ಐಜ್ವಾಲ್ (ಮಿಜೋರಾಂ) : ಭಾರತ್ ಜೋಡೋ ಪಾದಯಾತ್ರೆ ಕೆಲ ರಾಜ್ಯಗಳಲ್ಲಿ ಯಶ ತಂದಿದ್ದನ್ನೇ ಮಾನದಂಡ ಮಾಡಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣಾ ರಾಜ್ಯವಾದ ಮಿಜೋರಾಂನಲ್ಲಿ ಸೋಮವಾರ ಪಾದಯಾತ್ರೆ ಹಮ್ಮಿಕೊಂಡರು. ಕಾಂಗ್ರೆಸ್ ಬೆಂಬಲಿಗರು ಪಕ್ಷದ ಧ್ವಜಗಳನ್ನು ಹಿಡಿದುಕೊಂಡು ಐಜ್ವಾಲ್ನ ರಸ್ತೆಗಳಲ್ಲಿ ಹೆಜ್ಜೆ ಹಾಕಿದರು.
-
LIVE: Chanmari to Raj Bhawan | Aizawl, Mizoram | Bharat Jodo Yatra https://t.co/7gMOvxi0ny
— Rahul Gandhi (@RahulGandhi) October 16, 2023 " class="align-text-top noRightClick twitterSection" data="
">LIVE: Chanmari to Raj Bhawan | Aizawl, Mizoram | Bharat Jodo Yatra https://t.co/7gMOvxi0ny
— Rahul Gandhi (@RahulGandhi) October 16, 2023LIVE: Chanmari to Raj Bhawan | Aizawl, Mizoram | Bharat Jodo Yatra https://t.co/7gMOvxi0ny
— Rahul Gandhi (@RahulGandhi) October 16, 2023
ರಾಹುಲ್ ಗಾಂಧಿ ಚನ್ಮಾರಿ ಜಂಕ್ಷನ್ನಿಂದ ಮೆರವಣಿಗೆ ಆರಂಭಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನಸ್ತೋಮ ಕಾಂಗ್ರೆಸ್ ನಾಯಕನನ್ನು ಸ್ವಾಗತಿಸಿತು. ದಾರಿಯುದ್ದಕ್ಕೂ ಜನರ ಕೈಕುಲುಕಿ, ಮಾತನಾಡಿಸುತ್ತಾ ಸಾಗಿದರು. ಕೆಲವರು ಸೆಲ್ಫಿ ತೆಗೆದುಕೊಂಡರು. ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಲಾಯಿತು.
ಭಾರತ್ ಜೋಡೋ ಯಶಸ್ಸಿನ ಮಂತ್ರ: ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ನಾಯಕರು ಚುನಾವಣಾ ಸಮಯದಲ್ಲಿ ಬೃಹತ್ ರೋಡ್ ಶೋ, ಸಾರ್ವಜನಿಕ ಸಭೆಗಳನ್ನು ನಡೆಸಿ ಜನರೊಂದಿಗೆ ಸಂಭಾಷಣೆ ನಡೆಸುತ್ತಾರೆ. ಆದರೆ, ರಾಹುಲ್ ಗಾಂಧಿ ಹೊಸ ಟ್ರೆಂಡ್ ಶುರು ಮಾಡಿದ್ದಾರೆ. ಈ ಹಿಂದೆ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 'ಭಾರತ್ ಜೋಡೋ ಯಾತ್ರೆ' ನಡೆಸಿದ್ದರು. ಇದಕ್ಕೆ ಸಿಕ್ಕ ಬೆಂಬಲ ಮತ್ತು ಅದು ಸಾಗಿ ಬಂದ ಕೆಲ ರಾಜ್ಯಗಳಲ್ಲಿ ಪಕ್ಷಕ್ಕೆ ಲಾಭ ತಂದುಕೊಟ್ಟಿದೆ ಎಂದು ಪಕ್ಷ ಹೇಳುತ್ತಿದೆ. ಇದನ್ನೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿರುವ ರಾಹುಲ್, ಮುಂದಿನ ಪಂಚ ಚುನಾವಣಾ ರಾಜ್ಯಗಳಲ್ಲಿ ಯಾತ್ರೆ ನಡೆಸಲು ಉದ್ದೇಶಿಸಿದ್ದಾರೆ ಎಂದು ಹೇಳಲಾಗಿದೆ.
-
The Congress' Central Election Committee has released the list of candidates for the Mizoram Assembly elections 2023. pic.twitter.com/6MpruVSUJD
— Congress (@INCIndia) October 16, 2023 " class="align-text-top noRightClick twitterSection" data="
">The Congress' Central Election Committee has released the list of candidates for the Mizoram Assembly elections 2023. pic.twitter.com/6MpruVSUJD
— Congress (@INCIndia) October 16, 2023The Congress' Central Election Committee has released the list of candidates for the Mizoram Assembly elections 2023. pic.twitter.com/6MpruVSUJD
— Congress (@INCIndia) October 16, 2023
39 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಕಾಂಗ್ರೆಸ್ ಪಕ್ಷ 39 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತು. ಪಕ್ಷದ ರಾಜ್ಯಾಧ್ಯಕ್ಷ ಲಾಲ್ಸಾವ್ತಾ ಅವರನ್ನು ಐಜ್ವಾಲ್ ವೆಸ್ಟ್-3 ರಿಂದ ಕಣಕ್ಕಿಳಿಸಲಾಗಿದೆ. ಲಾಲ್ನುನ್ಮಾವಿಯಾ ಚುವಾಂಗೊ ಅವರು ಐಜ್ವಾಲ್ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಪಕ್ಷವು 26 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತ್ತು. ಝೋರಂತಂಗ ಹಾಲಿ ಸಿಎಂ ಆಗಿದ್ದಾರೆ. ಕಾಂಗ್ರೆಸ್ 5 ಸೀಟುಗಳನ್ನು ಹಾಗೂ ಬಿಜೆಪಿ ಕೇವಲ 1 ಸ್ಥಾನ ಪಡೆದುಕೊಂಡಿತ್ತು. 40 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಚಿಕ್ಕ ರಾಜ್ಯ ಮಿಜೋರಾಂನಲ್ಲಿ ನವೆಂಬರ್ 7 ರಂದು ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಮತಗಳ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಮಧ್ಯಂತರ ತಡೆಯಾಜ್ಞೆ ತೆರವು ಮಾಡಲು ಸುಪ್ರೀಂ ನಿರಾಕರಣೆ