ಮುಂಬೈ: ನಟಿ ಶಿಲ್ಪಾ ಶೆಟ್ಟಿಯ (Shilpa Shetty) ಪತಿ ರಾಜ್ ಕುಂದ್ರಾ ಅವರು ಲಂಡನ್ ಮೂಲದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಮೊಬೈಲ್ ಆ್ಯಪ್ ಮೂಲಕ ಅಶ್ಲೀಲ ವಿಡಿಯೋ ಸ್ಟ್ರೀಮಿಂಗ್ ಮಾಡುವ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಂಬೈ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಮಿಲಿಂದ್ ಭಾರಂಬೆ, ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪಾತ್ರ ಕಂಡು ಬಂದಿಲ್ಲ. ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದರು.
ಇದೇ ವರ್ಷದ ಫೆಬ್ರವರಿಯಲ್ಲಿ ಕ್ರೈಂ ಬ್ರ್ಯಾಂಚ್ ಮುಂಬೈನಲ್ಲಿ ಅಶ್ಲೀಲ ಚಿತ್ರಗಳಿಗೆ ಸಂಬಂಧಿಸಿದ ಪ್ರಕರಣ ದಾಖಲಿಸಿತ್ತು. ಚಿತ್ರಲೋಕದಲ್ಲಿ ಅವಕಾಶ ಹುಡುಕಿ ಬರುವ ಹೊಸ ನಟ-ನಟಿಯರಿಗೆ ವೆಬ್ ಸರಣಿ ಮತ್ತು ಕಿರು ಚಿತ್ರಗಳಲ್ಲಿ ಪಾತ್ರಗಳ ಭರವಸೆ ನೀಡಿ ಆಡಿಷನ್‌ಗಳಲ್ಲಿ ಬೋಲ್ಡ್ ಮತ್ತು ನಗ್ನ ದೃಶ್ಯಗಳಲ್ಲಿ ನಟಿಸಲು ಹೇಳಲಾಗಿತ್ತು. ಇದಕ್ಕೆ ವಿರೋಧಿಸುವ ನಟಿಯರು ಈ ಕುರಿತು ಪ್ರಕರಣ ದಾಖಲಿಸಿದ ನಂತರ ಅಪರಾಧ ವಿಭಾಗವನ್ನು ಸಂಪರ್ಕಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಡೆದ ತನಿಖೆಯ ವೇಳೆ 9 ಆರೋಪಿಗಳನ್ನು ಬಂಧಿಸಲಾಗಿದೆ. ಬ್ಲೂ ಫಿಲಂ ದಂಧೆಯಲ್ಲಿ ರಾಜ್ ಕುಂದ್ರಾ ಅವರ ಭಾರತದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಉಮೇಶ್ ಕಾಮತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಮಿಲಿಂದ್ ಭರಾಂಬೆ ವಿವರಿಸಿದರು.
ಕುಂದ್ರಾ ಅವರು ಒಂಭತ್ತು ಕಂಪನಿಗಳ ನಿರ್ದೇಶಕರು ಎನ್ನಲಾಗಿದೆ. ಅವರು ಶಿಲ್ಪಾ ಯೋಗ ಖಾಸಗಿ ಲಿಮಿಟೆಡ್‌ನ ನಿರ್ದೇಶಕರೂ ಹೌದು. ಆದರೆ ಶಿಲ್ಪಾ ಶೆಟ್ಟಿ ಇದರ ನಿರ್ದೇಶಕರಲ್ಲ. ಕುಂದ್ರಾ ಅವರು ನಿರ್ದೇಶಕರಾಗಿರುವ ಕಂಪನಿಗಳ ಪಟ್ಟಿಯಲ್ಲಿ ಸಿನೆಮೇಷನ್ ಮೀಡಿಯಾ ವರ್ಕ್ಸ್, ಬಾಸ್ಟಿಯನ್ ಹಾಸ್ಪಿಟಾಲಿಟಿ, ಕುಂದ್ರಾ ಕನ್ಸ್ಟ್ರಕ್ಷನ್ಸ್, ಜೆ.ಎಲ್.ಸ್ಟ್ರೀಮ್, ಆಕ್ವಾ ಎನರ್ಜಿ ಪಾನೀಯಗಳು, ವಿಯಾನ್ ಇಂಡಸ್ಟ್ರೀಸ್, ಹೋಲ್ ಅಂಡ್ ದೆಮ್ ಸಮ್ ಪ್ರೈವೇಟ್ ಲಿಮಿಟೆಡ್ ಮತ್ತು ಕ್ಲಿಯರ್‌ಕಾಮ್ ಪ್ರೈವೇಟ್ ಲಿಮಿಟೆಡ್ ಸಹ ಸೇರಿವೆ.
ಕುಂದ್ರಾ ಕನ್ಸ್ಟ್ರಕ್ಷನ್ಸ್ನಲ್ಲಿ ಕುಂದ್ರಾ ಮತ್ತು ಶೆಟ್ಟಿ ಇಬ್ಬರೂ ನಿರ್ದೇಶಕರಾಗಿದ್ದರು. ಶಿಲ್ಪಾ ಶೆಟ್ಟಿ ಅವರು 23 ಕಂಪನಿಗಳ ನಿರ್ದೇಶಕರಾಗಿದ್ದಾರೆ. ಅವರು ಈ ಹಿಂದೆ ಕೆಲವು ಕಂಪನಿಗಳ ನಿರ್ದೇಶಕರಾಗಿದ್ದರು. ಆದರೆ ಈಗ ಅವರು ನಿರ್ದೇಶಕರಾಗಿಲ್ಲ.
ಲಂಡನ್ ಮೂಲದ ಕಂಪನಿಯ ಒಡೆತನದ 'ಹಾಟ್‌ಶಾಟ್ಸ್' ಎಂಬ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಎಲ್ಲಾ ಅಶ್ಲೀಲ ವಿಷಯಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ಜಂಟಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ವಿವರವಾದ ತನಿಖೆಯ ಸಮಯದಲ್ಲಿ, ವಿಯಾನ್‌ನಲ್ಲಿರುವ ರಾಜ್ ಕುಂದ್ರಾ ಅವರ ಕಂಪನಿಯು ಲಂಡನ್ ಮೂಲದ ಕೆನ್ರಿನ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಮುಂಬೈನಲ್ಲಿ ಶೂಟ್ ಆಗುವ ಎಲ್ಲಾ ಹಾಟ್ ವಿಡಿಯೋಗಳನ್ನು ಕೆನ್ರಿನ್ ಕಂಪೆನಿ ಹೊಂದಿದೆ.
ಪೊಲೀಸರಿಗೆ ನೀಡಿದ ದೂರುಗಳ ನಂತರ, ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಐಫೋನ್ ನಿಂದ ತೆಗೆದು ಹಾಕಲಾಗಿದೆ ಎಂದು ಭರಂಬೆ ಹೇಳಿದರು. ನ್ಯಾಯಾಲಯದ ಅನುಮತಿಯ ನಂತರ, ನಾವು ರಾಜ್ ಕುಂದ್ರಾ ಅವರ ಕಚೇರಿಗಳಲ್ಲಿ ಪರಿಶೋಧನೆ ನಡೆಸಿದ್ದು, ಇಲ್ಲಿ ನಮಗೆ ಕೆಲವು ವಿಡಿಯೋ ಕ್ಲಿಪ್ಗಳು ಲಭ್ಯವಾಗಿವೆ ಎಂದು ತಿಳಿಸಿದರು.