ETV Bharat / bharat

ಆಂಧ್ರ ಕರಾವಳಿಗೆ ಅಸನಿ ಚಂಡಮಾರುತ : ವಿಶಾಖಪಟ್ಟಣಂನಲ್ಲಿ ವಿಮಾನ ಹಾರಾಟ ರದ್ದು

ಅಸಾನಿ ಚಂಡಮಾರುತ ತನ್ನ ದಿಕ್ಕನ್ನು ಬದಲಾಯಿಸಿದೆ. ಸಮೀಪದ ಕಾಕಿನಾಡ ಕರಾವಳಿ ದಾಟಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ..

Rain Lashes Parts Of Andhra's Kakinada
ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ
author img

By

Published : May 11, 2022, 12:46 PM IST

ಅಮರಾವತಿ (ಆಂಧ್ರ ಪ್ರದೇಶ): ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ 'ಅಸನಿ' ಚಂಡಮಾರುತ ಆಂಧ್ರಪ್ರದೇಶದ ಕರಾವಳಿ ಸಮೀಪಿಸುತ್ತಿದ್ದಂತೆ ತನ್ನ ಪಥವನ್ನು ಬದಲಾಯಿಸುತ್ತಿದೆ. ಬುಧವಾರ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹವಾಮಾನ ವೀಕ್ಷಣ ಕೇಂದ್ರದ ಪ್ರಕಾರ, ಬುಧವಾರ ಸಂಜೆಯ ವೇಳೆಗೆ ಚಂಡಮಾರುತವು ಕಾಕಿನಾಡ ಕರಾವಳಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆ ಆಂಧ್ರಪ್ರದೇಶ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

ಕರಾವಳಿಯನ್ನು ದಾಟಿದ ನಂತರ, ಚಂಡಮಾರುತವು ವಿಶಾಖಪಟ್ಟಣಂ ಬಳಿ ಬಂಗಾಳಕೊಲ್ಲಿಯಲ್ಲಿ ಮರುಕಳಿಸುವ ಸಾಧ್ಯತೆಯಿದೆ. ತೆಲಂಗಾಣದ ನಲ್ಗೊಂಡ, ಸೂರ್ಯಪೇಟ್, ಭದ್ರಾದ್ರಿ ಕೊತಗುಡೆಂ, ಖಮ್ಮಂ ಮತ್ತು ಮುಲುಗು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಮತ್ತು ದಕ್ಷಿಣ ಕರಾವಳಿ ಆಂಧ್ರದ ಕೆಲವು ಭಾಗಗಳಲ್ಲಿ ಮಂಗಳವಾರ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಮಚಲಿಪಟ್ಟಣಂನಲ್ಲಿಯೂ ಮಳೆ ಮತ್ತು ಬಿರುಗಾಳಿ ಬೀಸಿದೆ.

ವಿಶಾಖಪಟ್ಟಣದಿಂದ ವಿಮಾನ ರದ್ದು: ಅಸನಿ ಚಂಡಮಾರುತದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಇಂದು ವಿಶಾಖಪಟ್ಟಣದಿಂದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ವಿಶಾಖಪಟ್ಟಣಂ ವಿಮಾನ ನಿಲ್ದಾಣದ ನಿರ್ದೇಶಕ ಶ್ರೀನಿವಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  • Revised status of today's flight ops in view of #CycloneAsani - All IndiGo flights (22 Arrivals plus 22 Departures ) stand cancelled. Air Asia cancelled one flight from Bengaluru & one from Delhi, decision about evening flights awaited: K Srinivasa Rao, Airport Dir, Visakhapatnam

    — ANI (@ANI) May 11, 2022 " class="align-text-top noRightClick twitterSection" data=" ">

ರಾಜ್ಯದ ಕೃಷ್ಣಾ, ಗುಂಟೂರು, ಕಾಕಿನಾಡ, ಕೋನಸೀಮಾ, ಪಶ್ಚಿಮ ಗೋದಾವರಿ, ಪೂರ್ವ ಗೋದಾವರಿ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಪ್ರದೇಶದಲ್ಲಿ ಗಂಟೆಗೆ 75 ರಿಂದ 95 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

  • #WATCH | Andhra Pradesh: Tumultuous waves along with gusty winds prevail on the shores of Visakhapatnam as #CycloneAsani approaches

    As per IMD, cyclone is very likely to move nearly northwestwards for next few hours & reach Westcentral Bay of Bengal close to Andhra Pradesh coast pic.twitter.com/ISp7vgMXbq

ಇದನ್ನೂ ಓದಿ: ಚಂಡಮಾರುತದ ಎಫೆಕ್ಟ್; ರಾಜ್ಯಾದ್ಯಂತ ಭಾರಿ ಮಳೆ ನಿರೀಕ್ಷೆ, ಯೆಲ್ಲೋ ಅಲರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.