ETV Bharat / bharat

ಸೋನು ಸೂದ್​​ ಸಹಾಯದ ನಂತ್ರ ಮತ್ತೆ ರಸ್ತೆಗಿಳಿದ ವಾರಿಯರ್​ ಅಜ್ಜಿ.. ಕಾರಣ!?

ದೊಣ್ಣೆ ವರಸೆ ಮಾಡುತ್ತ ಹಣ ಸಂಪಾದನೆ ಮಾಡುತ್ತಿದ್ದ ಅಜ್ಜಿಗೆ ನಟ ಸೋನು ಸೂದ್​ ಸೇರಿ ಅನೇಕರು ಸಹಾಯ ಮಾಡಿದ್ದರು. ಆದರೆ, ಇದೀಗ ಮತ್ತೆ ಅಜ್ಜಿ ರಸ್ತೆಗಿಳಿದಿದ್ದಾರೆ.

author img

By

Published : May 6, 2021, 9:58 PM IST

Punes famous Warrior Ajji
Punes famous Warrior Ajji

ಪುಣೆ: ಮಹಾರಾಷ್ಟ್ರದ ಪುಣೆ ಮೂಲದ ಶಾಂತಾಬಾಯಿ ಪವಾರ್ ಎಂಬ 85 ವರ್ಷದ ಅಜ್ಜಿ ರಸ್ತೆಗಿಳಿದು, ಸಮರ ಕಲೆ ಪ್ರದರ್ಶನ ಮಾಡ್ತಿದ್ದ ವಿಡಿಯೋ ವೈರಲ್​ ಆಗಿತ್ತು. ಆ ವೇಳೆ ವಾರಿಯರ್​ ಅಜ್ಜಿ ನೆರವಿಗೆ ಧಾವಿಸಿದ್ದ ನಟ ಸೋನು ಸೂದ್​ ಸಹಾಯ ಮಾಡಿದ್ದರು.

ಇದೀಗ ಮತ್ತೊಮ್ಮೆ ರಸ್ತೆಗಿಳಿದು ವಾರಿಯರ್​ ಅಜ್ಜಿ ಸಮರ ಕಲೆ ಪ್ರದರ್ಶನ ಮಾಡ್ತಿದ್ದಾರೆ. ಹೌದು, ಶಾಂತಾಬಾಯಿ ಪವಾರ್​​ ಅವರ ವಿಡಿಯೋ ವೈರಲ್​ ಆಗುತ್ತಿದ್ದಂತೆ ಅನೇಕರು ಆರ್ಥಿಕ ಸಹಾಯ ಮಾಡಿದ್ದರು. ಆದರೆ, ಇದೀಗ ಮತ್ತೆ ಹಣದ ಕೊರತೆ ಉಂಟಾಗಿರುವ ಕಾರಣ ಬೀದಿಗಿಳಿದು ಸಮರ ಕಲೆ ಪ್ರದರ್ಶನ ಮಾಡ್ತಿದ್ದಾರೆ.

ಪುಣೆಯ ವಿವಿಧ ರಸ್ತೆಗಳಲ್ಲಿ ದೊಣ್ಣೆ ವರಸೆ ಪ್ರದರ್ಶನ ಮಾಡುತ್ತಿರುವ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್​ ಆಗಿವೆ. ಈ ಹಿಂದೆ ಆಕೆಗೆ ಸಿಕ್ಕಿರುವ ಹಣದಿಂದ ಸಂಬಂಧಿಕರ ಸಾಲ ಮರುಪಾವತಿ ಮಾಡಿದ್ದು, ಕೆಲ ಸಂಬಂಧಿಕರು ಹಣ ಪಡೆದು ಖರ್ಚು ಮಾಡಿದ್ದಾರೆ ಎಂದು ತಿಳಿಸಿದ್ದಾಳೆ. ಬ್ಯಾಂಕ್​ ಬ್ಯಾಲೆನ್ಸ್​ ಖಾಲಿಯಾಗಿರುವ ಕಾರಣ ಅಜ್ಜಿ ಮತ್ತೆ ಬೀದಿಗಳಲ್ಲಿ ಪ್ರದರ್ಶನ ಮಾಡ್ತಿದ್ದಾರೆ.

ಸುಮಾರು 12ರಿಂದ 13 ಮೊಮ್ಮಕ್ಕಳ ಜವಾಬ್ದಾರಿ ತನ್ನ ಮೇಲಿರುವ ಕಾರಣ ಇದೀಗ ಈ ಕೆಲಸ ಪುನರ ಆರಂಭಿಸಿದ್ದೇನೆ ಎಂದಿರುವ ಅಜ್ಜಿ, ಸಾಧ್ಯವಾದಷ್ಟು ಸಹಾಯ ನೀಡುವಂತೆ ವಿನಂತಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.