ETV Bharat / bharat

ಜೈಲಿನಲ್ಲಿ ರೇಡಿಯೋ ಕೇಂದ್ರ, ಕೈದಿಗಳೇ ರೇಡಿಯೋ ಜಾಕಿಗಳು: ಆಗಸ್ಟ್​ 15 ರಿಂದ ಕಾರ್ಯಾರಂಭ - ಉತ್ತರಪ್ರದೇಶದ ಕಾನ್ಪುರ ಜೈಲಿನಲ್ಲಿ ರೇಡಿಯೋ ಕೇಂದ್ರ

ಉತ್ತರಪ್ರದೇಶದ ಕಾನ್ಪುರ ಜೈಲಿನಲ್ಲಿ ರೇಡಿಯೋ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ. ಜೈಲಲ್ಲಿನ ಕೈದಿಗಳೇ ರೇಡಿಯೋ ಜಾಕಿಗಳಾಗಿ ಕೆಲಸ ಮಾಡಲಿದ್ದಾರೆ. ಅಧಿಕಾರಿಗಳ ಈ ಉಪಾಯಕ್ಕೆ ಸೆಲ್ಯೂಟ್​ ಹೊಡೆಯಲೇಬೇಕು.

ಕಾನ್ಪುರ ಜೈಲಿನಲ್ಲಿ ರೇಡಿಯೋ ಕೇಂದ್ರ
ಕಾನ್ಪುರ ಜೈಲಿನಲ್ಲಿ ರೇಡಿಯೋ ಕೇಂದ್ರ
author img

By

Published : Jul 24, 2023, 6:01 PM IST

ಕಾನ್ಪುರ (ಉತ್ತರಪ್ರದೇಶ) : ಅಪರಾಧ ಕೃತ್ಯಗಳನ್ನು ಎಸಗಿ ಜೈಲಿಗೆ ಬಂದವರು ಕಾಲಹರಣ, ಹೊಡೆದಾಟ ತಪ್ಪಿಸಲು ಉತ್ತರಪ್ರದೇಶದ ಕಾನ್ಪುರ ಜೈಲಧಿಕಾರಿಗಳು ಹೊಸ ಉಪಾಯ ಹುಡುಕಿದ್ದಾರೆ. ಜೈಲು ಹಕ್ಕಿಗಳಲ್ಲಿನ ಕೌಶಲ್ಯಗಳನ್ನು ಬಳಸಿಕೊಳ್ಳಲು ಮತ್ತು ಅವಘಡಗಳನ್ನು ತಪ್ಪಿಸಲು ಜೈಲಿನಲ್ಲಿಯೇ ಆಕಾಶವಾಣಿ ಕೇಂದ್ರ ಆರಂಭಿಸಲು ಮುಂದಾಗಿದ್ದಾರೆ.

ಜೈಲಿನೊಳಗೆ ಆಹ್ಲಾದಕರ ವಾತಾವರಣ ಇರುವಂತೆ ಮಾಡಲು ಅಧಿಕಾರಿಗಳು ಆಗಸ್ಟ್ 15ರಿಂದ ಆಕಾಶವಾಣಿ ಕೇಂದ್ರ ಆರಂಭಿಸಲಿದ್ದಾರೆ. ಈ ವಿಶಿಷ್ಟ ಯೋಜನೆಯಲ್ಲಿ ಕೈದಿಗಳೇ ರೇಡಿಯೋ ಜಾಕಿಗಳಾಗಿ ಕೆಲಸ ಮಾಡಲಿದ್ದಾರೆ. ಸಂಗೀತ ದಿಗ್ಗಜರಾದ ಲತಾ ಮಂಗೇಶ್ಕರ್, ಮೊಹಮದ್​ ರಫಿ ಅವರ ಹಾಡುಗಳನ್ನು ಈ ಆಕಾಶವಾಣಿ ಕೇಂದ್ರದಿಂದ ಪ್ರಸಾರ ಮಾಡಲಾಗುತ್ತದೆ. ಜೈಲಿನ ವಾತಾವರಣ ಬದಲಾಗುವುದರ ಜತೆಗೆ ಕೈದಿಗಳಿಗೂ ಮನರಂಜನೆ ದೊರೆಯಲಿದೆ ಎಂಬುದು ಅಧಿಕಾರಿಗಳ ಸ್ಪಷ್ಟನೆ.

ಅಪರಾಧ ಮುಕ್ತಕ್ಕಾಗಿ ಯೋಜನೆ; ನಾನಾ ಅಪರಾಧಗಳನ್ನು ಮಾಡಿ ಜೈಲು ಪಾಲಾಗಿರುವ ಜನರ ಮನಪರಿವರ್ತನೆಗಾಗಿ, ಕ್ರೈಂ ಪ್ರಪಂಚದಿಂದ ಅವರನ್ನು ದೂರ ಮಾಡಲು ಈ ಯೋಜನೆಯನ್ನು ರೂಪಿಸಲಾಗಿದೆ. ಇದರಲ್ಲಿ ಕೈದಿಗಳಿಗೆ ಮನರಂಜನೆಯ ಜೊತೆಗೆ, ಅವರ ಕೌಶಲ್ಯವೂ ಒರೆಗೆ ಹಚ್ಚಲಾಗುವುದು. ಜೈಲಿನಲ್ಲಿ ರೇಡಿಯೋ ಕೇಂದ್ರ ಆರಂಭಿಸಿ, ನೆಚ್ಚಿನ ಹಾಡುಗಳನ್ನು ಕೇಳಲು ಮತ್ತು ಗುನುಗಲು ಅವಕಾಶ ಮಾಡಿಕೊಡಲಾಗುತ್ತಿದೆ.

ಜೈಲು ಅಧೀಕ್ಷಕ ಡಾ.ಬಿ.ಡಿ.ಪಾಂಡೆ ಮಾತನಾಡಿ, ಬೆಳಗ್ಗೆ 6 ರಿಂದ ಆಕಾಶವಾಣಿ ಕೇಂದ್ರ ಆರಂಭವಾಗಲಿದೆ. ಸಂಜೆವರೆಗೂ ರೇಡಿಯೋದಲ್ಲಿ ಹಾಡುಗಳ ಪ್ರಸಾರ ನಡೆಯಲಿದೆ. ಇದರಿಂದ ಕೈದಿಗಳಲ್ಲಿ ಸೃಜನಶೀಲತೆ ಬೆಳೆಯುತ್ತದೆ. ಅವರ ಪ್ರತಿಭೆಯೂ ಅರಳುತ್ತದೆ. ಯಾವುದೇ ಕೈದಿ ಸ್ವತಃ ಹಾಡು ಹಾಡಲು ಬಯಸಿದರೆ ಅಥವಾ ವಾದ್ಯ ನುಡಿಸಲು ಬಯಸಿದರೆ ಅದಕ್ಕೂ ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಹರಿಯಾಣ ಜೈಲುಗಳಲ್ಲಿ ರೇಡಿಯೋ: ಇದಕ್ಕೂ ಮೊದಲು ಹರಿಯಾಣ ಸರ್ಕಾರ ಕೈದಿಗಳ ಮನೋರಂಜನೆ ಮತ್ತು ಅವರ ವ್ಯಕ್ತಿತ್ವ ಸುಧಾರಣೆಗೆ ಜೈಲುಗಳಲ್ಲಿ ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಿದೆ. ರಾಜ್ಯ ಪೊಲೀಸ್ ಇಲಾಖೆ ಮತ್ತು ಟಿಂಕಾ-ಟಿಂಕಾ ಎಂಬ ಎನ್‌ಜಿಓ ಹರಿಯಾಣ ಜೈಲುಗಳಲ್ಲಿ ರೇಡಿಯೊ ಕೇಂದ್ರಗಳನ್ನು ಪರಿಚಯಿಸಿತ್ತು. ಜೈಲುಗಳ ರೇಡಿಯೊ ಕೇಂದ್ರಗಳಲ್ಲಿ ಕೈದಿಗಳೇ ಜಾಕಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೈದಿಗಳೇ ರೇಡಿಯೊ ಜಾಕಿ ಮತ್ತು ರೇಡಿಯೊ ಚಾನೆಲ್‌ಗಳಿಗೆ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಪಾಣಿಪತ್, ಅಂಬಾಲಾ ಮತ್ತು ಫರಿದಾಬಾದ್‌ನ 21 ಕೈದಿಗಳಿಗೆ ರೇಡಿಯೋ ಕೇಂದ್ರ ನಿರ್ವಹಣೆ ಬಗ್ಗೆ ತರಬೇತಿ ನೀಡಲಾಗಿತ್ತು. ಇದರಲ್ಲಿ ಮಹಿಳಾ ಕೈದಿಗಳು ಕೂಡ ಇದ್ದರು.

ಇದನ್ನೂ ಓದಿ: ಹರಿಯಾಣದಲ್ಲಿ 'ಜೈಲು ರೇಡಿಯೊ ಕೇಂದ್ರ': ಕೈದಿಗಳೇ ರೇಡಿಯೊ ಜಾಕಿಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.