ETV Bharat / bharat

ಜೆ-ಕೆ ತನ್ನ ಎಲ್ಲ ನಾಗರಿಕರಿಗೆ ಆಯುಷ್ಮಾನ್ ಭಾರತ್ ಯೋಜನೆ ತಲುಪಿಸುವಲ್ಲಿ ಮೊದಲ ಸ್ಥಾನ : ಅಮಿತ್‌ ಶಾ - ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಸುದ್ದಿ

ಆಯುಷ್ಮಾನ್ ಭಾರತ್ ಯೋಜನೆ ಹೆಸರಿನಲ್ಲಿ ದೇಶಾದ್ಯಂತ PMJAY-SEHAT ಯೋಜನೆಯನ್ನು ಜಾರಿಗೆ ತರಲಾಗಿದೆ. 60 ಕೋಟಿ ಬಡ ಜನರಿಗಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ಸುಮಾರು ಎರಡು ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸುಧಾರಣೆಗಳಾಗುತ್ತಿವೆ..

Ayushman Bharat PMJAY
ಪಿಎಂಜೆ-ಸೆಹತ್ ಯೋಜನೆ
author img

By

Published : Dec 27, 2020, 7:33 AM IST

ನವದೆಹಲಿ : ಜಮ್ಮು ಮತ್ತು ಕಾಶ್ಮೀರ ಜನರಿಗಾಗಿ ಜಾರಿಗೆ ತಂದಿರುವ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎ)-ಸೇಹತ್​​ಗೆ ಶನಿವಾರ ಚಾಲನೆ ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಅಮಿತ್ ಶಾ, ಬಹುಶಃ ಪ್ರತಿಯೊಬ್ಬ ನಾಗರಿಕರೂ ಈ ಯೋಜನೆಯ ಲಾಭ ಪಡೆದ ಮೊದಲ ರಾಜ್ಯ/ಕೇಂದ್ರಾಡಳಿತ ಪ್ರದೇಶ ಅಂದ್ರೆ ಅದು ಮ್ಮು-ಕಾಶ್ಮೀರ ಅಂತಾ ಹೇಳಿದ್ದಾರೆ. ಜಮ್ಮು-ಕಾಶ್ಮೀರ ಹೊರತುಪಡಿಸಿ ದೇಶದ ಉಳಿದ ಭಾಗಗಳಲ್ಲಿ ಆಯುಷ್ಮಾನ್ ಭಾರತ್ ಪಿಎಂಜೆಎವೈ ಬಡವರಿಗೆ ಮಾತ್ರ ಲಭ್ಯವಿದೆ.

PMJAY-SEHAT ಯೋಜನೆಯು ಜಮ್ಮು ಮತ್ತು ಕಾಶ್ಮೀರದೊಂದಿಗೆ ಪ್ರಧಾನ ಮಂತ್ರಿಯ ಬಾಂಧವ್ಯ ಮತ್ತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮಾಡಿದ ಪ್ರಯತ್ನಗಳ ಫಲವಾಗಿದೆ. ಇಂದಿನಿಂದ ಕಾಶ್ಮೀರಿಗರು ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ”ಎಂದು ಶನಿವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪಿಎಂಜೆ-ಸೇಹತ್​ ಯೋಜನೆ ಲಾಂಚಿಂಗ್​ ಮಾಡುವಾಗ ಹೇಳಿದ್ರು.

ಈ ಮಹತ್ವದ ಆರಂಭವು ಮುಂದಿನ ದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಲಿದೆ ಎಂದು ಅಮಿತ್​ ಶಾ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಸುಮಾರು 229 ಸರ್ಕಾರಿ ಮತ್ತು 35 ಖಾಸಗಿ ಆಸ್ಪತ್ರೆಗಳಲ್ಲಿ ಈ ಯೋಜನೆಯ ಸೌಲಭ್ಯ ಪಡೆಯಬಹುದು. ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳು ಸುಮಾರು 5 ಲಕ್ಷದವರೆಗಿನ ಎಲ್ಲಾ ವೆಚ್ಚಗಳನ್ನು ಭಾರತ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತವು ಭರಿಸಲಿದೆ.

ಸುಮಾರು 15 ಲಕ್ಷ ಕುಟುಂಬಗಳು 5 ಲಕ್ಷ ರೂ.ವರೆಗಿನ ಎಲ್ಲಾ ಆರೋಗ್ಯ ಸೌಲಭ್ಯಗಳನ್ನು ಉಚಿತವಾಗಿ ಪಡೆಯಲಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಮಾಹಿತಿ ನೀಡಿದ್ರು. ಈ ಯೋಜನೆಯು ಜಮ್ಮು ಮತ್ತು ಕಾಶ್ಮೀರದ ಆರೋಗ್ಯ ಮೂಲಸೌಕರ್ಯಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದು ಶಾ ಹೇಳಿದ್ರು.

ಪ್ರಧಾನಿ ಮೋದಿ ಸಭೆ ನಡೆಸಿದಾಗಲೆಲ್ಲಾ ಜಮ್ಮು ಮತ್ತು ಕಾಶ್ಮೀರದ ಮೂರು ಪ್ರಮುಖ ವಿಷಯಗಳಿಗೆ ವಿಶೇಷ ಒತ್ತು ನೀಡುತ್ತಾರೆ ಎಂದು ಗೃಹ ಸಚಿವ ಅಮಿತ್ ಶಾ ಇದೇ ವೇಳೆ ಹೇಳಿದರು. "ಒಂದು ಅಭಿವೃದ್ಧಿ, ಅದು ಅತ್ಯಂತ ಬಡ ವ್ಯಕ್ತಿಯನ್ನು ತಲುಪಬೇಕು. ಎಲ್ಲರ ಜೀವನ ಮಟ್ಟವನ್ನು ಹೆಚ್ಚಿಸಲು ನಾವು ಪ್ರಯತ್ನಿಸಬೇಕು. ಎರಡನೆಯದಾಗಿ, ಪ್ರಜಾಪ್ರಭುತ್ವವನ್ನು ತಳಮಟ್ಟಕ್ಕೆ ಕೊಂಡೊಯ್ಯುವುದು.

ತಳಮಟ್ಟವನ್ನು ತಲುಪಿದಾಗ ಜಮ್ಹುರಿಯತ್ (ಪ್ರಜಾಪ್ರಭುತ್ವ) ಯಶಸ್ವಿಯಾಗುತ್ತದೆ. ಜೊತೆಗೆ, ಭದ್ರತೆ ಮತ್ತು ಶಾಂತಿಯಿಂದ ಮಾತ್ರ ಅಭಿವೃದ್ಧಿ ಸಾಧಿಸಬಹುದು. ಆಗಸ್ಟ್ 5 (2019)ರ ನಂತರ, ಈ ಮೂರು ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿದೆ " ಅಂತಾ ಶಾ ತಿಳಿಸಿದ್ರು.

ಇನ್ನು ಆಯುಷ್ಮಾನ್ ಭಾರತ್ ಯೋಜನೆ ಹೆಸರಿನಲ್ಲಿ ದೇಶಾದ್ಯಂತ PMJAY-SEHAT ಯೋಜನೆಯನ್ನು ಜಾರಿಗೆ ತರಲಾಗಿದೆ. 60 ಕೋಟಿ ಬಡ ಜನರಿಗಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ಸುಮಾರು ಎರಡು ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸುಧಾರಣೆಗಳಾಗುತ್ತಿವೆ. ಮತ್ತು ಪಿಎಂಜೆ-ಸೇಹತ್ ಯೋಜನೆಯಡಿ ಈವರೆಗೆ 1.5 ಕೋಟಿ ಜನರಿಗೆ ಚಿಕ್ಕ ಮತ್ತು ದೊಡ್ಡ-ದೊಡ್ಡ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಆಯಾ ಆಸ್ಪತ್ರೆಗಳಲ್ಲಿ ಬಡವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಅಮಿತ್​ ಶಾ ಹೇಳಿದ್ದಾರೆ.

ಇದನ್ನೂ ಓದಿ:ಪ್ರಧಾನಿ ಮೋದಿಯಿಂದ ಇಂದು ವರ್ಷದ ಕೊನೆಯ ಮನ್ ಕಿ ಬಾತ್..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.