ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ತಾವು ಸ್ಥಾಪಿಸಿದ್ದ ಮಕ್ಕಲ್ ಮಂದಿರಂ ಪಕ್ಷವನ್ನು ತೊರೆದಿದ್ದು, ಭವಿಷ್ಯದಲ್ಲಿ ಮತ್ತೊಮ್ಮೆ ರಾಜಕೀಯಕ್ಕೆ ಬರುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಪಕ್ಷದ ಸದಸ್ಯರೊಂದಿಗೆ ಚರ್ಚಿಸಿದ ಬಳಿಕ ರಜಿನಿ ಈ ನಿರ್ಧಾರ ಕೈಗೊಂಡಿದ್ದಾರೆ.
ರಜಿನಿ ಸ್ಥಾಪಿಸಿದ್ದ ಮಕ್ಕಲ್ ಮಂದಿರಂ ಎಂಬ ಪಕ್ಷವನ್ನು ರಜನಿಕಾಂತ್ ರಸಿಗಾರ್ಗಳ್ ನರ್ಪಾನಿ ಮಂದಿರ ಅಥವಾ ರಜಿನಿಕಾಂತ್ ಅಭಿಮಾನಿಗಳ ಕಲ್ಯಾಣ ವೇದಿಕೆಯಾಗಿ ಮಾರ್ಪಾಡಾಗಲಿದೆ.
ಸಭೆಗೂ ಮುನ್ನ ಮಾತನಾಡಿದ ರಜನಿ, ನನ್ನ ರಾಜಕೀಯ ಪ್ರವೇಶ ಹಾಗೂ ಮುಂದಿನ ಯೋಜನೆಗಳ ಕುರಿತು ಚರ್ಚಿಸಲಾಗುವುದು. ಅಲ್ಲದೆ, ಕೋವಿಡ್, ವಿಧಾನಸಭಾ ಚುನಾವಣೆ, ಶೂಟಿಂಗ್ ಹಾಗೂ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ್ದ ಕಾರಣ ನಾನು ಕಾರ್ಯಕರ್ತರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ ಎಂದರು.
ಕಳೆದ ಕೆಲ ತಿಂಗಳ ಹಿಂದೆ, ಶೂಟಿಂಗ್ ನಡೆಯಬೇಕಾದರೆ ರಜನಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಅವರು, ರಾಜಕೀಯಕ್ಕೆ ಬರುವುದಿಲ್ಲ ಎಂದು ಘೋಷಿಸಿದ್ದರು. ಆ ಬಳಿಕ ಅಭಿಮಾನಿಗಳು ನಿರ್ಧಾರವನ್ನು ಪುನರ್ವಿಮರ್ಶಿಸುವಂತೆ ಒತ್ತಡ ಹೇರುತ್ತಲೇ ಬಂದಿದ್ದರು. ಆ ವೇಳೆ ರಜನಿ ಮತ್ತೆ ಮತ್ತೆ ನನಗೆ ನೋವುಂಟು ಮಾಡಬೇಡಿ ಎಂದು ಮನವಿ ಮಾಡಿದ್ದರು.
ರಜನಿ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಕೆಲ ನಾಯಕರು ಅವರ ಬೆಂಬಲ ಕೋರಿದ್ದರು. 1996ರ ವಿಧಾನಸಭಾ ಚುನಾವಣಾ ಸಮಯದಲ್ಲಿ ರಜನಿ ಒಂದು ಮಾತು ಇಡೀ ತಮಿಳುನಾಡಿನ ಚಿತ್ರಣವನ್ನೇ ಬದಲಿಸಿಬಿಟ್ಟಿತ್ತು. ಜಯಲಲಿತಾರನ್ನು ಮತ್ತೆ ನೀವು ಅಧಿಕಾರಕ್ಕೆ ತಂದರೆ, ದೇವರಿಂದಲೂ ತಮಿಳುನಾಡನ್ನು ಉಳಿಸಲು ಸಾಧ್ಯವಿಲ್ಲ ಎಂದಿದ್ದರು. ಇದರಿಂದಾಗಿ ಆಡಳಿತಾರೂಢ AIADMK ಭಾರಿ ಹಿನ್ನಡೆ ಅನುಭವಿಸಿುತ್ತು.