ಬಾರ್‌ಗಢ(ಒಡಿಶಾ): ತನ್ನ ಹೆಂಡತಿಯನ್ನು ಕೊಂದು ಜೈಲು ಸೇರಿದ್ದ ಆರೋಪಿಯೊಬ್ಬ, ನೇಣು ಬಿಗಿದುಕೊಂಡು ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೂ ಮೊದಲು ಆತ ತನ್ನ ಅಂಗೈ ಮೇಲೆ 'ಐ ಲವ್ ಯೂ ಮಂಜು' ಎಂದು ತನ್ನ ಹೆಂಡತಿಯ ಹೆಸರನ್ನೇ ಬರೆದುಕೊಂಡು ಸಾವಿಗೀಡಾದ ಅಚ್ಚರಿಯ ಘಟನೆ ಒಡಿಶಾದಲ್ಲಿ ಬೆಳಕಿಗೆ ಬಂದಿದೆ.
ಬಾರ್‌ಗಢ ಜಿಲ್ಲೆಯ ಮೋಹಿತ್ ರೌತ್(35) ಮೃತ ವ್ಯಕ್ತಿ. ಕೆಲ ದಿನಗಳ ಹಿಂದೆ ಮೋಹಿತ್ ತನ್ನ ಹೆಂಡತಿಯನ್ನು ವರದಕ್ಷಿಣೆ ಸಂಬಂಧ ಕೊಲೆ ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದ. ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು.
ಹೆಂಡತಿಯ ಮೇಲಿದ್ದ ಪ್ರೀತಿಯೋ ಅಥವಾ ಆಕೆಯನ್ನು ತಾನು ಕೊಂದೆನಲ್ಲ ಎಂಬ ಪಶ್ಚಾತ್ತಾಪಕ್ಕೋ ಪತ್ನಿಯ ಹೆಸರನ್ನು 'ಐ ಲವ್ ಯೂ ಮಂಜು' ಎಂದು ಕೈ ಮೇಲೆ ಬರೆದುಕೊಂಡು, ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ತಕ್ಷಣವೇ ಆತನನ್ನು ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಮೋಹಿತ್ ಇಹಲೋಕ ತ್ಯಜಿಸಿದ್ದ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಸಂಬಂಧ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೊಂದೆಡೆ ಸಾವಿಗೀಡಾದ ಪತ್ನಿಯ ಕೈ ಮೇಲೂ 'ಐ ಲವ್ ಯೂ ಮೋಹಿತ್' ಎಂದು ಬರೆದಿರುವುದು ಪತ್ತೆಯಾಗಿದೆ.
ಓದಿ: PSI ನೇಮಕಾತಿ ಹಗರಣ: ಡ್ಯಾಂಗೆ ಮೊಬೈಲ್ ಎಸೆದ ಕಿಂಗ್ಪಿನ್.. ಹುಡುಕಾಟಕ್ಕೆ ನೀರಿಗಿಳಿದ ಸಿಐಡಿ!