ETV Bharat / bharat

ಪುಣೆಯಲ್ಲಿ ಟ್ಯಾಂಕರ್ ಅಪಘಾತ: ಮೂವರ ಸಾವು, 11 ಮಂದಿಗೆ ಗಾಯ

author img

By

Published : Oct 23, 2021, 3:36 AM IST

ಏಳು ಆಸನಗಳುಳ್ಳ ವಾಹನವೊಂದಕ್ಕೆ ಅಪ್ಪಳಿಸಿ, ಮೂವರು ಸಾವನ್ನಪ್ಪಿ, 11 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

pune-tanker-accident-on-katraj-mumbai-road-3-dead-11-injured
ಪುಣೆಯಲ್ಲಿ ಟ್ಯಾಂಕರ್ ಅಪಘಾತ: ಮೂವರ ಸಾವು, ಏಳು ಮಂದಿಗೆ ಗಾಯ

ಪುಣೆ, ಮಹಾರಾಷ್ಟ್ರ: ಟ್ಯಾಂಕರ್ ವಾಹನವೊಂದಕ್ಕೆ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿ, 11 ಮಂದಿ ಗಾಯಗೊಂಡಿರುವ ಘಟನೆ ಪುಣೆಯ ಕತ್ರಾಜ್-ಮುಂಬೈ ರಸ್ತೆಯಲ್ಲಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೇಂಟ್ ಉದ್ಯಮದಲ್ಲಿ ಬಳಸುವ ರಾಸಾಯನಿಕವೊಂದನ್ನು ಸಾಗಿಸುತ್ತಿದ್ದ ಟ್ಯಾಂಕರ್​ ಮುಂಬೈ ಕಡೆಯಿಂದ ಸಾಗುತ್ತಿದ್ದು, ವಾಹವೊಂದನ್ನು ಓವರ್ ಟೇಕ್ ಮಾಡುವಾಗ 7 ಆಸನದ ವಾಹವೊಂದಕ್ಕೆ ಡಿಕ್ಕಿ ಹೊಡೆದಿದೆ. ಇದಾದ ನಂತರ ಖಾಲಿಯಿದ್ದ ಕಂಟೇನರ್​ಗೂ ಅಪ್ಪಳಿಸಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಒಟ್ಟು ಮೂವರು ಸಾವನ್ನಪ್ಪಿದ್ದು, ಏಳು ಆಸನಗಳಿದ್ದ ವಾಹನದಲ್ಲಿದ್ದ ಇಬ್ಬರು ಹಾಗೂ ಪಾದಚಾರಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ಊಹಿಸಲಾಗಿದೆ ಎಂದು ಸಿಂಘಡ್ ರಸ್ತೆ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್ ದೇವಿದಾಸ್ ಘೇವರೆ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಟ್ಯಾಂಕರ್ ಅಪ್ಪಳಿಸಿದ ರಭಸಕ್ಕೆ ವಾಹನ ಪಲ್ಟಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಉತ್ತರಾಖಂಡ ಟ್ರೆಕ್ಕಿಂಗ್ ದುರಂತ: ಏಳಕ್ಕೇರಿದ ಸಾವಿನ ಸಂಖ್ಯೆ, ಇಬ್ಬರಿಗಾಗಿ ಶೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.