ETV Bharat / bharat

ಸಾವಿರಾರು ಜನರ ವಿರೋಧದ ನಡುವೆಯೂ ಸಿಧು ಮುಸೇವಾಲಾ ಮನೆಗೆ ಭೇಟಿ ಕೊಟ್ಟ ಪಂಜಾಬ್​ ಸಿಎಂ! - ಸಿಧು ಮೂಸ್ ವಾಲಾ ಹತ್ಯೆ ಪ್ರಕರಣ

ಇತ್ತೀಚೆಗೆ ಕೊಲೆಗೀಡಾದ ಗಾಯಕ ಸಿಧು ಮುಸೇವಾಲಾ ಅವರ ನಿವಾಸಕ್ಕೆ ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಭೇಟಿ ನೀಡಿದ್ದಾರೆ. ಮೃತ ಗಾಯಕನ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ..

Punjab CM Bhagwant Mann visit to Sidhu Moose Wala residence, Punjab CM visit to Mansa, Sidhu Moose Wala murder case, Singer Sidhu Moose Wala murder news, ಸಿಧು ಮೂಸ್ ವಾಲಾ ನಿವಾಸಕ್ಕೆ ಪಂಜಾಬ್ ಸಿಎಂ ಭಗವಂತ್ ಮಾನ್ ಭೇಟಿ, ಮಾನಸಾಗೆ ಪಂಜಾಬ್ ಸಿಎಂ ಭೇಟಿ, ಸಿಧು ಮೂಸ್ ವಾಲಾ ಹತ್ಯೆ ಪ್ರಕರಣ, ಗಾಯಕ ಸಿಧು ಮೂಸ್ ವಾಲಾ ಹತ್ಯೆ ಸುದ್ದಿ,
ಸಿಧು ಮುಸೇವಾಲ ಮನೆಗೆ ಸಿಎಂ ಭೇಟಿ
author img

By

Published : Jun 3, 2022, 11:00 AM IST

Updated : Jun 3, 2022, 12:03 PM IST

ಚಂಡೀಗಢ : ಮೊನ್ನೆ ಮೊನ್ನೆ ಗುಂಡಿನ ದಾಳಿಗೆ ಬಲಿಯಾಗಿದ್ದ ಪಂಜಾಬಿ ಗಾಯಕ ಸಿಧು ಮುಸೇವಾಲಾ ನಿವಾಸಕ್ಕೆ ಪಂಜಾಬ್‌ ಸಿಎಂ ಭಗವಂತ್‌ ಮಾನ್‌ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ದೇಶದ ವಿವಿಧ ಭಾಗಗಳಿಂದ ಜನರು ಮೃತ ಖ್ಯಾತ ಹಾಡುಗಾರನ ಕುಟುಂಬಕ್ಕೆ ಭೇಟಿ ನೀಡಿ ಸಂತಾಪ ಸೂಚಿಸುತ್ತಿದ್ದಾರೆ. ರಾಜಕೀಯ ಮುಖಂಡರು ಸಹ ಸಿಧು ಮನೆಗೆ ಭೇಟಿ ನೀಡಿ ಮುಸೇವಾಲಾ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಈಗ ಪಂಜಾಬ್​ ಸಿಎಂ ಸಹ ಸಿಧು ಮುಸೇವಾಲಾ ಮನೆಗೆ ಭೇಟಿ ನೀಡಿದ್ದಾರೆ.

  • #WATCH Punjab CM Bhagwant Mann meets the family of singer Sidhu Moose Wala at his residence in Mansa

    Sidhu Moose Wala was killed by unknown assailants in Mansa district on 29th May pic.twitter.com/ZwUnHPW9X6

    — ANI (@ANI) June 3, 2022 " class="align-text-top noRightClick twitterSection" data=" ">

ಗಾಯಕ ಸಿಧು ಮುಸೇವಾಲಾ ಅವರ ನಿವಾಸಕ್ಕೆ ಪಂಜಾಬ್ ಸಿಎಂ ಭಗವಂತ್ ಮಾನ್ ಭೇಟಿ ನೀಡಿರುವುದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಆದ್ರೆ, ಕುಟುಂಬದವರು ನಮಗೆ ಸಹಕಾರ ನೀಡುತ್ತಿದ್ದು, ಸಿಎಂ ಅವರನ್ನು ಭೇಟಿ ಮಾಡುತ್ತೇವೆ ಅಂತಾ ಮೃತ ಸಿಂಗರ್‌ನ ಕುಟುಂಬಸ್ಥರು ಹೇಳುತ್ತದ್ದರು ಅಂತಾ ಮಾನಸಾ ಜಿಲ್ಲಾಧಿಕಾರಿ ಜಸ್ಪ್ರೀತ್ ಸಿಂಗ್ ಈ ಮೊದಲೇ ಹೇಳಿದ್ದರು.

ಓದಿ: ಮೂಸೆವಾಲಾ ಹಂತಕರ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ: ಭೂಪ್ಪಿ ರಾಣಾ ಘೋಷಣೆ

ಮುಖ್ಯಮಂತ್ರಿ ಆಗಮನಕ್ಕೂ ಮುನ್ನ ಮುಸೇವಾಲಾ ಮನೆಗೆ ಸರ್ದುಲ್‌ಗಢದ ಸ್ಥಳೀಯ ಶಾಸಕ ಗುರುಪ್ರೀತ್ ಸಿಂಗ್​ ಭೇಟಿ ನೀಡುವುದಕ್ಕೆ ಆಗಮಿಸಿದ್ದರು. ಆದ್ರೆ, ಶಾಸಕರ ಭೇಟಿಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ವೇಳೆ ಪ್ರತಿಭಟನಾಕಾರರು ಪಂಜಾಬ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

  • Punjab | Locals protest against Punjab CM Bhagwant Mann's visit to the residence of singer Sidhu Moose Wala in Mansa

    The family is cooperating with us and they are saying that they will meet the CM, says District Commissioner Mansa, Jaspreet Singh. pic.twitter.com/oZL9TjYxah

ಶಾಸಕರು ಜನರ ಮುಂದೆ ಕೈಜೋಡಿಸಿ ಕ್ಷಮೆ ಯಾಚಿಸಿದರೂ ಸಹ ಮುಸೇವಾಲಾ ಅವರ ಮನೆಯೊಳಗೆ ಹೋಗಲು ಪ್ರವೇಶ ನೀಡಲಿಲ್ಲ. ಮುಖ್ಯಮಂತ್ರಿ ಬರುವ ಮುನ್ನವೇ ಇಡೀ ಗ್ರಾಮವೇ ಪೊಲೀಸ್ ಕಂಟೋನ್ಮೆಂಟ್ ಆಗಿ ಮಾರ್ಪಟ್ಟಿತ್ತು. ನಮ್ಮ ಮನದಾಳದಲ್ಲಿ ಅಸಮಾಧಾನವಿದೆ. ಯಾವುದೇ ರಾಜಕೀಯ ನಾಯಕರನ್ನಾಗಲಿ, ಸಿಎಂ ಆಗಲಿ ಇಲ್ಲಿಗೆ ಬರಲು ಬಿಡುವುದಿಲ್ಲ ಎಂದು ಸ್ಥಳೀಯರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಆದರೆ, ಇದರ ಮಧ್ಯೆಯೇ ಸಿಎಂ ಮೃತ ಸಿಧು ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

  • Punjab | Gurpreet Singh Banawali, AAP MLA from Sardulgarh constituency of Mansa District faces protest from locals on his visit to Punjabi singer Sidhu Moose Wala's residence in Mansa pic.twitter.com/reow18OiVb

ಭೀಕರ ಕೊಲೆ : ಖ್ಯಾತ ಗಾಯಕ ಹಾಗೂ ನಟ ಶುಭ್‌ಜಿತ್ ಸಿಂಗ್ ಅಲಿಯಾಸ್ ಸಿಧು ಮುಸೇವಾಲಾ ಅವರನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಜವಾಹರಕೆ ಗ್ರಾಮದ ಬಳಿ ಸಿದ್ದು ಮುಸೇವಾಲ ಮೇಲೆ ಗುಂಡಿನ ದಾಳಿ ನಡೆದಿತ್ತು. ಗುಂಡು ತಗುಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಮಾನಸಾ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸಿದ್ದು ಮುಸೇವಾಲಾ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಘಟನೆ ವೇಳೆ ದಾಳಿಕೋರರು ಸುಮಾರು 30 ರಿಂದ 35 ಸುತ್ತು ಗುಂಡು ಹಾರಿಸಿದ್ದರು. ಅದರಲ್ಲಿ ಸುಮಾರು 7 ಗುಂಡುಗಳು ಸಿಧು ಮೇಲೆ ಹಾರಿದ್ದವು.

Last Updated : Jun 3, 2022, 12:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.