ETV Bharat / bharat

ಹರಿದ್ವಾರದಲ್ಲಿ 'ದ್ವೇಷ ಭಾಷಣ' ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಪ್ರಿಯಾಂಕಾ ಗಾಂಧಿ ಒತ್ತಾಯ

ಮಾಜಿ ಪ್ರಧಾನಿ ಹತ್ಯೆ ಮಾಡಲು ಮತ್ತು ವಿವಿಧ ಸಮುದಾಯಗಳ ಜನರ ಮೇಲೆ ಹಿಂಸಾಚಾರ ಎಸಗಲು ಮುಕ್ತವಾಗಿ ಕರೆ ನೀಡಿರುವುದು ನಿಜಕ್ಕೂ ಹೇಯ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್​ ಮಾಡಿದ್ದಾರೆ.

Priyanka Gandhi
ಪ್ರಿಯಾಂಕಾ ಗಾಂಧಿ
author img

By

Published : Dec 24, 2021, 5:19 PM IST

ನವದೆಹಲಿ: ಇತ್ತೀಚೆಗಷ್ಟೇ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ 'ಧರಮ್​​ ಸಂಸದ್‌'ನಲ್ಲಿ 'ದ್ವೇಷ ಭಾಷಣ' ಮಾಡಿದವರ ಮತ್ತು ಹಿಂಸಾಚಾರಕ್ಕೆ ಕರೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಿಯಾಂಕಾ, "ನಮ್ಮ ಗೌರವಾನ್ವಿತ ಮಾಜಿ ಪ್ರಧಾನಿಯನ್ನು ಹತ್ಯೆ ಮಾಡಲು ಮತ್ತು ವಿವಿಧ ಸಮುದಾಯಗಳ ಜನರ ಮೇಲೆ ಹಿಂಸಾಚಾರ ಎಸಗಲು ಮುಕ್ತವಾಗಿ ಕರೆ ನೀಡುವುದು ನಿಜಕ್ಕೂ ಹೇಯವಾಗಿದೆ. ಈ ರೀತಿಯ ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಕೃತ್ಯಗಳು ಸಂವಿಧಾನ ಮತ್ತು ಕಾನೂನನ್ನು ಉಲ್ಲಂಘಿಸುತ್ತವೆ" ಎಂದು ಕಿಡಿ ಕಾರಿದ್ದಾರೆ.

ಏನಿದು ಘಟನೆ?

ಗಾಜಿಯಾಬಾದ್‌ನ ದೇವಾಲಯವೊಂದರ ಪ್ರಧಾನ ಅರ್ಚಕ ಯತಿ ನರಸಿಂಹಾನಂದ ಸರಸ್ವತಿ ಅವರು ಡಿಸೆಂಬರ್ 17 ಮತ್ತು 19ರ ವರೆಗೆ ಹರಿದ್ವಾರದಲ್ಲಿ 'ಧರಮ್ ಸಂಸದ್' (ಧಾರ್ಮಿಕ ಸಂಸತ್ತು) ಹೆಸರಿನ ಸಮಾವೇಶವನ್ನು ಆಯೋಜಿಸಿದ್ದರು.

ಇನ್ನು ಕಾರ್ಯಕ್ರಮದಲ್ಲಿ ಪಾಟ್ನಾದ ಸ್ವಾಮೀಜಿ ಧರ್ಮದಾಸ್ ಮಹಾರಾಜ್, ಬಿಜೆಪಿ ನಾಯಕಿ ಅಶ್ವಿನಿ ಉಪಾಧ್ಯಾಯ ಮತ್ತು ಬಿಜೆಪಿ ಮಹಿಳಾ ಮೋರ್ಚಾ ನಾಯಕಿ ಉದಿತಾ ತ್ಯಾಗಿ ಕೂಡ ಭಾಗವಹಿಸಿದ್ದರು. ಈಗಾಗಲೇ ಯತಿ ನರಸಿಂಹಾನಂದ ಸರಸ್ವತಿ ಅವರ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ. ಆದರೂ ಅವರಿಗೆ ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಲಾಗಿತ್ತು.

  • Such acts violate our constitution and the law of our land. 2/2

    — Priyanka Gandhi Vadra (@priyankagandhi) December 24, 2021 " class="align-text-top noRightClick twitterSection" data=" ">

ಕಾರ್ಯಕ್ರಮದಲ್ಲಿ ಅವರು, ಮುಸ್ಲಿಮರ ವಿರುದ್ಧ ಯುದ್ಧಕ್ಕೆ ಕರೆ ನೀಡಿದ್ದರು. ಉತ್ತಮ ಶಸ್ತ್ರಾಸ್ತ್ರಗಳನ್ನು ಹೊಂದಿರುವವರು ಯುದ್ಧದಲ್ಲಿ ಗೆಲ್ಲುತ್ತಾರೆ ಎಂದ ಅವರು 2029ರಲ್ಲಿ ಮುಸ್ಲಿಂ ವ್ಯಕ್ತಿ ಪ್ರಧಾನಿಯಾಗುವುದನ್ನು ತಡೆಯಲು ಹಿಂದೂಗಳು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು. 'ಶಸ್ತ್ರಮೇವ ಜಯತೇ' ಎಂದು ಘೋಷಣೆ ಕೂಗುತ್ತಾ, 'ನಮ್ಮ ಧರ್ಮಕ್ಕಾಗಿ ನಾವು ಸಾಯುತ್ತೇವೆ ಮತ್ತು ಅಗತ್ಯವಿದ್ದರೆ, ಅದಕ್ಕಾಗಿ ಕೊಲ್ಲುತ್ತೇವೆ' ಎಂದು ಜನರಲ್ಲಿ ಪ್ರತಿಜ್ಞೆ ಮಾಡಲು ಕೇಳಿದ್ದರು.

ಇದನ್ನೂ ಓದಿ: 2029ರಲ್ಲಿ ದೇಶದಲ್ಲಿ ಹಿಂದೂಗಳಲ್ಲದವರು ಪ್ರಧಾನಿಗಳಾಗುತ್ತಾರೆ: ಹರಿದ್ವಾರದ ಧರ್ಮ ಸಂಸದ್ ಭವಿಷ್ಯ

ಮನಮೋಹನ್ ಸಿಂಗ್ ಹತ್ಯೆ ಬಗ್ಗೆ ಬಹಿರಂಗ ಹೇಳಿಕೆ?

ಅಷ್ಟೇ ಅಲ್ಲ, ಧರ್ಮದಾಸ್ ಮಹಾರಾಜ್ ಅವರು ಸಂಸತ್ತಿನಲ್ಲಿ ಮಾಜಿ ಪ್ರಧಾನಿ ಅವರ ಹತ್ಯೆಯನ್ನು ಬಹಿರಂಗವಾಗಿ ಪ್ರತಿಪಾದಿಸುತ್ತಿರುವುದು ಕಂಡು ಬಂದಿದೆ. "ನಾನು ಸಂಸದನಾಗಿರಬೇಕಿತ್ತು. ಆಗ ನಾನು ರಿವಾಲ್ವರ್ ಹಿಡಿದುಕೊಂಡು ನಾಥೂರಾಂ ಗೋಡ್ಸೆ ಆಗುತ್ತಿದ್ದೆ ಮತ್ತು ಸಂಸತ್ತಿನ ಒಳಗೆ ಎಲ್ಲ ಆರು ಗುಂಡುಗಳನ್ನು ಅವನೊಳಗೆ (ಮನಮೋಹನ್ ಸಿಂಗ್) ನುಗ್ಗಿಸುತ್ತಿದ್ದೆ" ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇದೊಂದು 'ದ್ವೇಷ ಭಾಷಣದ ಸಮಾವೇಶ' ಎಂದು ಕಿಡಿಕಾರಿ ಕಾಂಗ್ರೆಸ್ ಮತ್ತು ಟಿಎಂಸಿ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರು ಇದನ್ನು ಖಂಡಿಸಿದ್ದಾರೆ. ತೃಣಮೂಲ ಕಾಂಗ್ರೆಸ್​ನ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರು ಧರಮ್​​ ಸಂಸದ್​ನ ಸಂಘಟಕರು ಮತ್ತು ಭಾಷಣಕಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಹರಿದ್ವಾರ ಜಿಲ್ಲೆಯ ಜ್ವಾಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಐಪಿಸಿ 153ಎ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಲಿದ್ದಾರೆ. ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ಉತ್ತರಾಖಂಡ ಡಿಜಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.