ETV Bharat / bharat

ಜಾತಿ ಆಧಾರಿತ ಪ್ರಾತಿನಿಧ್ಯ ಸಿಗಲಿ: ಬಿಹಾರ ಸಮೀಕ್ಷಾ ವರದಿಗೆ ರಾಹುಲ್​ ಗಾಂಧಿ ಮೆಚ್ಚುಗೆ

author img

By ANI

Published : Oct 2, 2023, 10:13 PM IST

ಬಿಹಾರದ ಜಾತಿ ಆಧರಿತ ಸಮೀಕ್ಷೆಯನ್ನು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಸ್ವಾಗತಿಸಿದ್ದಾರೆ. ಇದೇ ವೇಳೆ ಸಮೀಕ್ಷೆ ನಡೆಸಿದ ತಂಡವನ್ನು ಸಿಎಂ ನಿತೀಶ್​ಕುಮಾರ್​ ಶ್ಲಾಘಿಸಿದ್ದಾರೆ.

ರಾಹುಲ್​ ಗಾಂಧಿ
ರಾಹುಲ್​ ಗಾಂಧಿ

ನವದೆಹಲಿ : I.N.D.I.A ಕೂಟ ಅಧಿಕಾರಕ್ಕೆ ಬಂದರೆ, ಜಾತಿಗಣತಿ ನಡೆಸಲಾಗುವುದು ಎಂದು ಭರವಸೆ ನೀಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಬಿಹಾರ ಸರ್ಕಾರ ಇಂದು (ಅಕ್ಟೋಬರ್​ 2) ಬಿಡುಗಡೆ ಮಾಡಿರುವ ಜಾತಿ ಗಣತಿಯನ್ನು ಸ್ವಾಗತಿಸಿದ್ದಾರೆ. ಅಲ್ಲದೇ, ವರ್ಗಗಳ ಜನಸಂಖ್ಯೆಯ ಆಧಾರದ ಮೇಲೆ ಜನರಿಗೆ ಪ್ರಾತಿನಿಧ್ಯವನ್ನು ನೀಡಬೇಕು ಎಂದು ಪುನರುಚ್ಚರಿಸಿದ್ದಾರೆ.

ಬಿಹಾರದ ಜಾತಿ ಸಮೀಕ್ಷಾ ವರದಿ ಸಮಾಜದಲ್ಲಿ ಯಾವೆಲ್ಲಾ ವರ್ಗದ ಜನರು, ಎಷ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತದೆ. ಆಗ ಅವರಿಗೆ ಸಿಗಬೇಕಾದ ಮೀಸಲು, ಹಕ್ಕುಗಳು ಏನೆಂಬುದು ತಿಳಿಯುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಜಾತಿವಾರು ಅಂಕಿಅಂಶಗಳನ್ನು ತಿಳಿದುಕೊಳ್ಳುವುದು ಎಷ್ಟು ಮಹತ್ವ ಎಂಬುದನ್ನು ಸೂಚಿಸುತ್ತದೆ ಎಂದಿದ್ದಾರೆ.

  • बिहार की जातिगत जनगणना से पता चला है कि वहां OBC + SC + ST 84% हैं।

    केंद्र सरकार के 90 सचिवों में सिर्फ़ 3 OBC हैं, जो भारत का मात्र 5% बजट संभालते हैं!

    इसलिए, भारत के जातिगत आंकड़े जानना ज़रूरी है। जितनी आबादी, उतना हक़ - ये हमारा प्रण है।

    — Rahul Gandhi (@RahulGandhi) October 2, 2023 " class="align-text-top noRightClick twitterSection" data=" ">

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ರಾಹುಲ್​ ಗಾಂಧಿ, ಬಿಹಾರದ ಜಾತಿ ಗಣತಿಯು ಹಿಂದುಳಿದ ವರ್ಗ + ಪರಿಶಿಷ್ಟ ಜಾತಿ + ಪರಿಶಿಷ್ಟ ಪಂಗಡದ ಜನಸಂಖ್ಯೆ ಸೇರಿ ರಾಜ್ಯದಲ್ಲಿ ಒಟ್ಟಾರೆ, 84 ಪ್ರತಿಶತದಷ್ಟಿದ್ದಾರೆ ಎಂದು ಬಹಿರಂಗಪಡಿಸಿದೆ. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳ ಪೈಕಿ ಕೇವಲ ಮೂವರು ಮಾತ್ರ ಒಬಿಸಿಯವರಾಗಿದ್ದಾರೆ. ಅವರು ದೇಶದ ಬಜೆಟ್‌ನ ಶೇಕಡಾ 5 ರಷ್ಟನ್ನು ಪ್ರತಿನಿಧಿಸುತ್ತಾರೆ. ಆದ್ದರಿಂದ, ಭಾರತದ ಜಾತಿ ಅಂಕಿಅಂಶಗಳನ್ನು ತಿಳಿದುಕೊಳ್ಳುವುದು ಮುಖ್ಯ. ಹೆಚ್ಚಿನ ಜನಸಂಖ್ಯೆಗೆ ಹೆಚ್ಚಿನ ಹಕ್ಕುಗಳು ಎಂಬುದು ನಮ್ಮ ಪ್ರತಿಜ್ಞೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

  • आज गांधी जयंती के शुभ अवसर पर बिहार में कराई गई जाति आधारित गणना के आंकड़े प्रकाशित कर दिए गए हैं। जाति आधारित गणना के कार्य में लगी हुई पूरी टीम को बहुत-बहुत बधाई !

    जाति आधारित गणना के लिए सर्वसम्मति से विधानमंडल में प्रस्ताव पारित किया गया था।…

    — Nitish Kumar (@NitishKumar) October 2, 2023 " class="align-text-top noRightClick twitterSection" data=" ">

ಸಿಎಂ ನಿತೀಶ್​ಕುಮಾರ್​ ಪ್ರಶಂಸೆ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜಾತಿವಾರು ಗಣತಿ ಕಾರ್ಯವನ್ನು ಶ್ಲಾಘಿಸಿದ್ದಾರೆ. ಸಮೀಕ್ಷೆ ನಡೆಸಿದ ಇಡೀ ತಂಡವನ್ನು ಅಭಿನಂದಿಸಿದ್ದಾರೆ. ಸಮೀಕ್ಷೆಯು ಜಾತಿಗಳನ್ನು ಬಹಿರಂಗಪಡಿಸುವುದರ ಜೊತೆಗೆ, ಪ್ರತಿಯೊಬ್ಬರ ಆರ್ಥಿಕ ಸ್ಥಿತಿಯ ಬಗ್ಗೆಯೂ ಮಾಹಿತಿ ನೀಡಿದೆ ಎಂದು ಹೇಳಿದ್ದಾರೆ.

ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಹಾರ ಸಿಎಂ, ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ, ಬಿಹಾರದಲ್ಲಿ ನಡೆಸಿದ ಜಾತಿ ಆಧಾರಿತ ಜನಗಣತಿಯ ವರದಿಯನ್ನು ಪ್ರಕಟಿಸಲಾಗಿದೆ. ಜಾತಿ ಆಧಾರಿತ ಗಣತಿ ಪ್ರಸ್ತಾವನೆಯನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಬಿಹಾರ ವಿಧಾನಸಭೆಯ ಎಲ್ಲಾ 9 ಪಕ್ಷಗಳ ಒಪ್ಪಿಗೆಯೊಂದಿಗೆ ರಾಜ್ಯ ಸರ್ಕಾರವು ತನ್ನದೇ ಆದ ಸಂಪನ್ಮೂಲಗಳಿಂದ ಈ ಸಮೀಕ್ಷೆಯನ್ನು ನಡೆಸಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಜಾತಿ ಗಣತಿಯ ಅಂಕಿಅಂಶಗಳು: ಬಿಹಾರದಲ್ಲಿ ಅತ್ಯಂತ ಹಿಂದುಳಿದ ವರ್ಗವು ಶೇಕಡಾ 36.01 ರಷ್ಟಿದೆ. ಹಿಂದುಳಿದ ಜಾತಿಗಳು ಶೇಕಡಾ 27.12, ಸಾಮಾನ್ಯ ಜಾತಿಗಳು ಶೇಕಡಾ 15.52, ಪರಿಶಿಷ್ಟ ಜಾತಿಗಳು ಶೇಕಡಾ 19.65, ಪರಿಶಿಷ್ಟ ಪಂಗಡಗಳು ಶೇಕಡಾ 1.68 ಇದ್ದಾರೆ. ಅದರಲ್ಲಿ ಹಿಂದೂಗಳು 81.99 ಪ್ರತಿಶತ ಇದ್ದರೆ, ಮುಸ್ಲಿಮರು 17.7, ಕ್ರಿಶ್ಚಿಯನ್ನರು 0.05, ಸಿಖ್ಖರು 0.01, ಬೌದ್ಧರು 0.08, ಇತರ ಧರ್ಮಗಳು 0.12 ರಷ್ಟಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ.

ಒಬಿಸಿ ಗುಂಪಿನಲ್ಲಿ ಬರುವ ಯಾದವರು ಅತಿ ದೊಡ್ಡ ಸಂಖ್ಯೆ ಅಂದರೆ, ರಾಜ್ಯದ ಜನಸಂಖ್ಯೆಯ ಶೇಕಡಾ 14.27 ರಷ್ಟಿದ್ದಾರೆ. ಕುಶ್ವಾಹ ಮತ್ತು ಕುರ್ಮಿ ಸಮುದಾಯಗಳು ಕ್ರಮವಾಗಿ ಶೇಕಡಾ 4.27 ಮತ್ತು ಶೇಕಡಾ 2.87 ರಷ್ಟಿದ್ದಾರೆ ಎಂದು ಜಾತಿ ಸಮೀಕ್ಷೆ ಹೇಳಿದೆ. ಭೂಮಿಹಾರ್‌ಗಳು ಶೇಕಡಾ 2.86, ಬ್ರಾಹ್ಮಣರು ಶೇಕಡಾ 3.66, ಕುರ್ಮಿಗಳು ಶೇಕಡಾ 2.87 ಮತ್ತು ಮುಸಾಹರ್‌ಗಳು ಶೇಕಡಾ 3 ರಷ್ಟಿದ್ದಾರೆ. ಬಿಹಾರದ ಒಟ್ಟು ಜನಸಂಖ್ಯೆ 13 ಕೋಟಿಗೂ ಹೆಚ್ಚಿದೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.

ಇದನ್ನೂ ಓದಿ: ವಿರೋಧದ ನಡುವೆ ಬಿಹಾರ ಜಾತಿ ಗಣತಿ ಸಮೀಕ್ಷೆ ಪ್ರಕಟ: ರಾಜ್ಯದಲ್ಲಿ ಶೇ.63 ರಷ್ಟು ಇಬಿಸಿ, ಒಬಿಸಿ ಜನಸಂಖ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.