ಪುಣೆ: ದೇಶ 75ನೇ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುತ್ತಿದೆ. ದೇಶದ ರಕ್ಷಕರಾಗಿ ಕೆಲಸ ಮಾಡಿದ 7,500 ಮಾಜಿ ಸೈನಿಕರಿಗೆ ಪುಣೆಯ ಜ್ಯುವೆಲರ್ಸ್ ಮಾಲೀಕರೊಬ್ಬರು 'ಕಮಿಟ್ಮೆಂಟ್ ರಿಂಗ್' ನೀಡುವ ಗುರಿ ಹೊಂದಿದ್ದಾರೆ. ಇವುಗಳನ್ನು ಚಿನ್ನ, ಬೆಳ್ಳಿ, ವಜ್ರ ಮತ್ತು ಜೇಡಿ ಮಣ್ಣಿನಿಂದ ನಿರ್ಮಿಸಲಾಗಿದೆ. ಇದನ್ನು ಒನ್ ಇಂಡಿಯಾ ಮಿಷನ್ ಅಡಿಯಲ್ಲಿ ನೀಡಲು ನಿರ್ಧರಿಸಲಾಗಿದೆ.
ಮಹಾರಾಷ್ಟ್ರದ ಪುಣೆಯಲ್ಲಿನ ಬೋನಿಸಾ ಜ್ಯುವೆಲರ್ಸ್ ಈ ಮಹತ್ತದ ನಿರ್ಧಾರ ಕೈಗೊಂಡಿದೆ. ಈಗಾಗಲೇ 88 ಮಾಜಿ ಸೈನಿಕರಿಗೆ ಏಕ್ ಇಂಡಿಯಾ ರಿಂಗ್ಸ್ ನೀಡಲಾಗಿದೆ. ಈ ಕಾರ್ಯಕ್ಕೆ ಸಂಕೆ ಬಿ.ಬಿಯಾನಿ ಮತ್ತು ಅವರ ಸಹೋದರ ಸಂದೇಶ್ ಬಿಯಾನಿ ಕೈಜೋಡಿಸಿದ್ದಾರೆ.
ಉಂಗುರದ (ರಿಂಗ್) ವಿಶೇಷತೆ: ಒನ್ಇಂಡಿಯಾ ಹೆಸರಿನಲ್ಲಿ ನೀಡಲಾಗುವ ಈ ಉಂಗುರಗಳು ಸಾಕಷ್ಟು ವಿಶೇಷತೆಗಳನ್ನು ಒಳಗೊಂಡಿವೆ. ಬೆಳ್ಳಿಯು ಶಾಂತತೆಯನ್ನು ಪ್ರತಿಪಾದಿಸಿದರೆ, ಚಿನ್ನದ ರಿಂಗ್ 'ಭಾರತ'ವನ್ನು ಸಂಕೇತಿಸುತ್ತದೆ, ವಜ್ರದಿಂದ ಮಾಡಿದ ರಿಂಗ್ ನಾವೆಲ್ಲರೂ ವಜ್ರದಷ್ಟೇ ದೃಢರು ಎಂದು ಸಾರಿದರೆ, ಮಣ್ಣಿನಿಂದ ಮಾಡಲಾದ ರಿಂಗ್ ಏಕತೆಯನ್ನು ಸಾರುತ್ತದೆ. ದೇಶದ ಪ್ರತಿಯೊಂದು ರಾಜ್ಯದಿಂದ ಮಣ್ಣು ಸಂಗ್ರಹಿಸಿ ಈ ರಿಂಗ್ ತಯಾರಿಸಲಾಗುತ್ತಿದೆ.
"ಸ್ವಾತಂತ್ರ್ಯದ 75ನೇ ಸಂಭ್ರಮಾಚರಣೆಯಲ್ಲಿರುವ ನಾವು 7,500 ಕ್ಕೂ ಹೆಚ್ಚು ಸೈನಿಕರಿಗೆ ಈ ಉಂಗುರವನ್ನು ನೀಡುವ ಗುರಿಯನ್ನು ಹೊಂದಿದ್ದೇವೆ. ಉಂಗುರವು ಬೆಳ್ಳಿಯಿಂದ ಮಾಡಲ್ಪಟ್ಟಿದ್ದು, ಚಿನ್ನದ ಅಕ್ಷರಗಳಲ್ಲಿ 'ಭಾರತ್' ಎಂದು ಬರೆಯಲಾಗಿದೆ. ಇನ್ನೂ ವಿಶೇಷ ಅಂದರೆ, ದೇಶದ 29 ರಾಜ್ಯಗಳಿಂದ ಮಣ್ಣನ್ನು ಸಂಗ್ರಹಿಸಿ ರಿಂಗ್ ಮಾಡಲಾಗಿದೆ" ಎಂದು ಸಂಕೇತ್ ಬಿ.ಬಿಯಾನಿ ಹೇಳಿದರು.
ಇದನ್ನೂ ಓದಿ: ಬೆಂಗಳೂರು: ಹುಟ್ಟುಹಬ್ಬದಂದೇ ಕಲ್ಲಿನಿಂದ ಜಜ್ಜಿ, ರುಂಡ ಬೇರ್ಪಡಿಸಿ ಯುವಕನ ಹತ್ಯೆ