ನವದೆಹಲಿ : ಇಂಧನ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, ಇಂಧನ ಬೆಲೆ ಏರಿಕೆಗೆ ಇತ್ತೀಚಿನವರೆಗೂ ಇದ್ದ ಲಾಕ್‌ಡೌನ್ ಅಂತ್ಯಗೊಂಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಲೀಟರ್‌ಗೆ 80 ಪೈಸೆ ಏರಿಕೆಯಾದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಗ್ಯಾಸ್, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳ ಮೇಲೆ ಈವರೆಗೂ ವಿಧಿಸಲಾಗಿದ್ದ 'ಲಾಕ್‌ಡೌನ್' ಅನ್ನು ತೆಗೆದು ಹಾಕಲಾಗಿದೆ.
-
गैस, डीज़ल और पेट्रोल के दामों पर लगा ‘Lockdown’ हट गया है।
— Rahul Gandhi (@RahulGandhi) March 22, 2022 " class="align-text-top noRightClick twitterSection" data="
अब सरकार लगातार क़ीमतों का ‘Vikas’ करेगी।
महंगाई की महामारी के बारे में प्रधानमंत्री जी से पूछिए, तो वो कहेंगे #ThaliBajao
">गैस, डीज़ल और पेट्रोल के दामों पर लगा ‘Lockdown’ हट गया है।
— Rahul Gandhi (@RahulGandhi) March 22, 2022
अब सरकार लगातार क़ीमतों का ‘Vikas’ करेगी।
महंगाई की महामारी के बारे में प्रधानमंत्री जी से पूछिए, तो वो कहेंगे #ThaliBajaoगैस, डीज़ल और पेट्रोल के दामों पर लगा ‘Lockdown’ हट गया है।
— Rahul Gandhi (@RahulGandhi) March 22, 2022
अब सरकार लगातार क़ीमतों का ‘Vikas’ करेगी।
महंगाई की महामारी के बारे में प्रधानमंत्री जी से पूछिए, तो वो कहेंगे #ThaliBajao
ಈಗ ಸರ್ಕಾರವು ನಿರಂತರವಾಗಿ ಬೆಲೆಗಳನ್ನು 'ಅಭಿವೃದ್ಧಿ' ಮಾಡುತ್ತದೆ. ಹಣದುಬ್ಬರದ 'ಸಾಂಕ್ರಾಮಿಕ'ದ ಬಗ್ಗೆ ಪ್ರಧಾನಿಯನ್ನು ಕೇಳಿದರೆ ಅವರು 'ಥಾಲಿ ಬಜಾವ್' ಎಂದು ಹೇಳುತ್ತಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಜೊತೆಗೆ ಗೃಹಬಳಕೆಯ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 50 ರೂಪಾಯಿ ಹೆಚ್ಚಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕೂವರೆ ತಿಂಗಳಿಂದ ತಟಸ್ಥವಾಗಿದ್ದ ಇಂಧನ ಬೆಲೆಗಳನ್ನು ಏರಿಸಲಾಗಿದೆ.
ಪೆಟ್ರೀಲ್ ಮತ್ತು ಡೀಸೆಲ್ ಬೆಲೆಗಳ ವಿಚಾರಕ್ಕೆ ಬರುವುದಾದರೆ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈ ಹಿಂದೆ 95.41 ರೂಪಾಯಿ ಇದ್ದು, ಈಗ ಒಂದು ಲೀಟರ್‌ಗೆ 96.21 ರೂಪಾಯಿ ಆಗಿದೆ. ಡೀಸೆಲ್ ದರಗಳು ಲೀಟರ್‌ಗೆ ಈ ಮೊದಲು 86.67 ರೂಪಾಯಿ ಇದ್ದು, ಈಗ 87.47 ರೂಪಾಯಿಗೆ ಏರಿಕೆಯಾಗಿದೆ. ಅಷ್ಟೇ ಅಲ್ಲ, ರಾಷ್ಟ್ರ ರಾಜಧಾನಿಯಲ್ಲಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 949.50 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ: ಎಲ್‌ಪಿಜಿ ಬೆಲೆ ಹೆಚ್ಚಳ ಬಿಜೆಪಿ ಸರ್ಕಾರದ ಮತ್ತೊಂದು ಉಡುಗೊರೆ: ಅಖಿಲೇಶ್ ಯಾದವ್ ಗರಂ