ETV Bharat / bharat

ಸಾಲಾಸರ್​ ಬಾಲಾಜಿ ದೇಗುಲಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ದೆಹಲಿ ಸಿಎಂ.. ಇಲ್ಲಿನ ವಿಶೇಷತೆ ಏನು?

ರಾಜಸ್ಥಾನದ ಚುರು ಜಿಲ್ಲೆಯಲ್ಲಿರುವ ಸಾಲಾಸರ್ ಬಾಲಾಜಿ ದೇವಸ್ಥಾನಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕುಟುಂಬ ಸಮೇತ ಭೇಟಿ ನೀಡಿದ್ದಾರೆ.

ದೆಹಲಿ ಸಿಎಂ
ದೆಹಲಿ ಸಿಎಂ
author img

By

Published : Nov 13, 2021, 9:57 AM IST

ಚುರು (ರಾಜಸ್ಥಾನ): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi Chief Minister Arvind Kejriwal) ಅವರು ಇಂದು ಮುಂಜಾನೆ ತಮ್ಮ ಕುಟುಂಬದೊಂದಿಗೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿರುವ ಸಾಲಾಸರ್ ಬಾಲಾಜಿ ದೇವಸ್ಥಾನಕ್ಕೆ (Salasar Balaji Temple) ಭೇಟಿ ನೀಡಿದರು.

ಸಾಲಾಸರ್​ ಬಾಲಾಜಿ ದೇಗುಲಕ್ಕೆ ಕುಟುಂಬ ಸಮೇತ ಭೇಟಿ ನೀಡಿ ದೆಹಲಿ ಸಿಎಂ

ಶುಕ್ರವಾರ ತಡರಾತ್ರಿ ಸಾಲಾಸರ್ ತಲುಪಿದ ದೆಹಲಿ ಸಿಎಂ ಅವರನ್ನು ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ದೇವಸ್ಥಾನದ ಅರ್ಚಕರು ಬರಮಾಡಿಕೊಂಡರು. ಸಾಲಾಸರ್ ಧಾಮ್ (Salasar Dham) ಎಂದೂ ಕರೆಯಲ್ಪಡುವ ಈ ದೇವಾಲಯವು ಹನುಮನ ಭಕ್ತರಿಗೆ ಧಾರ್ಮಿಕ ಸ್ಥಳವಾಗಿದೆ.

ಬಿಗಿ ಭದ್ರತೆಯ ನಡುವೆ ದರ್ಶನಕ್ಕೆ ಆಗಮಿಸಿದ ಕೇಜ್ರಿವಾಲ್​ಗೆ ದೇವಾಲಯದ ಅರ್ಚಕರು ಬಾಲಾಜಿಯ ಫೋಟೋವನ್ನು ನೀಡಿದರು. ಬಾಲಾಜಿ ದರ್ಶನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಕೇಜ್ರಿವಾಲ್, ಎಲ್ಲರಿಗೂ ಸುಖ ಶಾಂತಿ ಸಿಗಲಿ ಎಂದು ಹಾರೈಸಿದರು. ಈ ವೇಳೆ ಮಾಧ್ಯಮದವರು ದೆಹಲಿ ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಇದನ್ನೂ ಓದಿ: US Air Quality Index: ಪಾಕ್​ನ ಲಾಹೋರ್​ಗೆ 'ವಿಶ್ವದ ಅತ್ಯಂತ ಕಲುಷಿತ ನಗರ' ಎಂಬ ಹಣೆಪಟ್ಟಿ

ನವದೆಹಲಿಯ ವಾಯು ಮಾಲಿನ್ಯದ (Delhi Air Pollution) ಬಗ್ಗೆ ದೇಶ-ವಿದೇಶಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕ (AQI) 700ರ ಗಡಿ ತಲುಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.