ETV Bharat / bharat

IPL ಪಂದ್ಯದ ವೇಳೆ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಅಂತಾರಾಷ್ಟ್ರೀಯ ಬುಕ್ಕಿಗಳ ಬಂಧನ.. ಲಕ್ಷ ಲಕ್ಷ ರೂ ನಗದು ವಶಕ್ಕೆ! - Ganesh Bhutada

ಅಂತಾರಾಷ್ಟ್ರೀಯ ಬುಕ್ಕಿಗಳಾದ ಗಣೇಶ್ ಭೂತಾಡ ಮತ್ತು ಅಶೋಕ್ ಜೈನ್ ಸೇರಿದಂತೆ ಕೆಲವರನ್ನು ಪೊಲೀಸರು ಬಂಧಿಸಿದ್ದು, ಬುಕ್ಕಿಗಳಿಂದ 93 ಲಕ್ಷ ನಗದು, ಡೈರಿ, ಮೊಬೈಲ್‌ ಮತ್ತು ಇತರ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಸಮರ್ಥ ಮತ್ತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

pune
IPL ಪಂದ್ಯದ ವೇಳೆ ಬೆಟ್ಟಿಂಗ್​
author img

By

Published : Sep 27, 2021, 11:54 AM IST

ಪುಣೆ(ಮಹಾರಾಷ್ಟ್ರ): ಐಪಿಎಲ್ ವೇಳೆ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಇಬ್ಬರು ಅಂತಾರಾಷ್ಟ್ರೀಯ ಬುಕ್ಕಿಗಳು ಸೇರಿ ಕೆಲವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಭಾನುವಾರ ರಾತ್ರಿ ಏಕಕಾಲದಲ್ಲಿ ಎರಡು ಸ್ಥಳಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಅಂತಾರಾಷ್ಟ್ರೀಯ ಬುಕ್ಕಿಗಳಾದ ಗಣೇಶ್ ಭೂತಾಡ ಮತ್ತು ಅಶೋಕ್ ಜೈನ್ ಸೇರಿದಂತೆ ಕೆಲವರನ್ನು ಪೊಲೀಸರು ಬಂಧಿಸಿದ್ದು, ಬುಕ್ಕಿಗಳಿಂದ 93 ಲಕ್ಷ ನಗದು, ಡೈರಿ, ಮೊಬೈಲ್‌ ಮತ್ತು ಇತರ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಸಮರ್ಥ ಮತ್ತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಐಪಿಎಲ್‌ನಲ್ಲಿ ಭಾನುವಾರದಂದು ಆರ್​ಸಿಬಿ vs ಮುಂಬೈ ಇಂಡಿಯನ್ಸ್​ ಮತ್ತು ಚೆನ್ನೈ vs ಕೋಲ್ಕತ್ತಾ ನಡುವೆ ಪಂದ್ಯ ನಡೆದಿತ್ತು. ಈ ಸಂದರ್ಭದಲ್ಲಿ ಬುಕ್ಕಿಗಳು ಬೆಟ್ಟಿಂಗ್​ನಲ್ಲಿ ತೊಡಗಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಇಷ್ಟೊಂದು ನಗದು ವಶಕ್ಕೆ ಪಡೆಯಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.