ETV Bharat / bharat

ಎರಡನೇ ಮಗು ಪಡೆಯಲು ಮುಂದಾದರಾ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್? - etvbharatkannada

2018ರ ಡಿಸೆಂಬರ್‌ನಲ್ಲಿ ಜೋಧ್‌ಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೋಪ್ರಾ ಮತ್ತು ಜೋನಾಸ್ ಅವರು ಬಾಡಿಗೆ ತಾಯ್ತನದ ಮೂಲಕ ತಮ್ಮ ಎರಡನೇ ಮಗುವನ್ನು ಹೊಂದಲು ಯೋಜಿಸುತ್ತಿದ್ದಾರಂತೆ.

Priyanka Chopra, Nick Jonas to welcome second baby?

author img

By

Published : Jul 26, 2022, 7:22 PM IST

ಹೈದರಾಬಾದ್ (ತೆಲಂಗಾಣ): ತಾರೆ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಅಮೆರಿಕದ ಪತಿ ನಿಕ್ ಜೋನಾಸ್​ ಅವರಿಗೆ ಈಗಾಗಲೇ ಮಗುವಾಗಿದ್ದು, ಆ ಮಗುವನ್ನು ಇನ್ನೂ ಜಗತ್ತಿಗೆ ಪರಿಚಯಿಸಿಲ್ಲ. ಇದರ ನಡುವೆ ದಂಪತಿಗಳು ಎರಡನೇ ಮಗು ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ವರದಿಗಳು ವೈರಲ್ ಆಗುತ್ತಿವೆ.

2018ರ ಡಿಸೆಂಬರ್‌ನಲ್ಲಿ ಜೋಧ್‌ಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೋಪ್ರಾ ಮತ್ತು ಜೊನಾಸ್ ಅವರು ಬಾಡಿಗೆ ತಾಯ್ತನದ ಮೂಲಕ ತಮ್ಮ ಎರಡನೇ ಮಗುವನ್ನು ಹೊಂದಲು ಯೋಜಿಸುತ್ತಿದ್ದಾರೆ ಎಂದು ವರದಿಯಾಗಿದೆ. ನಿಕ್ ತಮ್ಮ ಮಕ್ಕಳಲ್ಲಿ ದೀರ್ಘ ವಯಸ್ಸಿನ ಅಂತರವನ್ನು ಹೊಂದಲು ಬಯಸುವುದಿಲ್ಲವಂತೆ ಈ ಕಾರಣಕ್ಕೆ ಎರಡನೇ ಮಗುವನ್ನು ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

ಬಾಡಿಗೆ ತಾಯ್ತನದಲ್ಲಿಯೇ ತಮ್ಮ ಮೊದಲ ಹೆಣ್ಣು ಮಗುವಿಗೆ ಪ್ರಿಯಾಂಕಾ ಮತ್ತು ನಿಕ್ ಪೋಷಕರಾಗಿದ್ದಾರೆ. ಜನವರಿಯಲ್ಲಿ, ದಂಪತಿಗಳು ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದರು. ದಂಪತಿಗಳು ತಮ್ಮ ಮಗಳ ಮುಖವನ್ನು ಇಲ್ಲಿಯವರೆಗೆ ಜಗತ್ತಿಗೆ ಬಹಿರಂಗಪಡಿಸಿಲ್ಲ. ಈವರೆಗೆ ವೈರಲ್​ ಆದ ಫೋಟೋಗಳಲ್ಲೂ ಸಹ ಇಮೋಜಿಗಳ ಮೂಲಕ ಮಗುವಿನ ಮುಖ ಮರೆಮಾಚಿದ್ದಾರೆ.

ಇನ್ನು ಸಿನಿಮಾ ವಿಷಯಕ್ಕೆ ಬಂದರೆ ಚೋಪ್ರಾ ಜೋನಾಸ್ ಕೊನೆಯದಾಗಿ ಹಾಲಿವುಡ್ ಚಲನಚಿತ್ರ ದಿ ಮ್ಯಾಟ್ರಿಕ್ಸ್ ರಿಸರ್ರೆಕ್ಷನ್ಸ್‌ನಲ್ಲಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡರು. ಇದು ಡಿಸೆಂಬರ್ 2021 ರಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಅವರ ಮುಂಬರುವ ಚಿತ್ರಗಳಲ್ಲಿ ಜಿಮ್ ಸ್ಟ್ರೌಸ್ ನಿರ್ದೇಶನದ ರೋಮ್ - ಕಾಮ್ ಟೆಕ್ಸ್ಟ್ ಫಾರ್ ಯೂ, ಅಮೆಜಾನ್ ಥ್ರಿಲ್ಲರ್ ಸರಣಿ ಸೇರಿವೆ.

ಅದರಂತೆ ಚೋಪ್ರಾ ಜೋನಾಸ್ ಹಿಂದಿ ಚಲನಚಿತ್ರ ಜೀ ಲೇ ಜರಾದಲ್ಲಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಫರ್ಹಾನ್ ಅಖ್ತರ್ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಕೆಜಿಎಫ್​ 2 ಜೊತೆ ಆಗುತ್ತಿದ್ದ ಘರ್ಷಣೆಯಿಂದ ನಮ್ಮ ಸಿನಿಮಾ ತಪ್ಪಿಸಿಕೊಂಡಿದೆ: ಅಮೀರ್ ಖಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.