ETV Bharat / bharat

ಮೀಸಲಾತಿ ಒತ್ತಾಯಿಸಿ ಪ್ರತಿಭಟನೆ: ಪರಿಸ್ಥಿತಿ ಹತೋಟಿಗೆ ಇಂಟರ್ನೆಟ್​ ಸ್ಥಗಿತಗೊಳಿಸಿದ ಜಿಲ್ಲಾಡಳಿತ - ಮೀಸಲಾತಿ ಬೇಡಿಕೆ

ಭರತ್‌ಪುರದಲ್ಲಿ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಶನಿವಾರವೂ ಮುಂದುವರಿದಿದ್ದು, ವಾತಾವರಣ ಹದಗೆಡದಂತೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.

Protest demanding reservation
ಮೀಸಲಾತಿ ಒತ್ತಾಯಿಸಿ ಪ್ರತಿಭಟನೆ
author img

By

Published : Apr 22, 2023, 3:38 PM IST

ಭರತ್​ಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಭುಗಿಲೆದ್ದ ಮೀಸಲಾತಿ ಪ್ರತಿಭಟನೆಯ ಗಂಭೀರ ಪರಿಸ್ಥಿತಿಯನ್ನು ಊಹಿಸಿರುವ ಭರತ್​ಪುರ ಜಿಲ್ಲಾಡಳಿತ ಜಿಲ್ಲೆಯ ನಾಡಬೈ, ವೈರ್​ ಹಾಗೂ ಭೂಸಾವರ್​ನಲ್ಲಿ ಇಂಟರ್ನೆಟ್​ ಸೇವೆಯನ್ನು ಇಂದು ಮಧ್ಯರಾತ್ರಿ 12 ರವರೆಗೆ ಸ್ಥಗಿತಗೊಳಿಸಿದೆ. ನಿನ್ನೆಯಿಂದ ಮಾಲಿ, ಕುಶ್ವಾಹ, ಶಾಕ್ಯ ಮತ್ತು ಮೌರ್ಯ ಸಮುದಾಯದವರು ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇ 12 ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿ ಆಗ್ರಾ-ಬಿಕಾನೇರ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಮಿತಿಯ ಸಂಯೋಜಕನ ಕಸ್ಟಡಿಗೆ ಪಡೆದ ಪೊಲೀಸರು: ಮೀಸಲಾತಿ ಸೇರಿದಂತೆ ಇತರ ಬೇಡಿಕೆಗಳ ಕುರಿತು ಆರಕ್ಷಣ ಆಂದೋಲನ ಸಂಘರ್ಷ ಸಮಿತಿಯು ಹೆದ್ದಾರಿಗೆ ಇಳಿದು ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಮುನ್ನೆಚ್ಚರಿಕೆಯಾಗಿ ಪೊಲೀಸರು ಮೊದಲೇ ಸಮಿತಿಯ ಸಂಚಾಲಕ ಮುರಾರಿಲಾಲ್ ಸೈನಿ ಸೇರಿದಂತೆ 26 ಮಂದಿಯಲ್ಲಿ ವಶಕ್ಕೆ ತೆಗೆದುಕೊಂಡಿದ್ದರು. ಇದು ಜನರನ್ನು ಇನ್ನಷ್ಟು ಕೆರಳಿಸಿತ್ತು. ಸುಮಾರು 25 ನಿಮಿಷಗಳ ಕಾಲ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದಿದೆ. ಇದರ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ.

ಇದೀಗ ತಮ್ಮ ಮೀಸಲಾತಿ ಬೇಡಿಕೆ ಸೇರಿದಂತೆ ವಶಕ್ಕೆ ಪಡೆದಿರುವ ಸಂಚಾಲಕ ಮುರಾರಿಲಾಲ್​ ಸೈನಿ ಅವರನ್ನು ಬಿಡುಗಡೆ ಮಾಡಬೇಕು ಎಂದೂ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದಲೇ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಮಾಜದ ಪ್ರತಿನಿಧಿಗಳನ್ನು ಮಾತನಾಡಿಸಿ, ಅವರ ಮನವೊಲಿಸಲು ಆಡಳಿತಾಧಿಕಾರಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಇದೇ ವೇಳೆ, ಜಿಲ್ಲೆಯ ಪರಿಸರ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಶನಿವಾರ ಮಧ್ಯರಾತ್ರಿ 12 ಗಂಟೆಯವರೆಗೆ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಅಲೋಕ್ ರಂಜನ್ ಆದೇಶ ಹೊರಡಿಸಿದ್ದಾರೆ.

ನಿನ್ನೆ ಬೆಳಗ್ಗೆಯಿಂದಲೇ ಪ್ರತಿಭಟನೆ ಪ್ರಾರಂಭಗೊಂಡಿದ್ದು, ಸಮುದಾಯದ ಪ್ರತಿಭಟನಾಕಾರರು ರಾತ್ರಿ ಹೊತ್ತಿಗೆ ಹೆದ್ದಾರಿಯನ್ನು ಆಕ್ರಮಿಸಿಕೊಂಡ ಪರಿಣಾಮ ಮುಷ್ಕರದ ಕಾವು ಹೆಚ್ಚಾಗಿತ್ತು. ಮಧ್ಯಾಹ್ನ ಹೊತ್ತಿಗೆ ಪ್ರತಿಭಟನಾಕಾರರು ರಸ್ತೆ ತಡೆಯಲು ಪ್ರಯತ್ನಿಸಿದ್ದು, ಪೊಲೀಸರು ಅಶ್ರುವಾಯು ಶೆಲ್​ಗಳನ್ನು ಸಿಡಿಸಿ, ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಪೋಲಿಸರು ಹಾಗೂ ಪ್ರತಿಭಟನಾಕಾರರು ಮುಖಾಮುಖಿಯಾಗಿದ್ದ ವೇಳೆ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಾಗ ಅಶ್ರುವಾಯು ಶೆಲ್​ಗಳನ್ನು ಸಿಡಿಸಿದ್ದಾರೆ.

ಅರೋಂಡಾದಲ್ಲಿ ಚಳವಳಿ: ಅರೋಂಡಾ ಮಾಲಿ, ಕುಶ್ವಾಹ, ಶಾಕ್ಯ ಮತ್ತು ಮೌರ್ಯ ಸಮಾಜದ ಭದ್ರಕೋಟೆ. ಇಲ್ಲಿ ನಾಡಬಾಯಿ, ವೈರ್ ಮತ್ತು ದೌಸಾದ ಮಾಹ್ವಾ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಭರತ್​ಪುರದ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಜಾತಿಗಳ ಪ್ರಾಬಲ್ಯ ಹೆಚ್ಚಿದೆ. ಈ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಜಾತಿಗಳ ದೊಡ್ಡ ವೋಟ್​ ಬ್ಯಾಂಕ್​ ಇದೆ. ಅರೋಂಡಾದಲ್ಲಿ ಈ ಮೂರು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಕಾರಣಕ್ಕಾಗಿಯೇ ಅವರು ಈ ಸ್ಥಳವನ್ನು ಪ್ರತಿಭಟನೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ನಾಲ್ಕೂ ಸಮುದಾಯದ ಜನರು ಅರೋಂಡಾ ಗ್ರಾಮದ ಬಳಿ ಹೆದ್ದಾರಿಯಲ್ಲಿ ಪ್ರತಿಭಟನೆಗೆ ಕುಳಿತು, 12 ಪ್ರತಿಶತ ಮೀಸಲಾತಿಗೆ ಒತ್ತಾಯಿಸಿದ್ದಾರೆ. ಈ ಹಿಂದೆ, ಜೂನ್ 12, 2022 ರಂದು, ಈ ಸಮುದಾಯದವರು ಒಂಬತ್ತು ದಿನಗಳ ಕಾಲ ಮೀಸಲಾತಿಗಾಗಿ ಪ್ರತಿಭಟನೆ ನಡೆಸಿದ್ದರು. ಸಚಿವ ವಿಶ್ವೇಂದ್ರ ಸಿಂಗ್ ಭರವಸೆ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದಿದ್ದರು.

ರಾತ್ರಿಯೇ ಹೆದ್ದಾರಿ ಆಕ್ರಮಿಸಿಕೊಂಡ ಗ್ರಾಮಸ್ಥರು: ಆಗ್ರಾ-ಬಿಕಾನೇರ್ ಹೆದ್ದಾರಿ ಜಾಮ್ ಬಗ್ಗೆ ಪೊಲೀಸರು ಬೆಳಗ್ಗೆಯಿಂದ ಸಂಜೆಯವರೆಗೂ ಜಾಗರೂಕರಾಗಿದ್ದರು. ಆದರೆ ರಾತ್ರಿ ಪೊಲೀಸರು ಇಲ್ಲದ ವೇಳೆಯ ಲಾಭವನ್ನು ಪಡೆದುಕೊಂಡು ಪ್ರತಿಭಟನಾಕಾರರು ಹೆದ್ದಾರಿಯನ್ನು ವಶಪಡಿಸಿಕೊಂಡಿದ್ದಾರೆ. ಹೆದ್ದಾರಿ ಜಾಮ್ ಕೂಡಲೇ ರಾತ್ರಿ ಏಳು ಗಂಟೆಯಿಂದಲೇ ಗ್ರಾಮಗಳಿಂದ ಪ್ರತಿಭಟನಾಕಾರರು ಬಂದು ರಸ್ತೆಯಲ್ಲಿ ಕುಳಿತಿದ್ದಾರೆ. ರಾತ್ರಿ ವೇಳೆ ಜನಸಂದಣಿ ಹೆಚ್ಚಿಸುವ ಉದ್ದೇಶದಿಂದ ಪ್ರತಿಭಟನಾಕಾರರು ಸಮುದಾಯದ ಪ್ರಾಬಲ್ಯವಿರುವ ಹತ್ತಿರದ ಹಳ್ಳಿಗಳಿಗೆ ಫೋನ್ ಮಾಡಿ, ಜನರನ್ನು ಕರೆಸಿಕೊಂಡಿದ್ದಾರೆ. ಅಲ್ಲಿಂದ ಜನ ಟ್ರ್ಯಾಕ್ಟರ್-ಟ್ರಾಲಿಗಳಲ್ಲಿ ಬರಲಾರಂಭಿಸಿದ್ದಾರೆ. ಆಂದೋಲನ ಸ್ಥಳದಲ್ಲಿ ಮಹಿಳೆಯರೂ ಕೈಯಲ್ಲಿ ಕೋಲು ಹಿಡಿದು ಕುಳಿತಿದ್ದಾರೆ.

ಮೂರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ: ಕುಶ್ವಾಹ, ಮೌರ್ಯ, ಮಾಲಿ ಸಮಾಜ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಇವುಗಳಲ್ಲಿ ಲವಕುಶ ಕಲ್ಯಾಣ ಮಂಡಳಿ ರಚನೆ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಲವಕುಶ ಹಾಸ್ಟೆಲ್‌ಗಳನ್ನು ನಿರ್ಮಿಸಲು ಹಾಗೂ ಸಮಾಜಕ್ಕೆ ಪ್ರತ್ಯೇಕವಾಗಿ ಶೇ.12ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಲಾಗುತ್ತಿದೆ. ಬೇಡಿಕೆಗಳ ಬಗ್ಗೆ ಸಮಾಜ ಅಚಲವಾಗಿದೆ. ಏಪ್ರಿಲ್ 21 ರಂದು ಹೆದ್ದಾರಿ ಜಾಮ್ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಿತ್ತು. ಈ ಹಿಂದೆಯೂ ಹೆದ್ದಾರಿ ತಡೆ ನಡೆಸಲಾಗಿತ್ತು, ಆಗ ಸಿಎಂ, ಸಚಿವರು, ಅಧಿಕಾರಿಗಳು ಭರವಸೆ ನೀಡಿದರೂ ಬೇಡಿಕೆ ಈಡೇರಿಸಿಲ್ಲ ಎಂದು ಸಮಾಜದ ಪ್ರತಿನಿಧಿಗಳು ಹೇಳಿದ್ದರು.

ಮುರಾರಿಲಾಲ್‌ಗೆ ನಿಯೋಗ ಪರಿಚಯ: ಇಂಟರ್ನೆಟ್​ ಸ್ಥಗಿತಗೊಳಿಸುವುದಕ್ಕೂ ಮುನ್ನ ಶುಕ್ರವಾರ ತಡರಾತ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಫುಲೆ ಮೀಸಲಾತಿ ಸಮಿತಿಯ ಹಲವು ಜಿಲ್ಲೆಗಳ ಪ್ರತಿನಿಧಿಗಳನ್ನು ಕರೆಸಿ ಮಾತುಕತೆ ನಡೆಸಲಾಯಿತು. ಅವರಲ್ಲಿ ಪಪ್ಪು ಸೈನಿ ಪ್ರಧಾನ್ ಆಳ್ವಾರ್, ಮಂಗಿಲಾಲ್ ಸೈನಿ, ಚುಟ್ಟನ್ ಲಾಲ್ ಸೈನಿ ಜೈಪುರ ಮತ್ತು 15 ಜನರ ನಿಯೋಗವು ವಿಭಾಗೀಯ ಆಯುಕ್ತರು, ಪೊಲೀಸ್ ಮಹಾನಿರೀಕ್ಷಕರು ಮತ್ತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆಯ ನಂತರ ಈ ನಿಯೋಗವನ್ನು ಮುರಾರಿ ಲಾಲ್ ಸೈನಿ ಅವರಿಗೂ ಪರಿಚಯಿಸಲಾಯಿತು. ಚರ್ಚೆಯ ನಂತರ, ಕೆಲವು ಅಂಶಗಳ ಬಗ್ಗೆ ಒಮ್ಮತಕ್ಕೆ ಬರಲಾಗಿದೆ. ನಿಯೋಗವು ಶುಕ್ರವಾರ ತಡರಾತ್ರಿ ಪ್ರತಿಭಟನಾ ಸ್ಥಳದಿಂದ ನಿರ್ಗಮಿಸಿತು. ವಾಹನ ಸಂಚಾರವನ್ನು ಆಡಳಿತ ವ್ಯವಸ್ಥೆಯಿಂದ ಸುಗಮಗೊಳಿಸಲಾಗಿದೆ.

ಮಾತುಕತೆಗೆ ಕರೆದ ಸಚಿವರು: ಕಳೆದ ವರ್ಷ ಧರಣಿ ನಿರತರು ನೀಡಿದ್ದ ಬೇಡಿಕೆ ಪತ್ರ ಮತ್ತಿತರ ಬೇಡಿಕೆಗಳ ಕುರಿತು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಲೋಕ್ ರಂಜನ್ ತಿಳಿಸಿದರು. ಸರ್ಕಾರದ ಪರವಾಗಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಟಿಕಾರಾಂ ಜೂಲಿ ಮಾತುಕತೆಗೆ ಕರೆದಿರುವ ವಿಡಿಯೋವನ್ನು ಸಹ ಬಿಡುಗಡೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ಆಡಳಿತ ಸಮುದಾಯದ ಎಲ್ಲ ಜನರು ಹಾಗೂ ಸರ್ಕಾರದ ಉನ್ನತಾಧಿಕಾರಿಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದೆ.

ಇದನ್ನೂ ಓದಿ: ಮೀಸಲಾತಿ ಪ್ರತಿಭಟನೆಯಲ್ಲಿ ಹಿಂಸಾಚಾರ: ಪೊಲೀಸರಿಂದ ಅಶ್ರುವಾಯು ಪ್ರಯೋಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.