ETV Bharat / bharat

ಪಂಜಾಬ್ ವಿತ್ತ ಸಚಿವರಿಗೆ ಘೇರಾವ್ ಹಾಕಲು ಮುಂದಾಗಿದ್ದ ಗುತ್ತಿಗೆ ನೌಕರರನ್ನು ತೆರವುಗೊಳಿಸಿದ ಪೊಲೀಸರು - ಪಂಜಾಬ್​ನಲ್ಲಿ ಗುತ್ತಿಗೆ ನೌಕರರ ಪ್ರತಿಭಟನೆ

ಕೆಲ ದಿನಗಳಿಂದಲೂ ಪಂಜಾಬ್​​ನ ವಿವಿಧ ಭಾಗದಲ್ಲಿ ಗುತ್ತಿಗೆ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್ ಸರ್ಕಾರದ ವಿರುದ್ಧ ನೌಕರರು ಆಕ್ರೋಶ ಹೊರಹಾಕುತ್ತಿದ್ದಾರೆ.

Punjab Police remove contractual employees from the spot
ಗುತ್ತಿಗೆ ನೌಕರನ್ನು ತೆರವುಗೊಳಿಸಿದ ಪೊಲೀಸರು
author img

By

Published : Dec 4, 2021, 8:05 PM IST

ಬಟಿಂಡಾ (ಪಂಜಾಬ್​​): ರಾಜ್ಯ ಹಣಕಾಸು ಸಚಿವ ಮನ್​ಪ್ರೀತ್ ಸಿಂಗ್ ಅವರಿಗೆ ಘೇರಾವ್ ಹಾಕಲು ಮುಂದಾಗಿದ್ದ ಗುತ್ತಿಗೆ ನೌಕರರನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಕಳೆದ ಕೆಲ ದಿನಗಳಿಂದಲೂ ಪಂಜಾಬ್​​ನ ವಿವಿಧೆಡೆ ಗುತ್ತಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪಂಜಾಬ್ ವಿತ್ತ ಸಚಿವರಿಗೆ ಘೇರಾವ್ ಹಾಕಲು ನೆರೆದಿದ್ದ ಗುತ್ತಿಗೆ ನೌಕರರನ್ನು ತೆರವುಗೊಳಿಸಿದ ಪೊಲೀಸರು

ಇದೀಗ ರಾಜ್ಯ ಹಣಕಾಸು ಸಚಿವ ಮನ್​ಪ್ರೀತ್ ಸಿಂಗ್​ ಅವರು ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆಗೆ ಆಗಮಿಸಿದ್ದ ವೇಳೆ ನೌಕರರು ಘೇರಾವ್​ ಹಾಕಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾ ನಿರತ ನೌಕರರನ್ನು ತೆರವುಗೊಳಿಸಿದರು. ಜೊತೆಗೆ ಕೆಲವರನ್ನು ವಶಕ್ಕೆ ಪಡೆದರು. ಈ ವೇಳೆ ಪಂಜಾಬ್ ಸರ್ಕಾರದ ವಿರುದ್ಧ ನೌಕರರು ಘೋಷಣೆ ಕೂಗಿದ್ದು, ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕನಿಷ್ಠ ಬೆಂಬಲ ಬೆಲೆ ವಿಚಾರವಾಗಿ ಕೇಂದ್ರದೊಂದಿಗೆ ಮಾತುಕತೆ.. ಮಾಹಿತಿ ನೀಡಿದ ಸಂಯುಕ್ತ ಕಿಸಾನ್​​ ಮೋರ್ಚಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.