ETV Bharat / bharat

ರಾಷ್ಟ್ರಪತಿಗಳ ಭಾಷಣ: ವಂದನಾ ನಿರ್ಣಯದ ಮೇಲೆ ರಾಹುಲ್​ ಗಾಂಧಿ ಮೊದಲ ಮಾತು

author img

By

Published : Feb 2, 2022, 9:40 AM IST

ಲೋಕಸಭೆಯಲ್ಲಿ ವಂದನಾ ನಿರ್ಣಯದ ವೇಳೆ ರಾಷ್ಟ್ರಪತಿಗಳ ಭಾಷಣದ ಮೇಲೆ ಚರ್ಚಿಸಲು ವಿರೋಧ ಪಕ್ಷಗಳಿಗೆ 12 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಇದರಲ್ಲಿ ಕಾಂಗ್ರೆಸ್‌ಗೆ 1 ಗಂಟೆ ನೀಡಲಾಗಿದೆ, ಈ ವೇಳೆ, ಕಾಂಗ್ರೆಸ್​ ಪರವಾಗಿ ಮೊದಲಿಗರಾಗಿ ರಾಹುಲ್​ ಗಾಂಧಿ ಮಾತು ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.

rahul-gandhi
ರಾಹುಲ್​ ಗಾಂಧಿ

ನವದೆಹಲಿ: ಲೋಕಸಭೆಯಲ್ಲಿ ಇಂದು ನಡೆಯುವ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೊದಲಿಗರಾಗಿ ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲೋಕಸಭೆಯಲ್ಲಿ ವಂದನಾ ನಿರ್ಣಯದ ವೇಳೆ ರಾಷ್ಟ್ರಪತಿಗಳ ಭಾಷಣದ ಮೇಲೆ ಚರ್ಚಿಸಲು ವಿರೋಧ ಪಕ್ಷಗಳಿಗೆ 12 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಇದರಲ್ಲಿ ಕಾಂಗ್ರೆಸ್‌ಗೆ 1 ಗಂಟೆ ನೀಡಲಾಗಿದೆ, ಈ ವೇಳೆ ಕಾಂಗ್ರೆಸ್​ ಪರವಾಗಿ ಮೊದಲಿಗರಾಗಿ ರಾಹುಲ್​ ಗಾಂಧಿ ಮಾತು ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತಿಪಕ್ಷಗಳಲ್ಲಿ ಕಾಂಗ್ರೆಸ್ ಅತಿದೊಡ್ಡ​ ಪಕ್ಷವಾಗಿದ್ದು, ಅಧ್ಯಕ್ಷೀಯ ಭಾಷಣದ ಮೇಲಿನ ಚರ್ಚೆಯನ್ನು ರಾಹುಲ್ ಗಾಂಧಿ ಶುರು ಮಾಡಲಿದ್ದಾರೆ. ಈ ವೇಳೆ ಅವರು, ಪೆಗಾಸಸ್​​ ಸಾಫ್ಟ್​ವೇರ್​ ಸ್ಪೈವೇರ್​ ವಿಷಯವನ್ನು ಭಾಷಣದಲ್ಲಿ ಪ್ರಸ್ತಾಪಿಸಲಿದ್ದಾರೆ.

ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಹುಲ್​ ಗಾಂಧಿ, ಬಜೆಟ್​ ಮತ್ತು ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲಿನ ಭಾಷಣವನ್ನು ಸನದಲ್ಲಿಯೇ ಮಾಡುವೆ ಎಂದಿದ್ದಾರೆ. ಈ ಮಧ್ಯೆ ಪಕ್ಷವು ಯುವ ಕಾಂಗ್ರೆಸ್​ ನೇತೃತ್ವದಲ್ಲಿ ಸಂಸತ್ತಿನ ಹೊರಗೆ ಪೆಗಾಸಸ್​ ವಿರುದ್ಧ ಪ್ರತಿಭಟನೆ ನಡೆಸಲು ಸೂಚಿಸಲಾಗಿದೆ.

ಮುಂದಿನ ಸೋಮವಾರದಂದು (ಫೆ.7) ಲೋಕಸಭೆಯಲ್ಲಿ ಮತ್ತು ಮಂಗಳವಾರ (ಫೆ.8) ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಅವರು ಮಾತನಾಡುವ ಸಾಧ್ಯತೆ ಇದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.