ನಾಗ್ಪುರ (ಮಹಾರಾಷ್ಟ್ರ): ಮಹಾರಾಷ್ಟ್ರದ ನಾಗ್ಪುರ ಮತ್ತು ಛತ್ತೀಸ್‌ಗಢದ ಬಿಲಾಸ್‌ಪುರ ನಡುವೆ ಸಂಚರಿಸಲಿರುವ ಆರನೇ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು. ರೈಲಿಗೆ ಹಸಿರು ನಿಶಾನೆ ತೋರಿದ ನಂತರ ಪ್ರಧಾನಿ ಮೋದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರತ್ತ ಕೈ ಬೀಸಿದರು. ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿದ ಆರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಇದಾಗಿದೆ.
ಇದಕ್ಕೂ ಮುನ್ನ ಇಂದು ಮುಂಜಾನೆ ನಾಗ್ಪುರಕ್ಕೆ ಆಗಮಿಸಿದ ಪ್ರಧಾನಿಯವರನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ, ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬರಮಾಡಿಕೊಂಡರು.
ಇದರ ನಂತರ ನಾಗ್ಪುರದಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭದಲ್ಲಿ ಅವರು ನಾಗ್ಪುರ ರೈಲು ನಿಲ್ದಾಣ ಮತ್ತು ಅಜ್ನಿ ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಕ್ರಮವಾಗಿ ಸುಮಾರು 590 ಕೋಟಿ ಮತ್ತು 360 ಕೋಟಿ ರೂಪಾಯಿ ವೆಚ್ಚದ ಮರುಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸರ್ಕಾರಿ ನಿರ್ವಹಣಾ ಡಿಪೋ, ಅಜ್ನಿ (ನಾಗ್ಪುರ) ಮತ್ತು ನಾಗ್ಪುರದ ಕೊಹ್ಲಿ-ನಾರ್ಖರ್ ವಿಭಾಗ-ಇಟಾರ್ಸಿ ಮೂರನೇ ಸಾಲಿನ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಗಳನ್ನು ಕ್ರಮವಾಗಿ ಸುಮಾರು 110 ಕೋಟಿ ಮತ್ತು ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ನಾಗ್ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಒನ್ ಹೆಲ್ತ್ (NIO) ಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದ್ದು, 'ಒಂದು ಆರೋಗ್ಯ' ವಿಧಾನದ ಅಡಿಯಲ್ಲಿ ದೇಶದಲ್ಲಿ ಚಕಿತ್ಸಾ ಸಾಮರ್ಥ್ಯ ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸುವತ್ತ ಪ್ರಮುಖ ಹೆಜ್ಜೆಯಾಗಿದೆ.
'ಒಂದು ಆರೋಗ್ಯ' ವಿಧಾನವು ಮಾನವನ ಆರೋಗ್ಯವು ಪ್ರಾಣಿಗಳ ಆರೋಗ್ಯ ಮತ್ತು ಪರಿಸರದೊಂದಿಗೆ ಸಂಪರ್ಕ ಹೊಂದಿದೆ ಎಂಬುದನ್ನು ಮತ್ತು ಮಾನವರನ್ನು ಬಾಧಿಸುವ ಹೆಚ್ಚಿನ ಸಾಂಕ್ರಾಮಿಕ ರೋಗಗಳು ಪ್ರಕೃತಿಯಲ್ಲಿ ಪ್ರಾಣಿಯಿಂದ ಮನುಷ್ಯನಿಂದ ಬರುತ್ತವೆ ಎಂಬುದನ್ನು ಗುರುತಿಸುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಒನ್ ಹೆಲ್ತ್ ಸಂಸ್ಥೆಯು 110 ಕೋಟಿ ರೂಪಾಯಿಗಿಂತ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಲಿದೆ.
ಇದನ್ನೂ ಓದಿ: ನಾಗರ ಹಾವು ರಕ್ಷಿಸಲು ಹೋಗಿ ದಿಢೀರ್ ಬ್ರೇಕ್ ಹಾಕಿದ ಲಾರಿ ಚಾಲಕ; ಸರಣಿ ಅಪಘಾತ!