ETV Bharat / bharat

ಸದ್ದಾಂ ಹುಸೇನ್ ತರ ಕಾಣ್ತಿದ್ದಾರೆ ರಾಹುಲ್ ಗಾಂಧಿ: ಅಸ್ಸಾಂ ಸಿಎಂ ಹೇಳಿಕೆ - ಕಾಂಗ್ರೆಸ್ ಬಾಲಿವುಡ್ ತಾರೆಯರಿಗೆ ಹಣ

ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ ನೀಡಿರುವುದನ್ನು ಪ್ರಶ್ನಿಸಿದ ಶರ್ಮಾ, ಗುಜರಾತ್‌ನಲ್ಲಿ ಅವರು ಅದೃಶ್ಯರಾಗಿದ್ದಾರೆ. ಅವರು ಸಂದರ್ಶಕ ಅಧ್ಯಾಪಕರಂತೆ ರಾಜ್ಯಕ್ಕೆ ಬರುತ್ತಾರೆ. ಹಿಮಾಚಲ ಪ್ರದೇಶದಲ್ಲೂ ಪ್ರಚಾರ ಮಾಡಲಿಲ್ಲ. ಸೋಲಿನ ಭಯ ಇರಬಹುದು. ಅದಕ್ಕೇ ಅವರು ಚುನಾವಣೆ ಇಲ್ಲದ ಕಡೆಗಳಿಗೆ ಮಾತ್ರ ಭೇಟಿ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಸದ್ದಾಂ ಹುಸೇನ್ ತರ ಕಾಣ್ತಿದ್ದಾರೆ ರಾಹುಲ್ ಗಾಂಧಿ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ
Rahul Gandhi looks like Saddam Hussain now Assam CM
author img

By

Published : Nov 23, 2022, 11:53 AM IST

Updated : Nov 23, 2022, 3:21 PM IST

ಅಹಮದಾಬಾದ್: ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿ ಸದ್ದಾಂ ಹುಸೇನ್‌ನಂತೆ ಕಾಣುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವ್ಯಂಗ್ಯವಾಡಿದ್ದಾರೆ. ಗುಜರಾತ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಾಗಿ ಅಹಮದಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ ನೀಡಿರುವುದನ್ನು ಪ್ರಶ್ನಿಸಿದ ಶರ್ಮಾ, ಗುಜರಾತ್‌ನಲ್ಲಿ ಅವರು ಅದೃಶ್ಯರಾಗಿದ್ದಾರೆ. ಸಂದರ್ಶಕ ಅಧ್ಯಾಪಕರಂತೆ ರಾಜ್ಯಕ್ಕೆ ಬರುತ್ತಾರೆ. ಅವರು ಹಿಮಾಚಲ ಪ್ರದೇಶದಲ್ಲೂ ಪ್ರಚಾರ ಮಾಡಲಿಲ್ಲ. ಸೋಲಿನ ಭಯ ಇರಬಹುದು. ಅದಕ್ಕೇ ಅವರು ಚುನಾವಣೆ ಇಲ್ಲದ ಕಡೆಗಳಿಗೆ ಮಾತ್ರ ಭೇಟಿ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಸೇರಲು ಕಾಂಗ್ರೆಸ್ ಬಾಲಿವುಡ್ ತಾರೆಯರಿಗೆ ಹಣ ನೀಡಿರಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಆರೋಪಿಸಿದರು. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ನಟರಾದ ಪೂಜಾ ಭಟ್ ಮತ್ತು ಅಮೋಲ್ ಪಾಲೇಕರ್ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿದರು.

ಇದಕ್ಕೂ ಮುನ್ನ ಧನ್ಸುರಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ, 'ಲವ್ ಜಿಹಾದ್' ನಿಗ್ರಹಿಸಲು ಕಠಿಣ ಕಾನೂನು ಜಾರಿಗೆ ಕರೆ ನೀಡಿದರು. ಹಿಂದೂ ಯುವತಿಯರು ತುಂಬಾ ಭಾವನಾತ್ಮಕವಾಗಿರುವುದರಿಂದ ತಾನು ಅವರನ್ನು ಮಾತ್ರ ಡೇಟಿಂಗ್ ಮಾಡುತ್ತಿರುವುದಾಗಿ ತನ್ನ ಲಿವ್ ಇನ್ ಪಾರ್ಟನರ್ ಶ್ರದ್ಧಾಳ ಕೊಲೆಗಾರ ಅಫ್ತಾಬ್ ಅಮೀನ್ ಪೂನಾವಾಲಾ ಹೇಳಿದ್ದನ್ನು ಅವರು ಈ ಸಮಯದಲ್ಲಿ ಉಲ್ಲೇಖಿಸಿದರು.

ಇದನ್ನೂ ಓದಿ: ದೇಶದಲ್ಲಿ ಸದ್ದಾಂ ಹುಸೇನ್​, ಗಡಾಫಿ ಆಡಳಿತವಿದೆ: ರಾಹುಲ್ ಗಾಂಧಿ ಕಿಡಿಕಿಡಿ

Last Updated : Nov 23, 2022, 3:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.