ಭುವನೇಶ್ವರ (ಒಡಿಶಾ): ಒಡಿಶಾದ ರಾಜಧಾನಿ ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಪಕ್ಷಿಯೊಂದು ಡಿಕ್ಕಿ ಹೊಡೆದ ಪರಿಣಾಮ ಏರ್ ಏಷ್ಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಇಲ್ಲಿನ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಹಾರಾಷ್ಟ್ರದ ಪುಣೆಗೆ ಈ ವಿಮಾನ ಹೊರಟಿತ್ತು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಮಾಹಿತಿ ಮೂಲಗಳು ತಿಳಿಸಿವೆ.
ಪುಣೆಗೆ ಹೊರಟಿದ್ದ ಏರ್ ಏಷ್ಯಾ ವಿಮಾನವು ಭುವನೇಶ್ವರದಿಂದ ಟೇಕ್ ಆಫ್ ಆದ ಕೆಲವೇ ದಿನಗಳಲ್ಲಿ ಪಕ್ಷಿ ಡಿಕ್ಕಿ ಹೊಡೆದಿದೆ. ಪರಿಣಾಮ ಕೂಡಲೇ ತಾಂತ್ರಿಕ ದೋಷವನ್ನು ಉಲ್ಲೇಖಿಸಿ ವಿಮಾನ ತುರ್ತು ಭೂಸ್ಪರ್ಶ ಮಾಡಿತು. ಈ ಘಟನೆ ವಿಮಾನವನ್ನು ಪರಿಶೀಲನೆ ನಡೆಸಲಾಯಿತು ಎಂದು ವರದಿಯಾಗಿದೆ. ಈ ಬಗ್ಗೆ ಏರ್ ಏಷ್ಯಾ ಹೇಳಿಕೆ ಬಿಡುಗಡೆ ಮಾಡಿ, ಈ ಘಟನೆಯನ್ನು ಖಚಿತ ಪಡಿಸಿದೆ. ಜೊತೆಗೆ ನಾವು ಪ್ರಯಾಣಿಕರನ್ನು ಭೇಟಿ ಮಾಡುತ್ತಿದ್ದೇವೆ. ಪ್ರಯಾಣಿಕರ ನಿಗದಿತ ಕಾರ್ಯಗಳ ಮೇಲಿನ ಪರಿಣಾಮ ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಏರ್ ಏಷ್ಯಾ ತಿಳಿಸಿದೆ.
ಇದನ್ನೂ ಓದಿ: ₹6,800 ಕೋಟಿ ವೆಚ್ಚದಲ್ಲಿ ಹೆಚ್‌ಎಎಲ್‌ನಿಂದ 70 ತರಬೇತಿ ವಿಮಾನ ಖರೀದಿಗೆ ಕೇಂದ್ರ ನಿರ್ಧಾರ
ಬುಧವಾರ ಕೂಡ ಇದೇ ರೀತಿಯ ಮತ್ತೊಂದು ಘಟನೆ ನಡೆದಿತ್ತು. ಮಸ್ಕತ್‌ಗೆ ತೆರಳುತ್ತಿದ್ದ ಸಲಾಮ್ ಏರ್ ವಿಮಾನವು ತಡರಾತ್ರಿ ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇಂಜಿನ್‌ನಿಂದ ಹೊಗೆ ಹೊರಸೂಸುತ್ತಿರುವುದನ್ನು ಪೈಲಟ್ ಪತ್ತೆ ಹಚ್ಚಿದ್ದರು. ನಂತರ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ನೀಡಿ, ನಾಗಪುರದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದರು. ಈ ವಿಮಾನದಲ್ಲಿ ಪೈಲಟ್‌ಗಳು ಸೇರಿದಂತೆ 200 ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಯಾಣಿಸುತ್ತಿದ್ದರು.
ಇನ್ನು, ಈ ಹಿಂದೆ ಕೂಡ ಏರ್ ಏಷ್ಯಾ ವಿಮಾನಕ್ಕೆ ಪಕ್ಷಿಯೊಂದು ಡಿಕ್ಕಿ ಹೊಡೆದ ಪರಿಣಾಮ ಉತ್ತರ ಪ್ರದೇಶದ ರಾಜಧಾನಿ ಲಖನೌ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಲಖನೌ ಏರ್ಪೋರ್ಟ್ನಿಂದ ಪಶ್ಚಿಮ ಬಂಗಾಳದ ಕೋಲ್ಕತ್ತಾಕ್ಕೆ ಪ್ರಯಾಣ ಹಾರಾಟ ನಡೆಸುತ್ತಿದ್ದಾಗ ಈ ಘಟನೆ ನಡೆದಿತ್ತು.
ಇದನ್ನೂ ಓದಿ: ಪಕ್ಷಿ ಡಿಕ್ಕಿ: ಏರ್ ಏಷ್ಯಾ ವಿಮಾನ ತುರ್ತು ಭೂಸ್ಪರ್ಶ
ವಿಮಾನಕ್ಕೆ ಪಕ್ಷಿಗಳ ಡಿಕ್ಕಿ ಹೇಗೆ?: ವಿಮಾನಗಳು ಸಾಮಾನ್ಯವಾಗಿ ಆಕಾಶದಲ್ಲಿ ತುಂಬಾ ಎತ್ತರದಲ್ಲಿ ಹಾರಾಟ ಮಾಡುತ್ತವೆ. ಆದರೆ, ವಿಮಾನ ನಿಲ್ದಾಣದಲ್ಲಿ ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗುವಾಗ ಸಮಯದಲ್ಲಿ ಭೂಮಿಗೆ ಹತ್ತಿರದಲ್ಲಿ ಹಾರಾಟ ಮಾಡಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ವಿಮಾನಗಳಿಗೆ ಪಕ್ಷಿಗಳು ಡಿಕ್ಕಿ ಹೊಡೆಯುವಂತಹ ಹೆಚ್ಚಿನ ಘಟನೆ ನಡೆಯುತ್ತವೆ.
ಪಕ್ಷಿಗಳು ವಿಮಾನಕ್ಕೆ ಅಪ್ಪಳಿಸಿದ ಹೆಚ್ಚಿನ ಘಟನೆಗಳಲ್ಲಿ ಯಾವುದೇ ಅಪಾಯ ಉಂಟಾಗುವುದಿಲ್ಲ. ಆದರೆ, ಕೆಲವೊಮ್ಮೆ ಪರಿಸ್ಥಿತಿ ಹದಗೆಟ್ಟು ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಗುತ್ತದೆ ಎನ್ನುತ್ತಾರೆ ವಿಮಾನ ನಿಲ್ದಾಣದ ಅಧಿಕಾರಿಗಳು.
ಇದನ್ನೂ ಓದಿ: ಏರ್ ಏಷ್ಯಾ ಸಂಸ್ಥೆಗೆ 20 ಲಕ್ಷ ದಂಡ... ವಿಮಾನ ಹಾರಾಟ ತರಬೇತಿ ಮುಖ್ಯಸ್ಥರ ವಜಾಕ್ಕೆ ಡಿಜಿಸಿಎ ಆದೇಶ