ರಾಯ್‌ಪುರ (ಛತ್ತೀಸ್‌ಗಢ): ವಿಧಾನಸಭೆ, ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜನರೊಂದಿಗೆ ಬೆರೆಯುವುದನ್ನು ಮುಂದುವರಿಸಿದ್ದಾರೆ. ಚುನಾವಣಾ ರಾಜ್ಯವಾದ ಛತ್ತೀಸ್‌ಗಢದಲ್ಲಿ ಪ್ರಚಾರ ನಡೆಸುತ್ತಿರುವ ಸಂಸದ, ಅಲ್ಲಿನ ರೈತರೊಂದಿಗೆ ಬೆಳೆ ಕಟಾವು ಮಾಡುವ ಮೂಲಕ ಗಮನ ಸೆಳೆದರು.
ರಾಜಧಾನಿ ರಾಯ್ಪುರದ ಸಮೀಪದಲ್ಲಿರುವ ಕಥಿಯಾ ಗ್ರಾಮಕ್ಕೆ ಭೇಟಿ ನೀಡಿದ ಅವರು, ಭತ್ತದ ಗದ್ದೆಗಳಲ್ಲಿ ಬೆಳೆ ಕೊಯ್ಲು ಮಾಡುತ್ತಿದ್ದ ರೈತರ ಜೊತೆ ಸೇರಿಕೊಂಡ ಬೆಳೆ ಕಟಾವು ಮಾಡಿದರು. ಬಳಿಕ ಅವರ ಜೊತೆ ಸಂವಾದ ನಡೆಸಿದರು.
ರೈತರೊಂದಿಗೆ ರಾಹುಲ್ ಗಾಂಧಿ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಚಿತ್ರಗಳನ್ನು ಕಾಂಗ್ರೆಸ್ ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದೆ. ರಾಹುಲ್ ಭತ್ತವನ್ನು ಕೊಯ್ಲು ಮಾಡುತ್ತಿರುವುದು ಮತ್ತು ರೈತರೊಂದಿಗೆ ಮಾತುಕತೆ ನಡೆಸುತ್ತಿರುವುದನ್ನು ಕಾಣಬಹುದು. ಕಾಂಗ್ರೆಸ್ ನಾಯಕನ ಜೊತೆಗೆ, ಮುಖ್ಯಮಂತ್ರಿ ಭೂಪೇಶ್ ಬಘೇಲ್, ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವು ಗಾಂಧಿ ಸೇರಿದಂತೆ ಇತರರು ಜೊತೆಗಿದ್ದರು.
-
आज छत्तीसगढ़ में किसानों के बीच पहुंचे जननायक @RahulGandhi जी।
— Congress (@INCIndia) October 29, 2023 " class="align-text-top noRightClick twitterSection" data="
किसानों संग कांग्रेस का रिश्ता बेहद पुराना और मजबूत रहा है, जो समय के साथ और गहरा होता जा रहा है।
इसी परंपरा के साथ छत्तीसगढ़ में कांग्रेस सरकार हर मोड़ पर किसानों का साथ निभा रही है, उन्हें आर्थिक और सामाजिक रूप… pic.twitter.com/iGXa6JRQCA
">आज छत्तीसगढ़ में किसानों के बीच पहुंचे जननायक @RahulGandhi जी।
— Congress (@INCIndia) October 29, 2023
किसानों संग कांग्रेस का रिश्ता बेहद पुराना और मजबूत रहा है, जो समय के साथ और गहरा होता जा रहा है।
इसी परंपरा के साथ छत्तीसगढ़ में कांग्रेस सरकार हर मोड़ पर किसानों का साथ निभा रही है, उन्हें आर्थिक और सामाजिक रूप… pic.twitter.com/iGXa6JRQCAआज छत्तीसगढ़ में किसानों के बीच पहुंचे जननायक @RahulGandhi जी।
— Congress (@INCIndia) October 29, 2023
किसानों संग कांग्रेस का रिश्ता बेहद पुराना और मजबूत रहा है, जो समय के साथ और गहरा होता जा रहा है।
इसी परंपरा के साथ छत्तीसगढ़ में कांग्रेस सरकार हर मोड़ पर किसानों का साथ निभा रही है, उन्हें आर्थिक और सामाजिक रूप… pic.twitter.com/iGXa6JRQCA
ಎಕ್ಸ್ನಲ್ಲಿ ಚಿತ್ರಗಳು ಪೋಸ್ಟ್: ರೈತರೊಂದಿಗೆ ಭೇಟಿಯ ನಂತರ, ರಾಹುಲ್ ಗಾಂಧಿ ಅದರ ಚಿತ್ರಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ. ರೈತರು ಸಂತೋಷವಾಗಿದ್ದರೆ ದೇಶ ಖುಷಿಯಾಗಿರುತ್ತದೆ. ಛತ್ತೀಸ್‌ಗಢದ ರೈತರಿಗೆ ಕಾಂಗ್ರೆಸ್ ಸರ್ಕಾರ 5 ಉತ್ತಮ ಯೋಜನೆಗಳನ್ನು ನೀಡಿದೆ. ಇದರಿಂದ ಅವರು ದೇಶದಲ್ಲಿಯೇ ಉತ್ತಮ ಸ್ಥಿತಿಯಲ್ಲಿದ್ದಾರೆ. ಪ್ರತಿ ಕ್ವಿಂಟಾಲ್ ಭತ್ತಕ್ಕೆ 2,640 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು 26 ಲಕ್ಷ ರೈತರಿಗೆ 23 ಸಾವಿರ ಕೋಟಿ ರೂಪಾಯಿ ಸಬ್ಸಿಡಿ, 19 ಲಕ್ಷ ರೈತರ 10 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ, ವಿದ್ಯುತ್ ಬಿಲ್ ದರ ಅರ್ಧದಷ್ಟು ಕಡಿತ, 5 ಲಕ್ಷ ಕೃಷಿ ಕಾರ್ಮಿಕರಿಗೆ ವರ್ಷಕ್ಕೆ 7 ಸಾವಿರ ರೂಪಾಯಿ ನೀಡಿರುವುದು ಉತ್ತಮ ಯೋಜನೆಗಳಾಗಿವೆ ಎಂದು ಬರೆದುಕೊಂಡಿದ್ದಾರೆ.
-
किसान खुशहाल तो भारत खुशहाल!
— Rahul Gandhi (@RahulGandhi) October 29, 2023 " class="align-text-top noRightClick twitterSection" data="
छत्तीसगढ़ के किसानों के लिए कांग्रेस सरकार के 5 सबसे बेहतरीन काम, जिन्होंने उन्हें भारत में सबसे खुशहाल बनाया:
1️⃣ धान पर MSP ₹2,640/क्विंटल
2️⃣ 26 लाख किसानों को ₹23,000 करोड़ की इनपुट सब्सिडी
3️⃣ 19 लाख किसानों का ₹10,000 करोड़ का कर्ज़ा माफ
4️⃣… pic.twitter.com/pjiTkOIBKJ
">किसान खुशहाल तो भारत खुशहाल!
— Rahul Gandhi (@RahulGandhi) October 29, 2023
छत्तीसगढ़ के किसानों के लिए कांग्रेस सरकार के 5 सबसे बेहतरीन काम, जिन्होंने उन्हें भारत में सबसे खुशहाल बनाया:
1️⃣ धान पर MSP ₹2,640/क्विंटल
2️⃣ 26 लाख किसानों को ₹23,000 करोड़ की इनपुट सब्सिडी
3️⃣ 19 लाख किसानों का ₹10,000 करोड़ का कर्ज़ा माफ
4️⃣… pic.twitter.com/pjiTkOIBKJकिसान खुशहाल तो भारत खुशहाल!
— Rahul Gandhi (@RahulGandhi) October 29, 2023
छत्तीसगढ़ के किसानों के लिए कांग्रेस सरकार के 5 सबसे बेहतरीन काम, जिन्होंने उन्हें भारत में सबसे खुशहाल बनाया:
1️⃣ धान पर MSP ₹2,640/क्विंटल
2️⃣ 26 लाख किसानों को ₹23,000 करोड़ की इनपुट सब्सिडी
3️⃣ 19 लाख किसानों का ₹10,000 करोड़ का कर्ज़ा माफ
4️⃣… pic.twitter.com/pjiTkOIBKJ
ಬಳಿಕ ರಾಜನಂದಗಾಂವ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ, ಭೂರಹಿತ ಗ್ರಾಮೀಣ ಕಾರ್ಮಿಕರಿಗೆ ವಾರ್ಷಿಕ 10,000 ರೂಪಾಯಿ ಸೌಲಭ್ಯ, ಬಡವರಿಗೆ 10 ಲಕ್ಷದವರೆಗೆ ಉಚಿತ ಚಿಕಿತ್ಸಾ ಸೌಲಭ್ಯವನ್ನು ನೀಡಲಾಗುವುದು ಎಂದು ಘೋಷಿಸಿದ್ದಾರೆ.
ಈ ಹಿಂದಿನ ವಿದ್ಯಮಾನಗಳು: ಈ ಹಿಂದೆಯೂ ರಾಹುಲ್ ಗಾಂಧಿ ಅವರು ಜನರೊಂದಿಗೆ ಬೆರೆಯುವ ಮೂಲಕ ಗಮನ ಸೆಳೆದಿದ್ದರು. ದೆಹಲಿಯಲ್ಲಿ ಬೈಕ್ ರಿಪೇರಿ, ರೈಲ್ವೆ ಸ್ಟೇಶನ್ ಬಳಿ ಸೂಟ್ಕೇಸ್ ಹೊರುವುದು, ಗದ್ದೆಯಲ್ಲಿ ನಾಟಿ, ರೈಲಿನಲ್ಲಿ ಜನರೊಂದಿಗೆ ಪ್ರಯಾಣಿಸಿದ್ದಲ್ಲದೆ, ಬಡಿಗ ಕೆಲಸವನ್ನೂ ಮಾಡಿದ್ದರು.
ರಾಷ್ಟ್ರ ರಾಜಧಾನಿಯಲ್ಲಿ ಸಾರ್ವಜನಿಕರೊಂದಿಗೆ ಮೂರು ಬಾರಿ ಭೇಟಿಯಾಗಿದ್ದರು. ಅವರು ಆಗಸ್ಟ್‌ನಲ್ಲಿ ಇಲ್ಲಿನ ಆಜಾದ್‌ಪುರ ಮಾರುಕಟ್ಟೆಯಲ್ಲಿ ಹಣ್ಣು ಮತ್ತು ತರಕಾರಿ ಮಾರಾಟಗಾರರನ್ನು ಭೇಟಿ ಮಾಡಿದ್ದರು. ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಹಮಾಲಿಗಳೊಂದಿಗೆ ಸೂಟ್ಕೇಸ್ ಹೊತ್ತು ಸಾಗಿ, ಬಳಿಕ ಅವರೊಂದಿಗೆ ಸಂವಾದ ನಡೆಸುವ ಮೂಲಕ ಅಹವಾಲು ಆಲಿಸಿದ್ದರು.
ದೆಹಲಿಯ ಕೀರ್ತಿ ನಗರದಲ್ಲಿರುವ ಏಷ್ಯಾದ ಅತಿದೊಡ್ಡ ಪೀಠೋಪಕರಣ ಮಾರುಕಟ್ಟೆಗೆ ಭೇಟಿ ನೀಡಿ ಬಡಗಿಗಳೊಂದಿಗೆ ಸಂವಾದ ನಡೆಸಿದ್ದರು. ಜೊತೆಗೆ ಕೆಲವು ಪೀಠೋಪಕರಣ ವಸ್ತುಗಳನ್ನು ನಿರ್ಮಿಸುವ ಪ್ರಯತ್ನವನ್ನೂ ಮಾಡಿದ್ದರು.
ಇದನ್ನೂ ಓದಿ: ಬೈಕ್ ರಿಪೇರಿ, ಹಮಾಲಿ ಬಳಿಕ ಬಡಿಗನಾದ ರಾಹುಲ್ ಗಾಂಧಿ..ಪೀಠೋಪಕರಣ ತಯಾರಿಸಲು ಯತ್ನ