ರೂರ್ಕಿ(ಉತ್ತರಾಖಂಡ): ರೂರ್ಕಿಯ ಅಶೋಕ್ ನಗರ ಪ್ರದೇಶದಲ್ಲಿ ರೈಲ್ವೆ ಇಲಾಖೆ ತನ್ನ ಭೂಮಿಯನ್ನು ಹಿಂಪಡೆಯಲು ಅತಿಕ್ರಮಣ ವಿರೋಧಿ ಅಭಿಯಾನ ನಡೆಸುತ್ತಿದೆ. ಅತಿಕ್ರಮಿಸಿದ ಭೂಮಿಯನ್ನು ತೆರವುಗೊಳಿಸಿ ರೈಲ್ವೆ ಪಿಲ್ಲರ್ಗಳನ್ನು ನಿರ್ಮಿಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಅಷ್ಟೇ ಅಲ್ಲದೇ, ಕ್ರಿಕೆಟಿಗ ರಿಷಬ್ ಪಂತ್ ಅವರ ಮನೆಯ ಮುಂದೆಯೂ ಕೆಲವು ಕಂಬಗಳನ್ನು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ರೂರ್ಕಿಯ ಧಂದೇರಾ ರೈಲ್ವೆ ನಿಲ್ದಾಣದ ದಕ್ಷಿಣ ಭಾಗದಲ್ಲಿ ಭೂಅತಿಕ್ರಮಣ ಮಾಡಿಕೊಳ್ಳಲಾಗಿತ್ತು. ಜನವಸತಿ ಹೆಚ್ಚಾದಂತೆ ಅತಿಕ್ರಮಣದಾರರು ರೈಲ್ವೆ ಇಲಾಖೆ ಭೂಮಿಯಲ್ಲಿ ವಾಹನ ನಿಲುಗಡೆ ನಿಲ್ದಾಣಗಳನ್ನು ಸಹ ನಿರ್ಮಿಸಿದ್ದರು. ಈ ಪ್ರದೇಶವನ್ನು ಕಸ ಸುರಿಯುವ ಸ್ಥಳವಾಗಿಯೂ ಬಳಸಲಾಗುತ್ತಿತ್ತು.
ಇದನ್ನೂ ಓದಿ: ಟ್ರಾಕ್ ಮೇಲೆ ನಿಂತು ವಿಡಿಯೋ ಚಿತ್ರೀಕರಣ: ರೈಲು ಡಿಕ್ಕಿ ಹೊಡೆದು ಮೂವರ ಸಾವು
ಈ ಹಿಂದೆಯೂ ಸಹ ರೈಲ್ವೆ ಇಲಾಖೆ ಅತಿಕ್ರಮಿತ ಭೂಮಿಯನ್ನು ತೆರವುಗೊಳಿಸಲು ಪ್ರಯತ್ನಿಸಿತ್ತು. ಆದರೆ ಸಾಕಷ್ಟು ವಿರೋಧ ವ್ಯಕ್ತವಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಬುಧವಾರ ಕೆಲವರ ವಿರೋಧದ ನಡುವೆಯೂ ಇಲಾಖೆ ತನ್ನ ಜಮೀನನ್ನು ಅತಿಕ್ರಮಣದಾರರಿಂದ ಮುಕ್ತಗೊಳಿಸಿ ಕಂಬಗಳನ್ನು ನಿರ್ಮಿಸಿದೆ.