ ಎಂಎಸ್ಪಿ ಅಸನೂರ್ಜಿತಗೊಳ್ಳಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.